
ಕಾರ್ಕಳ,ಆ.13: ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ವತಿಯಿಂದ ಬಜಗೋಳಿ ಬಸ್ಸು ನಿಲ್ದಾಣದ ಪರಿಸರದಲ್ಲಿ ಸ್ವಚ್ಛತೆಯನ್ನು ಕಾಪಾಡಲು BOTTLE BOOTH ನ್ನು ಮುಡಾರು ಗ್ರಾಮ ಪಂಚಾಯತ್ ನಲ್ಲಿ ನಡೆಸ ಸರಳ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲಾಯಿತು.
ಈ ಸಮಾರಂಭದಲ್ಲಿ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿಯ ಮಾರ್ಗದರ್ಶಕರಾದ ರೊ. ಡಾ. ಭರತೇಶ ಆದಿರಾಜ್ ಅವರು ರೊ. ಮಂಜುನಾಥ್ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ, ಉಡುಪಿ ಜಿಲ್ಲಾ SLRM ಮೇಲ್ವಿಚಾರಕರು ಹಾಗೂ ಉಡುಪಿ ಜಿಲ್ಲಾ SLRM ಕಾರ್ಯಕರ್ತರ ಜಿಲ್ಲಾ ಒಕ್ಕೂಟದ ಅಧ್ಯಕ್ಷರಾದ ರೊ.ಮಾಧವಿ. ಕೆ .ಇವರ ನೇತೃತ್ವದಲ್ಲಿ ಈ ಸ್ವಚ್ಛತಾ ಘಟಕವನ್ನು ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ವಿಶ್ವನಾಥ ಅವರಿಗೆ ಹಸ್ತಾಂತರಿಸಿ ಬಸ್ ನಿಲ್ದಾಣದಲ್ಲಿ ಅಳವಡಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರಾದ (ಗ್ರಾಮೀಣ ಉದ್ಯೋಗ) ರಮೇಶ್.ಎಸ್ , ನಿಕಟಪೂರ್ವ ಅಧ್ಯಕ್ಷರಾದ ಸುರೇಶ್ ಶೆಟ್ಟಿ, ಶ್ರೀಮತಿ ಶ್ರುತಿ .ಡಿ.ಅಧಿಕಾರಿ , ಸದಸ್ಯರಾದ ಪ್ರಶಾಂತ್ ಪೂಜಾರಿ ಗ್ರಾಮ ಪಂಚಾಯತ್ ಸಿಬ್ಬಂದಿ , SLRM ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿಯ ನಿಕಟಪೂರ್ವ ಅಧ್ಯಕ್ಷರಾದ ರೊ.ಸುರೇಂದ್ರ ನಾಯಕ್, ಪೂರ್ವ ಅಧ್ಯಕ್ಷರಾದ ರೊ . ಉಪೇಂದ್ರ ವಾಗ್ಲೆ, ಕ್ಲಬ್ ನ IT chairman ಆಗಿರುವ ರೊ.ಶ್ರೀವರ್ಮ ಅಜ್ರಿ, ಕಾರ್ಯದರ್ಶಿ ರೊ. ಗಣೇಶ ಬರ್ಲಾಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು




.
.
.
.
.
.
.
.
.
.
.
.
.
.
.
.
.
.
.
.
