
ಕಾರ್ಕಳ,ಜೂ.25 : ಯೋಜನಾ ನಿರ್ದೇಶಕರು ಕಾರ್ಕಳ ಪುರಸಭೆಯಲ್ಲಿ ರಾತ್ರಿ ವೇಳೆ ಇಲಾಖಾ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಹಿಳಾ ಸಿಬ್ಬಂದಿಗಳಿಗೆ ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡ ವಿಚಾರದಲ್ಲಿ ಉಡುಪಿ ಜಿಲ್ಲಾ ಯೋಜನಾ ನಿರ್ದೇಶಕರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ ಶೆಟ್ಟಿಯವರು ಬುಧವಾರ ಸಾಯಂಕಾಲ 5.15ಕ್ಕೆ ಕಾರ್ಕಳ ಪುರಸಭೆ ಕಚೇರಿಗೆ ಬಂದು ದಿಢೀರ್ ಇಲಾಖಾ ಪ್ರಗತಿ ಪರಿಶೀಲನೆಗೆ ಮುಂದಾದರು. ಮುಖ್ಯಾಧಿಕಾರಿ ಸೇರಿದಂತೆ ಪುರಸಭೆಯ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಪ್ರಗತಿ ಕುರಿತು ಸಭೆಯಲ್ಲಿ ಪ್ರಸ್ತಾಪಿಸಿದರು.
ಈ ವೇಳೆ ಕಾರ್ಕಳದಲ್ಲಿ ಕಸ ವಿಲೇವಾರಿ, ಸ್ವಚ್ಚತೆ ವಿಚಾರದಲ್ಲಿ ಮಹಿಳಾ ಸಿಬ್ಬಂದಿ ಸಭೆಯಲ್ಲಿ ಮಾಹಿತಿ ನೀಡಿ, ನಮ್ಮಲ್ಲಿ ಪೌರ ಕಾರ್ಮಿಕರ ಕೊರತೆಯಿದ್ದು,ಸಧ್ಯಕ್ಕೆ ಇರುವ ಪೌರ ಕಾರ್ಮಿಕರನ್ನೇ ಬಳಸಿಕೊಂಡು ನಗರದ ಸ್ವಚ್ಛತೆ, ಮನೆ ಮನೆ ಕಸ ಸಂಗ್ರಹಣೆ ಹಾಗೂ ಚರಂಡಿ ಸ್ವಚ್ಛತೆ ಮಾಡಲಾಗ್ತುತಿದೆ ಎಂದು ವಿವರಣೆ ನೀಡುತ್ತಿದ್ದಾಗ,ಸುಬ್ರಹ್ಮಣ್ಯ ಶೆಟ್ಟಿ ಏಕಾಎಕಿ ಮಹಿಳಾ ಸಿಬ್ಬಂದಿಗೆ ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡು ನಿನ್ನಿಂದ ಸಾಧ್ಯವಾದರೆ ಕೆಲಸ ಮಾಡು ಇಲ್ಲವಾದರೆ ನಿನ್ನನ್ನು ಇಲ್ಲಿಂದ ಓಡಿಸ್ತೇನೆ ಎಂದು ಏರು ಧ್ವನಿಯಲ್ಲಿ ಬೆದರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು,ಕೆಳಹಂತದ ಅಧಿಕಾರಿಗಳನ್ನು ನಡೆಸಿಕೊಂಡ ರೀತಿಯ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಇಂಜಿನಿಯರಿಂಗ್ ವಿಭಾಗದ ಕಂಪ್ಯೂಟರ್ ನಲ್ಲಿರುವ ಕಡತಗಳನ್ನು ಉದ್ದೇಶ ಪೂರ್ವಕವಾಗಿ ಡಿಲೀಟ್ ಮಾಡಲಾಗಿದೆ ಎಂದು ಕಿರಿಯ ಅಭಿಯಂತರರು ಪ್ರಸ್ತಾಪಿಸಿದಾಗ,ಈ ಸಂದರ್ಭದಲ್ಲಿ ದೂರು ನೀಡಿದ ಮಹಿಳಾ ಕಿರಿಯ ಅಭಿಯಂತರಯನ್ನೇ ತರಾಟೆಗೆ ತೆಗೆದುಕೊಂಡ ಯೋಜನಾ ನಿರ್ದೇಶಕ ಸುಬ್ರಮಣ್ಯ ಶೆಟ್ಟಿ ,ನಿಮ್ಮನ್ನು ಮನೆಗೆ ಕಳಿಸುವುದಾಗಿ ಏಕವಚನದಲ್ಲಿ ಬೆದರಿಕೆ ಹಾಕಿ ಅಪಮಾನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇಷ್ಟಕ್ಕೆ ಸುಮ್ಮನಾಗದ ಯೋಜನಾ ನಿರ್ದೇಶಕ, ಬೀದಿ ನಾಯಿಗಳನ್ನು ಹಿಡಿಯುವ ವಿಚಾರ ಪ್ರಸ್ತಾಪಿಸಿ ನಾಯಿ ಹಿಡಿಯಲು ಕೈಗೊಂಡ ಕ್ರಮಗಳು ಕುರಿತು ಮಾಹಿತಿ ಕೇಳಿದಾಗ, ಟೆಂಡರ್ ಕರೆದರೂ ಬೀದಿ ನಾಯಿಗಳನ್ನು ಹಿಡಿಯಲು ಯಾರೂ ಮುಂದೆ ಬರುತ್ತಿಲ್ಲ ಎಂದಾಗ, ಪೌರ ಕಾರ್ಮಿಕರನ್ನು ನಾಯಿ ಹಿಡಿಯಲು ಕಳಿಸುವಂತೆ ಕಟ್ಟಪ್ಪಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ತಮ್ಮ ಇಲಾಖೆಗಳ ಸಮಸ್ಯೆಗಳ ಕುರಿತು ಪ್ರಸ್ತಾಪಿಸಿದ ಅಧಿಕಾರಿಗಳ ವಿರುದ್ಧವೇ ಶಿಸ್ತು ಕ್ರಮದ ಎಚ್ಚರಿಕೆ ನೀಡಿ ನೋಟೀಸ್ ಜಾರಿ ಮಾಡುವುದಾಗಿ ಎಚ್ಚರಿಕೆ ನೀಡಿ,
ಇದ್ದಬದ್ದ ಅಧಿಕಾರಿಗಳ ವಿರುದ್ಧ ಯದ್ವಾತದ್ವಾ ರೇಗಾಡಿದ ಯೋಜನಾ ನಿರ್ದೇಶಕರ ಸಭೆ ರಾತ್ರಿ 8.30 ದಾಟಿದರೂ ಮುಗಿಯುವ ಲಕ್ಷಣ ಮಾತ್ರ ಕಂಡುಬರಲಿಲ್ಲ.
ಇತ್ತ ಪುರಸಭೆ ಸಿಬ್ಬಂದಿಗಳು ರಾತ್ರಿ 8.30 ಆದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಅವರ ಮನೆಯವರು ಕರೆ ಮಾಡಿದರೂ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಗಾಬರಿಯಾಗಿ ಕೆಲವರು ನೇರವಾಗಿ ಪುರಸಭೆ ಕಚೇರಿಗೆ ದೌಡಾಯಿಸಿದರು.ರಾತ್ರಿವೇಳೆ ಸಭೆ ನಡೆಸುತ್ತಿದ್ದ ಯೋಜನಾ ನಿರ್ದೇಶಕರ ನಡೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದಾಗ ಏಕಾಎಕಿ ಸುಬ್ರಹ್ಮಣ್ಯ ಶೆಟ್ಟಿ ತನ್ನ ಅಧಿಕಾರಿಗಳ ಜೊತೆ ವಾಹನ ಏರಿ ಕಾಲ್ಕಿತ್ತರು.
ಪ್ರಗತಿ ಪರಿಶೀಲನಾ ಸಭೆ ಮುಗಿಸಿ ಹೊರಬಂದ ಸಿಬ್ಬಂದಿಗಳಿಗೆ ಮನೆಗೆ ತೆರಳಲು ಬಸ್ಸು ವ್ಯವಸ್ಥೆ ಇಲ್ಲದೇ ಪರದಾಡುವಂತಾಯಿತು.ಪುರಸಭೆ ಮುಖ್ಯಾಧಿಕಾರಿಯವರು ತನ್ನ ಸಿಬ್ಬಂದಿಗಳಿಗೆ ವಾಹನದ ವ್ಯವಸ್ಥೆ ಮಾಡದೇ ಕಾರು ಏರಿ ಹೊರಟೇಬಿಟ್ಟರು. ಕೊನೆಗೆ ಸಿಬ್ಬಂದಿಗಳ ಮನೆಯವರೇ ತಮ್ಮ ತಮ್ಮ ವಾಹನದಲ್ಲಿ ಕರೆದೊಯ್ದು ಪ್ರಸಂಗ ನಡೆಯಿತು.
