

ಕಾರ್ಕಳ, ಅ.05: ಕಾರ್ಕಳದ ಜೋಡುರಸ್ತೆಯ ನಿವಾಸಿ ಬಿಲ್ಡರ್ ಮಂಜುನಾಥ ಪೈ(55) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ನಿರ್ಮಾಣ ಹಂತದ ತನ್ನದೇ ಮಾಲಕತ್ವದ ವಸತಿ ಸಮುಚ್ಚಯದ ಕಟ್ಟಡದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಂಜುನಾಥ ಪೈಯವರು ಎಂದಿನAತೆ ಮಂಗಳವಾರ ಮುಂಜಾನೆ ಕಾರ್ಕಳ ವೆಂಕಟರಮಣ ದೇವಸ್ಥಾನ ಹಾಗೂ ಕುಕ್ಕುಂದೂರು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹೋಗಿ ಬಂದು ಮನೆಯಿಂದ ನೇರವಾಗಿ ತನ್ನ ಫ್ಲಾö್ಯಟ್ ಹೆ ಬಂದು ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಬಿಲ್ಡರ್ ಆಗಿದ್ದ ಮಂಜುನಾಥ ಪೈಯವರು ಕಾರ್ಕಳದ ಸುತ್ತಮುತ್ತಲಿನಲ್ಲಿ ಹಲವು ವಸತಿ ಸಮುಚ್ಚಯಗಳನ್ನು ನಿರ್ಮಿಸಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಜೋಡುರಸ್ತೆಯಲ್ಲಿ 64 ಫ್ಲಾö್ಯಟ್ ಗಳ ವಸತಿ ಸಮುಚ್ಚಯ ಹಾಗೂ ಅಂಗಡಿ ಕೋಣೆಗಳ ಹೊಸ ಪ್ರಾಜೆಕ್ಟ್ ಆರಂಭಿಸಿದ್ದರು. ಈ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ವಿದ್ಯುತ್ ಸಂಪರ್ಕದ ವಿಚಾರದಲ್ಲಿ ಸ್ವಲ್ಪ ಸಮಸ್ಯೆಯಾಗಿತ್ತು ಎನ್ನಲಾಗಿದೆ.
ಆದರೆ ಆತ್ಮಹತ್ಯೆಗೆ ಕಾರಣ ಇನ್ನಷ್ಟೇ ತಿಳಿದುಬರಬೇಕಿತ್ತು, ಪೊಲೀಸರ ಸಮಗ್ರ ತನಿಖೆಯಿಂದಷ್ಟೇ ಸತ್ಯಾಂಶ ಹೊರಬರಲಿದೆ.
ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





.
.
.
.
.
.
.
.
.
.
.
.
.
.
.
.
.
.
.
.
