
ಕಾರ್ಕಳ,ಜು.10: ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಕಳ, ಉಡುಪಿ, ಮಣಿಪಾಲ ಹಾಗೂ ಅಜೆಕಾರು ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಪ್ರಥಮ ಹಂತದ ವಿದ್ಯಾರ್ಥಿ ವೇತನ ರೂ. 1 ಕೋಟಿ 44 ಲಕ್ಷವನ್ನು 29.05.2026 ರಂದು ಕಾರ್ಕಳ ಜ್ಞಾನಸುಧಾದಲ್ಲಿ ಹಾಗೂ ರೂ. 67 ಲಕ್ಷದ 80 ಸಾವಿರವನ್ನು 03.06.2026 ರಂದು ಅಜೆಕಾರು ಜ್ಞಾನಸುಧಾದಲ್ಲಿ ವಿತರಿಸಲಾಗಿದೆ.
ಇದೀಗ ದ್ವಿತೀಯ ಹಂತದ ವಿದ್ಯಾರ್ಥಿವೇತನವಾಗಿ ರೂ. 55 ಲಕ್ಷದ 30 ಸಾವಿರವನ್ನು 13.07.2026 ರಂದು ಮಣಿಪಾಲ ಜ್ಞಾನಸುಧಾದಲ್ಲಿ ಹಾಗೂ ರೂ. 39 ಲಕ್ಷದ 20 ಸಾವಿರವನ್ನು 14.07.2026 ರಂದು ಉಡುಪಿ ಜ್ಞಾನಸುಧಾದಲ್ಲಿ ವಿತರಿಸಲಾಗುವುದು.
271 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಟ್ರಸ್ಟ್ ವತಿಯಿಂದ ಅಜೆಕಾರು ಜ್ಞಾನಸುಧಾದಲ್ಲಿ ಪ್ರಸಕ್ತ ಸಾಲಿನಲ್ಲಿ 9ನೇ ತರಗತಿ ಹಾಗೂ ಪ್ರಥಮ ಪಿ.ಯು.ಸಿ.ಯ 112 ವಿದ್ಯಾರ್ಥಿಗಳಿಗೆ ಹಾಗೂ ಕಾರ್ಕಳ ಜ್ಞಾನಸುಧಾದಲ್ಲಿ 6ನೇ ತರಗತಿಯಿಂದ ದ್ವಿತೀಯ ಪಿ.ಯು.ಸಿ.ಯವರೆಗಿನ 159 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.
ಶೈಕ್ಷಣಿಕ ಸಾಧನೆ ಅಲ್ಲದೆ, ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳಲ್ಲಿ 2025ರಲ್ಲಿ ನೀಟ್ ಬರೆದ 622 ವಿದ್ಯಾರ್ಥಿಗಳಲ್ಲಿ 227 ವಿದ್ಯಾರ್ಥಿಗಳು ಎಮ್.ಬಿ.ಬಿ.ಎಸ್ ಪ್ರವೇಶ ಪಡೆದಿರುತ್ತಾರೆ ಹಾಗೂ 2026ರಲ್ಲಿ 5 ವಿದ್ಯಾರ್ಥಿಗಳು ಐ.ಐ.ಟಿ. ಹಾಗೂ 15 ವಿದ್ಯಾರ್ಥಿಗಳು ಎನ್.ಐ.ಟಿ. ಪ್ರವೇಶ ಪಡೆದಿದ್ದು, 201 ವಿದ್ಯಾರ್ಥಿಗಳು ಕೆ.ಸಿ.ಇ.ಟಿ. ಇಂಜಿನಿಯರಿಂಗ್ನಲ್ಲಿ 5000 ದೊಳಗಿನ ರ್ಯಾಂಕ್ ಪಡೆದಿರುತ್ತಾರೆ.

.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
