
ಉಡುಪಿ,ಜೂ.25: ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್, ಜಿಲ್ಲೆ 275 S, ಉಡುಪಿ ಇದರ ವತಿಯಿಂದ, ಶಾಲಾ ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುವ ಬಗ್ಗೆ ” ಅಲಯನ್ಸ್ ಗ್ರೀನ್ ಅವಾರ್ಡ್ ” ಎಂಬ ಚಿತ್ರಕಲಾ ಸ್ಪರ್ಧೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಅನ್ವಯ 4 ರಿಂದ 8 ವರ್ಷ ಹಾಗೂ 9 ರಿಂದ 15 ವರ್ಷಗಳ ವರೆಗಿನ ವಯೋಮಿತಿಯ ಶಾಲಾ ವಿದ್ಯಾರ್ಥಿಗಳು ಭಾಗವಹಿಸಬಹುದು.ಗ್ರೀನ್ ಪೋಸ್ಟರ್” ಇದೊಂದು ಚಿತ್ರಕಲಾ (ಡ್ರಾಯಿಂಗ್) ಸ್ಪರ್ಧೆಯಾಗಿದ್ದು ಮೇಲಿನ ವಯೋಮಿತಿಯ ಶಾಲಾ ವಿದ್ಯಾರ್ಥಿಗಳು, Inspired by Nature. For Climate. For Future ಎನ್ನುವ ತತ್ವವನ್ನು ಅಳವಡಿಸಿಕೊಂಡು ನಿಗದಿತ ಸೈಜಿನ ಹಾಳೆಯಲ್ಲಿ ( ಡ್ರಾಯಿಂಗ್ ಶೀಟ್ :- 22″x13″ ಅಳತೆ ) ಕಲಾಕೃತಿಯನ್ನು ರಚಿಸತಕ್ಕದ್ದು. ಈ ಸ್ಪರ್ಧೆಯು ಆಯಾಯ ಶಾಲೆಯ ಮುಖ್ಯೋಪಾಧ್ಯಾಯರ ಅಥವಾ ಸಂಬಂಧಪಟ್ಟ ಉಪಾಧ್ಯಾಯರ ಉಪಸ್ಥಿತಿಯಲ್ಲಿ ಜುಲೈ 15 ರ ಒಳಗಡೆ ನಡೆಸುವುದು. ಹೀಗೆ ರಚಿಸಿದ ಕಲಾಕೃತಿಯನ್ನು ಸಂಬಂಧಪಟ್ಟ ಶಾಲೆಗಳು ಜುಲೈ 25 ರ ಒಳಗಾಗಿ ಆಯಾಯ ಅಲಯನ್ಸ್ ಕ್ಲಬ್ ಗಳ ಮೂಲಕ, ಅಲಯನ್ಸ್ ಡಿಸ್ಟ್ರಿಕ್ಟ್ 275 S ಇವರಿಗೆ ತಲುಪಿಸುವುದು.
ಹೀಗೆ ರಚಿಸಿದ ಕಲಾಕೃತಿಗಳನ್ನು ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಗೆ ಕಳುಹಿಸಿ, ಅಲ್ಲಿ ಪ್ರಥಮ ಬಂದ ಕಲಾಕೃತಿಗೆ ರೂ. 50,000/- ಟ್ರೋಫಿ ಹಾಗೂ ಸರ್ಟಿಫಿಕೇಟ್, ದ್ವಿತೀಯ ರೂ. 25,000/- ಟ್ರೋಫಿ ಹಾಗೂ ಸರ್ಟಿಫಿಕೇಟ್, ತೃತೀಯ ರೂ. 15,000/-, ಟ್ರೋಫಿ ಹಾಗೂ ಸರ್ಟಿಫಿಕೇಟ್ ಹಾಗೂ ಸಮಾಧಾನಕರ ಬಹುಮಾನವಾಗಿ ರೂ. 5,000/- ಮತ್ತು ಸರ್ಟಿಫಿಕೇಟ್ ನೀಡಲಾಗುತ್ತದೆ.
ಮೇಲಿನ ಸ್ಪರ್ಧಾ ವಿಜೇತರನ್ನು ಅಗಸ್ಟ್ 15, 2026 ರಂದು ಜಿಲ್ಲೆಯಲ್ಲಿ ಜರುಗುವ ಸಮಾರಂಭದಲ್ಲಿ ಗಣ್ಯರ ಸಮಕ್ಷಮದಲ್ಲಿ ಸನ್ಮಾನಿಸಲಾಗುವುದು.ಈ ನಿಟ್ಟಿನಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲಾ ಮುಖ್ಯಸ್ಥರು ಸಹಕರಿಸಬೇಕಾಗಿ ಜಿಲ್ಲಾ ಗವರ್ನರ್ ಸುನಿಲ್ ಕುಮಾರ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .



.
.
.
.
.
.
.
.
.
.
.
.
.
.
.
.
.
.
.
.
