

ಹೆಬ್ರಿ, ಅ.04:ಹೆಬ್ರಿ ತಾಲೂಕಿನ ಶಿವಪುರ ಗ್ರಾಮದ ಖಜಾನೆ ಶ್ರೀ ಸಾಯಿ ಅಂಗಡಿಯ ಎದುರು ರಸ್ತೆ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಪಡೆದ ಹೆಬ್ರಿ ಠಾಣೆಯ ಪಿಎಸ್ಐ ಲೋಹಿತ್ ಕುಮಾರ್ ಸಿ ಎಸ್ ನೇತೃತ್ವದ ಪೊಲೀಸರ ತಂಡ ಶನಿವಾರ ಮಧ್ಯಾಹ್ನ ದಾಳಿ ನಡೆಸಿ ಅಕ್ರಮ ಮದ್ಯದ ಸೀಜ್ ಮಾಡಿದ್ದಾರೆ.
ಮದ್ಯ ಮಾರಾಟ ಮಾಡುತ್ತಿದ್ದ ಜಯ ಪ್ರಕಾಶ್ ಶೆಟ್ಟಿ (66) ಎಂಬಾತನನ್ನು ವಶಕ್ಕೆ ಪಡೆದು 2 ರಟ್ಟಿನ ಬಾಕ್ಸ್ ಗಳಲ್ಲಿ ಇಟ್ಟಿದ್ದ 180ML ನ ಒಟ್ಟು 48 ಟೆಟ್ರಾ ಪ್ಯಾಕೇಟ್ ಒರಿಜಿನಲ್ ಚಾಯ್ಸ್ ವಿಸ್ಕಿ, ಇನ್ನೊಂದು ರಟ್ಟಿನ ಬಾಕ್ಸ್ ನಲ್ಲಿ 90ML ನ 48 ಟೆಟ್ರಾ ಪ್ಯಾಕೇಟ್ ಒರಿಜಿನಲ್ ಚಾಯ್ಸ್ ವಿಸ್ಕಿ,180ML ನ ಒಟ್ಟು 24 ಟೆಟ್ರಾ ಪ್ಯಾಕೇಟ್ ಮೈಸೂರ್ ಲ್ಯಾಸ್ಸರ್ ವಿಸ್ಕಿ, ಪ್ಲಾಸ್ಟಿಕ್ ತೊಟ್ಟೆಯಲ್ಲಿ 180ML ನ 2 ಪ್ಯಾಕೇಟ್ ಬ್ಯಾಗ್ ಪೈಪರ್ ವಿಸ್ಕಿ ಹಾಗೂ 90 ಎಮ್ ಎಲ್ನ 4 ಟೆಟ್ರಾ ಪ್ಯಾಕೇಟ್ ಒರಿಜಿನಲ್ ಚಾಯ್ಸ್ ವಿಸ್ಕಿ ಸೇರಿ ಒಟ್ಟು ಒಟ್ಟು 11,090 ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





.
.
.
.
.
.
.
.
.
.
.
.
.
.
.
.
.
.
.
.
