
ಹೆಬ್ರಿ, ಆ.05: ಕಳೆದ 09/12/2024 ರಂದು ಹೆಬ್ರಿಯ ಬಜಾಜ್ ಶೋ ರೂಂ ನ ಮಹಡಿ ಮೇಲೆ ಹತ್ತಿದ ಸಂಸ್ಥೆಯ ಸಿಬ್ಬಂದಿ ವಿನ್ಸೆಂಟ್ ಪ್ರಕಾಶ್ ಡಿ ಸೋಜಾ (32) ಅವರು ಆಯತಪ್ಪಿ ಕೆಳಕ್ಕೆ ಬಿದ್ದು ಗಾಯಗೊಂಡಿದ್ದು ಖಾಸಗಿ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಸ್ಥೆಯ ಮ್ಯಾನೇಜಿಂಗ್ ಪಾಟ್ನರ್ ಸುಭಾಶ್ಚಂದ್ರ ಹೆಗ್ಡೆ ಹಾಗೂ ಮ್ಯಾನೇಜರ್ ಆದರ್ಶ ಎಂಬವರು ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಸಿಬ್ಬಂದಿ ವಿನ್ಸೆಂಟ್ ಪ್ರಕಾಶ್ ಡಿ ಸೋಜಾ ಅವರನ್ನು ಮಹಡಿ ಮೇಲೆ ಹತ್ತಿಸಿದ ಪರಿಣಾಮ ಅವರು ಕೆಳಗೆ ಬಿದ್ದು ಸೊಂಟಕ್ಕೆ ಹಾಗೂ ಬೆನ್ನು ಹುರಿಗೆ ಗಂಭೀರ ಗಾಯಗಳಾಗಿವೆ ಎಂದು ಆರೋಪಿಸಲಾಗಿದ್ದು, ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





.
.
.
.
.
.
.
.
.
.
.
.
.
.
.
.
.
.
.
.
