Share this news

 

ನವದೆಹಲಿ, ಅ.17: ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳು ಕೂಡ ಮೊಬೈಲ್, ಇಂಟರ್ನೆಟ್ ಬಳಕೆಯಿಂದ ಡಿಜಿಟಲ್ ವಂಚನೆಗೆ ಸಿಲುಕುವ, ಮಾನಸಿಕ ಶೋಷಣೆಗೆ ಒಳಗಾಗುವ ಪ್ರಕರಣಗಳು ಹೆಚ್ಚಾಗಿರುವುದರಿಂದ ವಯೋಮಿತಿಯ ಆಧಾರದ ಮೇಲೆ ಮಕ್ಕಳಿಗೆ ಇಂಟರ್ನೆಟ್ ಬಳಕೆಯನ್ನು ನಿಷೇಧಿಸಬೇಕೆಂದು ಅರ್ಜಿ ಸಲ್ಲಿಕೆಯಾಗಿತ್ತು. ಈ ಬಗ್ಗೆ ಇಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, “ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಇಂಟರ್ನೆಟ್ ಬಳಕೆ ಮೂಲಭೂತ ಹಕ್ಕು. ಇದಕ್ಕೆ ಮಕ್ಕಳು ಕೂಡ ಹೊರತಾಗಿಲ್ಲ. ಮಕ್ಕಳಿಗೂ ಇಂಟರ್ನೆಟ್ (ಅಂತರ್ಜಾಲ) ಸೌಲಭ್ಯವನ್ನು ಪಡೆಯುವುದು ಮತ್ತು ಬಳಸುವುದು ಸಂವಿಧಾನದ ವಿಧಿ 21 ಹಾಗೂ ವಿಧಿ 19(1)(ಎ) ಅಡಿಯಲ್ಲಿ ಸಿಗುವ ಮೂಲಭೂತ ಹಕ್ಕು” ಎಂದು ಐತಿಹಾಸಿಕ ತೀರ್ಪು ನೀಡಿದೆ. ಮಕ್ಕಳ ಭದ್ರತೆಯ ನೆಪದಲ್ಲಿ ಅವರಿಗೆ ಇಂಟರ್ನೆಟ್ ಬಳಕೆಯನ್ನು ಸಂಪೂರ್ಣವಾಗಿ ನಿರಾಕರಿಸುವುದು ಅತ್ಯಂತ ಹಾಸ್ಯಾಸ್ಪದವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಪ್ರತಿಪಾದಿಸಿದೆ.

ಮಕ್ಕಳನ್ನು ಆನ್‌ಲೈನ್ ಅಪಾಯಗಳಿಂದ ರಕ್ಷಿಸುವ ಹೆಸರಿನಲ್ಲಿ ಇಂಟರ್‌ನೆಟ್‌ನಿAದ ಸಂಪೂರ್ಣವಾಗಿ ದೂರವಿಡುವುದಕ್ಕಿಂತ, ಹಾನಿಕಾರಕ ವಿಷಯಗಳನ್ನು ನಿಯಂತ್ರಿಸುವುದು ಹಾಗೂ ಅವುಗಳನ್ನು ಹರಡುವವರ ವಿರುದ್ಧ ಕ್ರಮ ಕೈಗೊಳ್ಳುವುದು ಮುಖ್ಯ. ಇದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳಿಗೆಂದೇ ಪ್ರತ್ಯೇಕ ‘ಚೈಲ್ಡ್ ಮೋಡ್’ ವ್ಯವಸ್ಥೆ ರೂಪಿಸಬಹುದು. ಈ ವ್ಯವಸ್ಥೆಯಲ್ಲಿ ಮಕ್ಕಳ ಖಾತೆಗಳನ್ನು ಪೂರ್ವನಿಯೋಜಿತವಾಗಿ ಖಾಸಗಿಯಾಗಿಡುವುದು, ಅಪರಿಚಿತ ವಯಸ್ಕರಿಂದ ಬರುವ ಸಂದೇಶಗಳನ್ನು ನಿಯಂತ್ರಿಸುವುದು ಹಾಗೂ ಮಕ್ಕಳಿಗೆ ತಲುಪುವ ಜಾಹೀರಾತು ಮತ್ತು ವಿಷಯಗಳ ಮೇಲೆ ನಿಗಾ ವಹಿಸುವಂತಹ ಕ್ರಮಗಳನ್ನು ಅಳವಡಿಸಬಹುದು ಎಂದು ನ್ಯಾಯಪೀಠ ಸೂಚಿಸಿದೆ.

ಮಕ್ಕಳ ವಯಸ್ಸಿಗೆ ಅನುಗುಣವಾದ ರಕ್ಷಣೆ, ಪೋಷಕರ ಒಪ್ಪಿಗೆ ಮತ್ತು ಮೇಲ್ವಿಚಾರಣೆಗೆ ಆದ್ಯತೆ ನೀಡಬೇಕು. ಮಕ್ಕಳಿಗೆ ಹಾನಿಕಾರಕವಾದ ನಿರ್ದಿಷ್ಟ ವರ್ಗದ ವಿಷಯಗಳು ಅಥವಾ ಸೇವೆಗಳ ಮೇಲೆ ಸೂಕ್ತ ನಿರ್ಬಂಧಗಳನ್ನು ವಿಧಿಸುವುದಕ್ಕೂ ಈ ಅಭಿಪ್ರಾಯ ಅಡ್ಡಿಯಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.ಇಂಟರ್‌ನೆಟ್ ಮಕ್ಕಳಿಗೆ ಶಿಕ್ಷಣ, ಮಾಹಿತಿ ಮತ್ತು ಅಭಿವ್ಯಕ್ತಿಗೆ ಪ್ರಮುಖ ಸಾಧನವಾಗಿದೆ. ವಿಶೇಷವಾಗಿ ದೂರದ ಪ್ರದೇಶಗಳಲ್ಲಿರುವ ಮಕ್ಕಳಿಗೆ ಅದು ಕಲಿಕೆಯ ಪ್ರಮುಖ ಮೂಲವಾಗಬಹುದು. ಹೀಗಾಗಿ, ಮಕ್ಕಳನ್ನು ಡಿಜಿಟಲ್ ಜಗತ್ತಿನಿಂದ ಸಂಪೂರ್ಣವಾಗಿ ದೂರವಿಡುವುದಕ್ಕಿಂತ ಸುರಕ್ಷಿತವಾಗಿ ಬಳಸಲು ನೆರವಾಗುವ ಕ್ರಮಗಳನ್ನು ರೂಪಿಸುವುದು ಅಗತ್ಯ ಎಂಬ ಸಂದೇಶವನ್ನು ಸುಪ್ರೀಂ ಕೋರ್ಟ್ ನೀಡಿದೆ.

 

 

 

.

 

.

.

.

 

 

 

 

 

 

 

 

 

 

 

 

 

.

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

                                       

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

Leave a Reply

Your email address will not be published. Required fields are marked *