
ಬೆಂಗಳೂರು,ಜೂ.23:ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 200 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ 2025 – 26ನೇ ಸಾಲಿನ ‘DG-IGP ಪ್ರಶಂಸನಾ ಪದಕ’ ಘೋಷಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ ಸಲೀಂ ಆದೇಶ ಹೊರಡಿಸಿದ್ದಾರೆ.
ಐಜಿಪಿ ಎನ್.ಸತೀಶ್ಕುಮಾರ್, ಹುಬ್ಬಳ್ಳಿ-ಧಾರವಾಡ ಕಮಿಷನರ್ ಎನ್. ಶಶಿಕುಮಾರ್, ಸಿಐಡಿ ಡಿಐಜಿ ಡಾ.ಭೀಮಾಶಂಕರ್ ಗುಳೇದ್, ಡಿಐಜಿ ಶಾಂತನು ಸಿನ್ಹಾ ಸೇರಿದಂತೆ 17 ಮಂದಿ ಐಪಿಎಸ್ ಅಧಿಕಾರಿಗಳಿಗೂ ಪದಕ ಗೌರವ ಸಿಕ್ಕಿದೆ.
ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಮಚ್ಚೀಂದ್ರ ಹಾಕೆ, ಆಗ್ನೇಯ ವಿಭಾಗದ ಡಿಸಿಪಿ ಮೊಹಮದ್ ಎಂ. ಸುಜೀತಾ, ಸಂಚಾರ ಉತ್ತರ ವಿಭಾಗದ ಡಿಸಿಪಿ ಜಯಪ್ರಕಾಶ್, ಆಡಳಿತ ವಿಭಾಗದ ಡಿಸಿಪಿ ಪದ್ಮಿನಿ ಸಾಹೋ, ಕಮಾಂಡ್ ಸೆಂಟರ್ ಡಿಸಿಪಿ ಕ್ಷಮಾ ಮಿಶ್ರಾ, ಪೂರ್ವವಿಭಾಗದ ಡಿಸಿಪಿ ಸಾಹಿಲ್ ಬಾಗ್ಲಾ, ಸಿಸಿಬಿ ಡಿಸಿಪಿ-2 ರಾಜಾ ಇಮಾಮ್ ಕಾಸೀಂ ಅವರು ಪದಕಕ್ಕೆ ಭಾಜನರಾಗಿದ್ದಾರೆ. ಅಲ್ಲದೇ ರಾಜ್ಯದ ವಿವಿದೆಡೆ ಕಾರ್ಯನಿರ್ವಹಿಸುತ್ತಿರುವ ಎಸ್ಪಿ, ಎಸಿಪಿ/ ಡಿವೈಎಸ್ಪಿಗಳು, ಕೆಎಸ್ಆರ್ಪಿ ಕಮಾಂಡೆಂಟ್ಗಳು, ಇನ್ಸ್ಪೆಕ್ಟರ್ಗಳು, ಪಿಎಸ್ಐ, ಎಎಸ್ಐ ಹಾಗೂ ಕಾನ್ಸ್ಟೆಬಲ್ ಹಂತದವರೆಗೆ 200 ಮಂದಿಗೆ ಪದಕ ಘೋಷಿಸಲಾಗಿದೆ.
ಉಡುಪಿ ಜಿಲ್ಲೆಯ 5 ಜನ ಪೊಲೀಸ್ ಸಿಬ್ಬಂದಿಗಳಿಗೆ ಡಿಜಿ ಪದಕ ಸಿಕ್ಕಿದ್ದು,ಪಡುಬಿದ್ರಿ ಪೊಲೀಸ್ ಠಾಣೆಯ ASI
ರಾಜೇಶ್ ಪಿ,ಉಡುಪಿ ಜಿಲ್ಲಾ ಸಶಸ್ತ್ರ ಪಡೆಯ ARSI ಸುಧಾಕರ,ಉಡುಪಿ ಮೆಸ್ಕಾಂ ಜಾಗೃತದಳದ HC
ಸಿ ವಿಜಯಕುಮಾರ್, ಜಿಲ್ಲಾ ಸಶಸ್ತ್ರ ಪಡೆಯ AHC
ನಾಗರಾಜ ಪ್ರಭು,ಉಡುಪಿ ನಗರ ಠಾಣೆ PC ಶಿವಕುಮಾರ್ ಸೇರಿ ಐವರಿಗೆ ಪದಕ ಲಭಿಸಿದೆ.



.
.
.
.
.
.
.
.
.
.
.
.
.
.
.
.
.
.
.
.
