
ಕಾರ್ಕಳ,ಜು.27: ತಮ್ಮ ಹದಿನಾರನೇ ಚಾತುರ್ಮಾಸ ವ್ರತಾಚರಣೆಯ ಅಂಗವಾಗಿ ಮಂಗಳಪುರ ಪ್ರವೇಶಿಸಿದ ಪರಮಪೂಜ್ಯ ಏಲಾಚಾರ್ಯ ಮುನಿಶ್ರೀ 108 ಪ್ರಸಂಗ ಸಾಗರ ಮಹಾ ರಾಜರು, ಕಾರ್ಕಳದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು.
ಮುಂದಿನ ವರ್ಷ ನಡೆಯಲಿರುವ ಶ್ರೀ ಕಾರ್ಕಳ ಭಗವಾನ್ ಶ್ರೀ ಬಾಹು ಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಪೂರ್ವಭಾವಿಯಾಗಿ ನಡೆಯುತ್ತಿರುವ ಈ ಚಾತುರ್ಮಾಸ ವ್ರತಾಚರಣೆಯು ಭಕ್ತರಲ್ಲಿ ಧಾರ್ಮಿಕ ಜಾಗೃತಿ ಮೂಡಿಸಿ, ಆತ್ಮಶುದ್ಧಿ ಹಾಗೂ ಆತ್ಮಕಲ್ಯಾಣದತ್ತ ಪ್ರೇರೇಪಿಸುವಂತಾಗಬೇಕು ಎಂದು ಅವರು ತಿಳಿಸಿದರು.ಚಾತುರ್ಮಾಸವನ್ನು ಅತಿಯಾದ ಖರ್ಚು ಹಾಗೂ ಆಡಂಬರವಿಲ್ಲದೆ, ಸರಳತೆ ಮತ್ತು ಭಕ್ತಿಭಾವದಿಂದ ಆಚರಿ ಸುವಂತೆ ಅವರು ಸಲಹೆ ನೀಡಿದರು.
ರಾಜಗುರು ಧ್ಯಾನಯೋಗಿ ಲಲಿತ ಕೀರ್ತಿ ಭಟ್ಟಾರಕ ಮಹಾಸ್ವಾಮಿ ಗಳು ಮಾತನಾಡಿ, ಮಹಾಮಸ್ತಕಾಭಿಷೇಕದ ಪೂರ್ವದಲ್ಲಿ ನಡೆಯುತ್ತಿರುವ ಈ ಚಾತುರ್ಮಾಸ ವೃತಾಚರಣೆಯು ಭಕ್ತರ ಪುಣ್ಯದ ಫಲವಾಗಿದ್ದು, ಸಮಾ ಜದಲ್ಲಿ ಧರ್ಮಜಾಗೃತಿ ಮೂಡಿಸುವ ಮಹತ್ವದ ಸಾಧನವಾಗಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಎಸ್ಸಿಡಿಸಿಸಿ ಬ್ಯಾಂಕ್ನ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅವರು ಮಾತನಾಡಿ, ಚಾತುರ್ಮಾಸದ ಮೊದಲ ಕಾರ್ಯಕ್ರಮದಲ್ಲಿಯೇ ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ ಭಕ್ತರ ಉತ್ಸಾಹವು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಅವರು ಚಾತುರ್ಮಾಸ ವೃತಾಚರಣೆಗೆ ರೂ 5 ಲಕ್ಷ ದೇಣಿಗೆ ಘೋಷಿಸಿದರು.
ವೇದಿಕೆಯಲ್ಲಿ ಕ್ಷುಲ್ಲಕ ಪ್ರಗುಣ ಸಾಗರ ಮಹಾರಾಜರು, ಕಾರ್ಕಳ ಪಟ್ಟದ ಪುರೋಹಿತರಾದ ವರ್ಧಮಾನ ಇಂದ್ರ ಸೇರಿ ಹಲವರು ಉಪಸ್ಥಿತರಿದ್ದರು.



.
.
.
.
.
.
.
.
.
.
.
.
.
.
.
.
.
.
.
.
