
ಅಜೆಕಾರು,ಜೂ.23: ಅಂತರರಾಷ್ಟ್ರೀಯ ಯೋಗ ದಿನದ ಪ್ರಯುಕ್ತವಾಗಿ ಅಜೆಕಾರು ಜ್ಞಾನ ಸುಧಾ ಪದವಿಪೂರ್ವ ಕಾಲೇಜು ಮತ್ತುಅಜೆಕಾರು ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ಪದ್ಮನಗರ ಇಲ್ಲಿ ನಡೆದಂತಹ ಯೋಗ ದಿನಾಚರಣೆಯಲ್ಲಿ ಆರೋಗ್ಯಕರ ಜೀವನಕ್ಕಾಗಿ ಯೋಗ ಎಂಬ ಘೋಷ ವಾಕ್ಯದೊಂದಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ವಿಶ್ವದ ಸಂಸ್ಕೃತಿ ಪರಂಪರೆಗೆ ಭಾರತ ಕೊಟ್ಟ ಅತ್ಯುತ್ತಮ ಕೊಡುಗೆ ಎಂದರೆ ಯೋಗ. ನಮ್ಮ ಪ್ರಾಚೀನ ಋಷಿಮುನಿಗಳ ಸಾವಿರಾರು ವರ್ಷಗಳ ಸಾಧನೆಯ ಫಲವಾಗಿ ಆವಿಷ್ಕಾರಗೊಂಡಿದ್ದೇ
ಯೋಗ. ಯೋಗವು ಆರೋಗ್ಯಕರ ಜೀವನದ ಅಡಿಪಾಯವಾಗಿದೆ. ಮಾನವನಿಗೆ ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯವು ಅತ್ಯಗತ್ಯವಾಗಿದ್ದು ,ಅದಕ್ಕಾಗಿ ಈ ಯೋಗವು ಸಹಾಯ ಮಾಡುತ್ತದೆ. ಇದು ನಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟು ಕೊಳ್ಳಲು, ನಮ್ಮ ದೇಹವು ಆರೋಗ್ಯ ಪೂರ್ಣವಾಗಿ ಸುಸ್ಥಿರತೆಯಲ್ಲಿರಲು, ಸಹಾಯಮಾಡುತ್ತದೆ. ಯೋಗ ಎಂಬುದು ಕೇವಲ ಒಂದು ದಿನದ ಆಚರಣೆ ಆಗಿರದೆ, ಜೀವನದ ಅವಿಭಾಜ್ಯ ಅಂಗವನ್ನಾಗಿಸಬೇಕು. ಎಂದು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಡಾ. ಚಂದ್ರಿಕಾ ಕಿಣಿ ಅಭಿಪ್ರಾಯ ಪಟ್ಟರು. 9ನೇ ತರಗತಿಯ ವಿದ್ಯಾರ್ಥಿಯಾದ ಕುಮಾರ್ ಸೋಹನ್ ,ವಿಶ್ವ ಯೋಗ ದಿನಾಚರಣೆಯ ಮಹತ್ವದ ಕುರಿತಾಗಿ ತಿಳಿಸಿದನು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಯೋಗ ಪಟು ವಿದ್ಯಾರ್ಥಿನಿ ಕುಮಾರಿ ಅನ್ವಿ ಅಂಚನ್ ರವರಿಗೆ ಸನ್ಮಾನಿಸಲಾಯಿತು ಹಾಗೂ ಇವರಿಂದ ಯೋಗ ಪ್ರಸ್ತುತತೆಯು ನೆರವೇರಿತು. ಉಪ ಪ್ರಾಂಶುಪಾಲರಾದ ಆರತಿ ಸ್ವಾಗತಿಸಿ, ಪ್ರಾಂಶುಪಾಲರಾದ ಸಂತೋಷ್ ಪೂಜಾರಿ ವಂದಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಗೂ ಯೋಗ ಗೀತೆಯನ್ನು ಹಾಡಿದರು. ವಿದ್ಯಾರ್ಥಿನಿ ಕುಮಾರಿ ಸಾನ್ವಿ ಶೆಟ್ಟಿ, ಕಾರ್ಯಕ್ರಮ ನಿರೂಪಿಸಿದರು.
ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ಮತ್ತು ಮಣಿಪಾಲ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾ ನಗರದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪೂರ್ವ ವಿದ್ಯಾರ್ಥಿನಿ, ಮಾಹೆಯ ಯೋಗ ಕೇಂದ್ರದ ಅಸಿಸ್ಟೆಂಟ್ ಪ್ರೊಫೆಸರ್ ಡಾ.ಆತ್ಮಿಕ ಶೆಟ್ಟಿಯವರು ಯೋಗದ ಉಪಯೋಗಗಳನ್ನು ತಿಳಿಸುತ್ತಾ ಮಾನಸಿಕ ಹಾಗೂ ಶಾರೀರಿಕ ಸದೃಢತೆಯನ್ನು ಕಾಪಾಡಲು ಯೋಗವು ಅತೀ ಅವಶ್ಯ, ವಿದ್ಯಾರ್ಥಿಗಳು ಯೋಗಾಭ್ಯಾಸದೊಂದಿಗೆ ಆರೋಗ್ಯಕರ ಆಹಾರ ಬಳಸುವುದರ ಕಡೆಯೂ ಗಮನ ಹರಿಸಬೇಕು ಎಂದರು. ನಂತರ ವಿದ್ಯಾರ್ಥಿಗಳಿಗೆ ಯೋಗ ಪ್ರಾತ್ಯಕ್ಷಿಕೆಯನ್ನು ನಡೆಸಿದರು.
ಈ ಸಂದರ್ಭದಲ್ಲಿ ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗಣೇಶ್ ಶೆಟ್ಟಿ , ಜೆ.ಇ.ಇ/ನೀಟ್ ಫೌಂಡೇಶನ್ ಸ್ಟ್ಯೂಡೆಂಟ್ ಕೋರ್ಡಿನೇಟರ್ ಶಮಿತ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರಾದ ಅರುಣ್ ಕುಮಾರ್ ಉಪಸ್ಥಿತರಿದ್ದರು. ಶಿಕ್ಷಕಿ ದೀಪ್ತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.



.
.
.
.
.
.
.
.
.
.
.
.
.
.
.
.
.
.
.
.
