

ಕಾರ್ಕಳ,ಅ.20: ಬಿಜಾಪುರ ಮೂಲದ ವಿವಾಹಿತ ಯುವತಿಯೊಬ್ಬಳು ಕಾರ್ಕಳ ತಾಲೂಕು ಬೆಳ್ಮಣ್ ಗ್ರಾಮದಲ್ಲಿ ತಾನು ಮನೆಗೆಲಸ ಮಾಡುತ್ತಿದ್ದ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಲಕ್ಷ್ಮೀ ಹಿರೇಮಠ(22ವ) ಆತ್ಮಹತ್ಯೆ ಮಾಡಿಕೊಂಡ ಯುವತಿ. ಅವರು ಕಾರ್ಕಳ ತಾಲೂಕು ಬೆಳ್ಮಣ್ ಗ್ರಾಮದ ಮುಂಡ್ಕೂರು ರಸ್ತೆಯ ಇಂದಾರು ಎಂಬಲ್ಲಿರುವ ಆಲ್ಬರ್ಟ್ ಎಡ್ವರ್ಡ್ ಕಾರ್ಡೋಜ ರವರ ಮನೆಯಲ್ಲಿ ಕಳೆದ ಹಲವಯ ವರ್ಷಗಳಿಂದ ಮನೆ ಕೆಲಸ ಮಾಡಿಕೊಂಡಿದ್ದರು. ಮೃತ ಲಕ್ಷ್ಮೀ ಹಿರೇಮಠ ಅವರಿಗೆ ಮದುವೆಯಾಗಿ ಒಂದು ಮಗುವಿದ್ದು, ಈ ನಡುವೆ ಆಕೆ ಇನ್ನೊಬ್ಬ ಯುವಕನ ಜೊತೆ ಓಡಿ ಹೋಗಿ ಮದುವೆಯಾಗಿ ಬೆಂಗಳೂರಿನಲ್ಲಿ ಸ್ವಲ್ಪ ಸಮಯ ವಾಸವಿದ್ದಳು. ತದನಂತರ ಗಂಡನಿಗೆ ಊರಿಗೆ ಬರುವಂತೆ ಒತ್ತಾಯಿಸಿದರೂ ಆತ ಬರಲು ಒಪ್ಪದೇ ಇದ್ದಾಗ ಲಕ್ಷ್ಮೀ ಊರಿಗೆ ಬಂದು ಮತ್ತೆ ಆಲ್ಬರ್ಟ್ ಎಡ್ವರ್ಡ್ ಕಾರ್ಡೋಜ ಮನೆಯಲ್ಲಿ ಮನೆಗೆಲಸ ಮಾಡಿಕೊಂಡಿದ್ದರು. ಬಳಿಕ ಗಂಡನಿಲ್ಲದ ವಿಚಾರದಲ್ಲಿ ಮನನೊಂದು ಸೋಮವಾರ ಸಂಜೆ 3.30 ರ ವೇಳೆಗೆ ಆಲ್ಬರ್ಟ್ ಎಡ್ವರ್ಡ್ ಕಾರ್ಡೋಜ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಕ್ಷ್ಮೀ ಸೇರಿದಂತೆ ಐವರು ಹೆಣ್ಣು ಮಕ್ಕಳ ಪೈಕಿ ಮೂವರು ಆತ್ಮಹತ್ಯೆ ಮಾಡಿಕೊಂಡರೆ ಓರ್ವಳು ಖಾಯಿಲೆಯಿಂದ ಮೃತಪಟ್ಟಿದ್ದು ನಿಜಕ್ಕೂ ದುರಂತವೇ ಸರಿ.






.
.
.
.
.
.
.
.
.
.
.
.
.
.
.
.
.
.
.
.
