Share this news

ವಿಶೇಷ ವರದಿ: ಕರಾವಳಿನ್ಯೂಸ್ ಡೆಸ್ಕ್, ಕಾರ್ಕಳ

ಸರ್ಕಾರದ ಯಾವುದೇ ಇಲಾಖೆಯಾಗಲಿ ತನ್ನ ಕಾರ್ಯಯೋಜನೆಗಳಲ್ಲಿ ಪ್ರಗತಿ ಸಾಧಿಸಬೇಕಾದರೆ ಅದಕ್ಕೆ ತಕ್ಕಂತೆ ಸಿಬ್ಬಂದಿಗಳು ಇರಬೇಕು. ಆದರೆ ನಾಡಿನ ಅನ್ನ ನೀಡುವ ರೈತರ ಇಲಾಖೆಯಾಗಿರುವ ಕಾರ್ಕಳ ಕೃಷಿ ಇಲಾಖೆಯಲ್ಲಿ ಸಿಬ್ಬಂದಿಗಳಿಲ್ಲದೇ ರೈತರ ಗೋಳು ಮಾತ್ರ ಕೇಳೋರೆ ಇಲ್ಲದಂತಾಗಿದೆ. ಸರಿಯಾಗಿ ಮಳೆಯಾಗದ ಹಾಗೂ ಕೂಲಿಯಾಳು ಸಮಸ್ಯೆ,ಗೊಬ್ಬರ ಕೊರತೆ, ಕಾಡುಪ್ರಾಣಿಗಳ ಹಾವಳಿಯಿಂದಾಗಿ ಬಹುತೇಕ ರೈತರು ಭತ್ತದ ಕೃಷಿಯಿಂದ ವಿಮುಖರಾಗುತ್ತಿದ್ದಾರೆ.ಇದರ ಪರಿಣಾಮವಾಗಿ ಭತ್ತದ ಕೃಷಿಯ ವಿಸ್ತೀರ್ಣ ಗಣನೀಯವಾಗಿ ಇಳಿಕೆಯಾಗುತ್ತಿದ್ದು ಇಂತಹ ಸಂದರ್ಭದಲ್ಲಿ ರೈತರಿಗೆ ದೈರ್ಯ ತುಂಬಿ ಅವರ ಸಮಸ್ಯೆಗಳಿಗೆ ಸ್ಪಂದಿಸುವುದು ಕೃಷಿ ಇಲಾಖೆಯ ಅಧಿಕಾರಿಗಳ ಹೊಣೆಗಾರಿಕೆ. ರೈತರ ಸಮಸ್ಯೆಗಳಿಗೆ ಧ್ವನಿಯಾಗಬೇಕಿದ್ದ ಕೃಷಿ ಇಲಾಖೆಯೇ ಸಧ್ಯಕ್ಕೆ ಸಿಬ್ಬಂದಿಗಳಿಲ್ಲದೇ ಸೊರಗಿ ಹೋಗಿದೆ. ಕಾರ್ಕಳ ಕೃಷಿ ಇಲಾಖೆಗೆ ಮಂಜೂರಾದ 26 ಹುದ್ದೆಗಳ ಪೈಕಿ ಬರೋಬ್ಬರಿ 24 ಹುದ್ದೆಗಳು ಖಾಲಿಯಿದ್ದು, ಸರ್ಕಾರಕ್ಕೆ ಕೃಷಿ ಇಲಾಖೆಯ ಬಗ್ಗೆ ಅಷ್ಟೊಂದು ತಾತ್ಸಾರವೇ ಎಂಬ ಪ್ರಶ್ನೆ ಮೂಡಿದೆ.

