
ಹೆಬ್ರಿ,ಜು.11: ಪಿ ಆರ್ ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಭತ್ತ ಬೆಳೆಯುವ ಕೃಷಿ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ನೇಜಿ ನೆಡುವ ಮೂಲಕ ತಿಳಿಸಲಾಯಿತು.
ಮುದ್ರಾಡಿಯ ಹಳೆಬೀಡಿನ ಕೃಷ್ಣ ಶೆಟ್ಟಿಗಾರ್ ಅವರ ಗದ್ದೆಯಲ್ಲಿ ವಿದ್ಯಾರ್ಥಿಗಳು ನೇಜಿ ನೆಟ್ಟು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಅಮೃತ ಭಾರತಿ ವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಶೈಲೇಶ್ ಕಿಣಿ ಮಾತನಾಡಿ ಭಾರತವು ಕೃಷಿ ಪ್ರಧಾನವಾದ ದೇಶ. ನಾವು ಜೀವನಕ್ಕೆ ಬೇಕಾದ ಉದ್ಯೋಗವನ್ನು ಪಡೆದರೂ ಕೂಡ ಆಹಾರವು ಬೇಕಾಗಿದೆ. ಆದ್ದರಿಂದ ಕೃಷಿ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ತಿಳಿಸಿದರು.
ಸಂಸ್ಥೆಯ ಮುಖ್ಯಶಿಕ್ಷಕಿ ಅಪರ್ಣಾ ಆಚಾರ್, ಮುದ್ರಾಡಿ ಗ್ರಾಮಪಂಚಾಯತ್ ಸದಸ್ಯ ಸನತ್ ಶೆಟ್ಟಿಗಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಮೇಶ್ , ಸ್ಥಳೀಯರಾದ ಪ್ರಕಾಶ್ ಎಂ , ಗಣಪತಿ ರಾವ್ ಹೆಬ್ರಿ ಅಲಯನ್ಸ್ ನ ಬಾಲಚಂದ್ರ ಮುದ್ರಾಡಿ, ಕೆ.ರಾಮಚಂದ್ರ ಭಟ್ ವರಂಗ, ಸಂಸ್ಥೆಯ ಶಿಕ್ಷಕರಾದ ವೇದವ್ಯಾಸ ತಂತ್ರಿ ಮಡಾಮಕ್ಕಿ, ಪಂಚಮಿ, ನಿಶಾನ್ ಶೆಟ್ಟಿ, ಸೌಪರ್ಣಿಕಾ ಜೋಷಿ, ನವ್ಯಾ ಪೈ, ಪ್ರವೀಣ್ ಹೆಗ್ಡೆ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಂಸ್ಕೃತ ಶಿಕ್ಷಕ ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ ಸ್ವಾಗತಿಸಿ ವಂದಿಸಿದರು.

.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
