
ಕಾರ್ಕಳ,ಜೂ.23: ಅಂಬೇಡ್ಕರ್ ಭವನ ನಿರ್ವಹಣಾ ಸಮಿತಿಯ ಸದಸ್ಯರ ಆಯ್ಕೆ ಸಂಪೂರ್ಣವಾಗಿ ಅನಧಿಕೃತವಾಗಿದ್ದು ಕರ್ನಾಟಕ ಭೀಮ್ ಸೇನೆಯು ಇದನ್ನು ಎಂದಿಗೂ ಒಪ್ಪುವುದಿಲ್ಲ.ಅಂಬೇಡ್ಕರ್ ಭವನದ ಅಭಿವೃದ್ಧಿ ಹಾಗೂ ನಿರ್ಮಾಣ ಬೆಳವಣಿಗೆಗೆ ಶ್ರಮಿಸಿದ ದಲಿತ ಸಮುದಾಯದ ನಾಯಕರು ಇದ್ದಾರೆ. ಅವರನ್ನು ಕಡೆಗಣಿಸಲಾಗಿದ್ದು, ಸಮಿತಿಯ ನೇಮಕಾತಿ ಸಂಪೂರ್ಣವಾಗಿ ರಾಜಕೀಯ ಪ್ರೇರಿತವಾಗಿದೆ ಎಂದು ದಲಿತ ಮುಖಂಡ ಸುಧಾಕರ್ ದಾನಶಾಲೆ ಆರೋಪಿಸಿದ್ದಾರೆ.
ಈ ಸಮಿತಿಯಲ್ಲಿ ಇರುವ ಮೂರು ಜನ ಸದಸ್ಯರೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಾಗಿದ್ದಾರೆ. ಅಲ್ಲದೆ ತಾಲೂಕಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇರುವ ಸಮುದಾಯವನ್ನು (ಆದಿ ದ್ರಾವಿಡ) ನಿರ್ಲಕ್ಷಿಸಿದ್ದೀರಿ.ಒಂದು ವೇಳೆ ಆಯ್ಕೆ ಪ್ರಕ್ರಿಯೆ ಸರ್ಕಾರದ್ದಾದರೆ ಆದೇಶದ ಪ್ರತಿಯನ್ನು ಬಹಿರಂಗ ಪಡಿಸಲು ಹಿಂಜರಿಕೆ ಏಕೆ? ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.



.
.
.
.
.
.
.
.
.
.
.
.
.
.
.
.
.
.
.
.