ಪುರಸಭೆ ಸಮಸ್ಯೆಗಳ ಕುರಿತು ಪ್ರಗತಿ ಪರಿಶೀಲನೆ ಸಭೆ ನಡೆಸುವುದು ನಿಜಕ್ಕೂ ಉತ್ತಮ ಬೆಳವಣಿಗೆ, ಆದರೆ ಅದಕ್ಕೆ ಮೊದಲೇ ಸಮಯ ನಿಗದಿಪಡಿಸಿ ಸಮಗ್ರ ಚರ್ಚೆಗಳು ನಡೆಯಬೇಕು. ಇಷ್ಟೊಂದು ತರಾತುರಿಯಲ್ಲಿ ಅದೂ ರಾತ್ರಿಯಾದರೂ ಸಭೆ ಮುಂದುವರಿಸಿರುವ ಯೋಜನಾ ನಿರ್ದೇಶಕರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫೋನ್ ಕಾಲ್ ಉತ್ತರ ಬರದೇ ಇದ್ದಾಗಕೆಲವೊಂದು ಮಹಿಳಾ ಸಿಬ್ಬಂದಿಯ ಕುಟುಂಬಸ್ಥರು ಪುರಸಭೆಗೆ ಬಂದಾಗ ಸಭೆ ನಡೆಯುತ್ತಿರುವುದು ಕಂಡು ಬಂತು ರಾತ್ರಿ ಸಮಯದಲ್ಲಿ ಪುರಸಭೆ ಬಾಗಿಲು ತೆರೆದೇ ಇದೆ ಕಚೇರಿ ವಿದ್ಯುತ್ ದೀಪಗಳು ಉರಿಯುತ್ತಿರುವುದನ್ನು ಕಂಡು ಸಾರ್ವಜನಿಕರು, ಪತ್ರಕರ್ತರೊಬ್ಬರು ಕಚೇರಿಗೆ ಹೋದಾಗ ಕೂಡಲೇ ಸಭೆ ಮುಗಿಸಿ ತಮ್ಮ ತಮ್ಮ ಸರಕಾರಿ ವಾಹನಗಳಲ್ಲಿ ಹೊರಟುಹೋದರೆ ದೂರದ ಊರಿಗೆ ಹಳ್ಳಿಗಳಿಗೆ ಹೋಗಬೇಕಾಗಿದ್ದ ಸಿಬ್ಬಂದಿಗಳು ಬಸ್ಸು ಗಳಿಲ್ಲದೆ ಪರದಾಡುತ್ತಿದ್ದರೆ ಸೂಕ್ತ ವ್ಯವಸ್ಥೆ ಮಾಡಬೇಕಿದ್ದ ಮುಖ್ಯಧಿಕಾರಿ,ಯೋಜನಾ ನಿರ್ದೇಶಕರು ತಮ್ಮ ಸರ್ಕಾರಿ ವಾಹನಗಳಲ್ಲಿ ನಿಶ್ಚಿoತೆಯಾಗಿ ಮನೆ ಸೇರಿ ಪುರಸಭೆ ಸಿಬ್ಬಂದಿಗಳು ಮಹಿಳಾ ಸಿಬ್ಬಂದಿಗಳು ಪರಿಸ್ಥಿತಿ ಕಂಡು ಸಾರ್ವಜನಿಕರು ವ್ಯವಸ್ಥೆ ಮಾಡಿ ಮನೆ ತಲುಪುವoತಾಯಿತು
ಈ ಹಿಂದೆಯೂ ಹಲವಾರು ಬಾರಿ ಪುರಸಭಾ ಅಧಿಕಾರಿಗಳು, ಮಹಿಳಾ ಸಿಬ್ಬಂದಿಗಳನ್ನು ಹಲವಾರು ಬಾರಿ ತಮ್ಮಕಛೇರಿಗೆ ಕರೆಸಿ ಬೈದು ನಿಂದಿಸುತ್ತಿರುವ ಬಗ್ಗೆ ಮಾತುಗಳು ಕೇಳಿ ಬರುತ್ತಿದ್ದು ಇವರ ಸೂಕ್ತ ಕ್ರಮ ಕೈಗೊಳ್ಳಬೇಕು ಆಗ್ರಹಗಳು ಸಿಬ್ಬಂದಿಗಳು ಹಾಗೂ ಅವರ ಕುಟುಂಬಸ್ಥರಿಂದ ಕೇಳಿ ಬರುತ್ತಿದೆ.



.
.
.
.
.
.
.
.
.
.
.
.
.
.
.
.
.
.
.
.
