
ಕಾರ್ಕಳ, ಆ.08: ರಸ್ತೆ ಬದಿಯಲ್ಲಿ ಒಣಗಿದ ಹಾಗೂ ಹಳೆಯ ಅಪಾಯಕಾರಿ ಮರಗಳನ್ನು ತೆರವುಗೊಳಿಸಬೇಕೆಂದು ಅರಣ್ಯ ಇಲಾಖೆಯ ಅಧಿಕಾರಿಗಳಗೆ ಸಾಕಷ್ಟು ಬಾರಿ ಹೇಳಿದರೂ ಪ್ರಯೋಜನವಾಗಿಲ್ಲ. ಕಳೆದ ಕೆಲ ವರ್ಷಗಳ ಹಿಂದೆ ಹೆಬ್ರಿಯ ಬೇಳಂಜೆಯಲ್ಲಿ ಅಮಾಯಕ ಬೈಕ್ ಸವಾರನ ಮೇಲೆ ಅಪಾಯಕಾರಿ ಮರಬಿದ್ದು ಮೃತಪಟ್ಟ ಘಟನೆ ನಡೆದ ನಂತರ ಹೆಬ್ರಿಯಲ್ಲಿ ನಿನ್ನೆ ಇನ್ನೊಬ್ಬ ವ್ಯಕ್ತಿ ಮರಬಿದ್ದು ಮೃತಪಟ್ಟಿದ್ದು ಅರಣ್ಯ ಇಲಾಖೆಯ ಬೇಜವಾಬ್ದಾರಿಗೆ ಇನ್ನೆಷ್ಟು ಅಮಾಯಕರು ಬಲಿಯಾಗಬೇಕು. ಅಮಾಯಕರ ಸಾವಿಗೆ ಕಾರಣರಾದ ಅರಣ್ಯಾಧಿಕಾರಗಳ ವಿರುದ್ಧವೇ FIR ದಾಖಲಿಸಬೇಕೆಂದು ಶಾಸಕ ಸುನಿಲ್ ಕುಮಾರ್ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಉಸ್ತುವಾರಿ ಸಚಿವ ಯು.ಟಿ ಖಾದರ್ ಅವರ ಅಧ್ಯಕ್ಷತೆಯಲ್ಲಿ ಇಲಖಾವಾರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಶಾಸಕ ಸುನಿಲ್ ಕುಮಾರ್, ಅಪಾಯಕಾರಿ ಮರಗಳ ಪಟ್ಟಿ ಮಾಡಿ ಮೇಲಾಧಿಕಾರಿಗಳಿಗೆ ಕಳುಹಿಸಿ ಸುಮ್ಮನಿದ್ದರೆ ಸಾಲದು ಈ ಕುರಿತು ಅವರ ಗಮನಕ್ಕೆ ತಂದು ಅಂತಹ ಮರಗಳನ್ನು ತೆರವು ಮಾಡಿ ಅಮಾಯಕ ಜೀವ ಉಳಿಸಬೇಕಿರುವುದು ಅಧಿಕಾರಿಗಳ ಹೊಣೆಗಾರಿಕೆಯಾಗಿದೆ ಆದರೆ ನಿಮ್ಮ ನಿರ್ಲಕ್ಷö್ಯಕ್ಕೆ ಅಮಾಯಕರ ಜೀವ ಬಲಿಯಾಗಬೇಕೇ ಎಂದು ಪ್ರಶ್ನಿಸಿದರು. ಇದಕ್ಕೆ ದನಿಗೂಡಿಸಿದ ಸಚಿವರು, ಈ ದುರ್ಘಟನೆಯಲ್ಲಿ ನಮ್ಮ ಅಥವಾ ನಿಮ್ಮ(ಅಧಿಕಾರಿಗಳ) ಮನೆಯರಿಗೆ ಹೆಚ್ಚುಕಡಿಮೆ ಆಗುತ್ತಿದ್ದರೆ ಏನು ಪರಿಣಾಮ ಆಗುತ್ತಿತ್ತು ಎನ್ನುವ ಕನಿಷ್ಟ ಪರಿಜ್ಞಾನ ಅಧಿಕಾರಿಗಳಿಗೆ ಇರಬೇಕು. ಅಧಿಕಾರಿಗಳು ಈ ವಿಚಾರದಲ್ಲಿ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲಾಗದು ಕೂಡಲೇ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.




.
.
.
.
.
.
.
.
.
.
.
.
.
.
.
.
.
.
.
.