ಕಾರ್ಕಳ ಕೃಷಿ ಇಲಾಖೆಯ ವ್ಯಾಪ್ತಿಯಲ್ಲಿ ಅಜೆಕಾರು ಹಾಗೂ ಕಾರ್ಕಳ ಕಸಬಾ ರೈತ ಸಂಪರ್ಕ ಕೇಂದ್ರಗಳು ಹಾಗೂ ಸಾಣೂರು ಬೀಜೋತ್ಪಾದನಾ ಕೇಂದ್ರಗಳು ಒಳಗೊಂಡಿದ್ದು ಒಟ್ಟು 26 ಹುದ್ದೆಗಳು ಮಂಜೂರಾಗಿದೆ.ಈ ಪೈಕಿ ಕಾರ್ಕಳ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ 13 ಹುದ್ದೆಗಳು ಮಂಜೂರಾಗಿದ್ದು, ಈ ಪೈಕಿ ಪ್ರಭಾರ ನೆಲೆಯಲ್ಲಿ ಸಹಾಯಕ ಕೃಷಿ ನಿರ್ದೇಶಕರು ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದಂತೆ ಕೃಷಿ ಅಧಿಕಾರಿ 2ಹುದ್ದೆ, ಅಧೀಕ್ಷಕರು 1,ಪ್ರಥಮ ದರ್ಜೆ ಸಹಾಯಕರು 1, ದ್ವಿತೀಯ ದರ್ಜೆ ಸಹಾಯಕರು 2, ಟೈಪಿಸ್ಟ್ 1, ವಾಹನ ಚಾಲಕ 1 ಹಾಗೂ 4 ಡಿಗ್ರೂಪ್ ಹುದ್ದೆಗಳು ಸೇರಿ 12 ಹುದ್ದೆಗಳು ಖಾಲಿಯಿವೆ. ಅಜೆಕಾರು ರೈತ ಸಂಪರ್ಕ ಕೇಂದ್ರದಲ್ಲಿ ಓರ್ವ ಕೃಷಿ ಅಧಿಕಾರಿ ಹಾಗೂ 4 ಸಹಾಯಕ ಕೃಷಿ ಅಧಿಕಾರಿ ಸೇರಿ 5 ಹುದ್ದೆಗಳು ಮಂಜೂರಾಗಿದ್ದು ಈ ಪೈಕಿ ಕೇವಲ ಕೃಷಿ ಅಧಿಕಾರಿ ಹುದ್ದೆ ಭರ್ತಿಯಾಗಿದ್ದು ಉಳಿದ 4 ಹುದ್ದೆಗಳು ಖಾಲಿಯಿವೆ.ಕಾರ್ಕಳ ಕಸಬಾ ರೈತ ಸಂಪರ್ಕ ಕೇಂದ್ರದಲ್ಲಿ 6 ಹುದ್ದೆಗಳ ಪೈಕಿ ಎಲ್ಲವೂ ಖಾಲಿಯಿದ್ದು, ಸಾಣೂರು ಬೀಜೋತ್ಪಾದನಾ ಕೇಂದ್ರದಲ್ಲಿನ ಒಂದು ಕೃಷಿ ಅಧಿಕಾರಿ ಹಾಗೂ ಒಂದು ಡಿ ಗ್ರೂಪ್ ಹುದ್ದೆಗಳು ಖಾಲಿಯಿದ್ದು, ಒಟ್ಟಾರೆ ಕಾರ್ಕಳ ಕೃಷಿ ಇಲಾಖೆಯ 26 ಹುದ್ದೆಗಳ ಪೈಕಿ ಕೇವಲ ಎರಡು ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, 24 ಹುದ್ದೆಗಳು ಖಾಲಿಯಿದ್ದು, ಸರ್ಕಾರ ಕೃಷಿ ಇಲಾಖೆಯನ್ನು ನಿರ್ಲಕ್ಷಿಸಿರುವುದಕ್ಕೆ ಸಾಕ್ಷಿಯಾಗಿದೆ.

ಸಧ್ಯಕ್ಕೆ 5 ಜನ ಮಹಿಳಾ ಸಿಬ್ಬಂದಿಗಳು ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಈ ಸಿಬ್ಬಂದಿಗಳಿAದ ರೈತರಿಗೆ ಯಾವುದೇ ತಾಂತ್ರಿಕ ಮಾಹಿತಿ ಸಿಗುತ್ತಿಲ್ಲ.ರೈತರಿಗೆ ಹೊಸ ಯೋಜನೆಗಳ ಕುರಿತ ಸಮಗ್ರ ಮಾಹಿತಿ, ಆಧುನಿಕ ಕೃಷಿ ಪದ್ಧತಿ, ಬೀಜಗಳ ಆಯ್ಕೆ ಸೇರಿದಂತೆ ಸಾಕಷ್ಟು ಮಾಹಿತಿಗಳ ಅವಶ್ಯಕತೆ ಇರುತ್ತದೆ. ಆದ್ದರಿಂದ ಸರ್ಕಾರ ಕೂಡಲೇ ಎಚ್ಚೆತ್ತು ಕೃಷಿ ಇಲಾಖೆಯನ್ನು ಪ್ರಮುಖ ಆದ್ಯತೆ ನೆಲೆಯಲ್ಲಿ ಪರಿಗಣಿಸಿ ಖಾಲಿ ಹುದ್ದೆಗಳ ನೇಮಕಾತಿ ಮಾಡಬೇಕಿದೆ.

 

 

 

     

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

                                       

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

Leave a Reply

Your email address will not be published. Required fields are marked *