Share this news

ಕಾರ್ಕಳ, ಅ.28: ಮರ್ಣೆ ಗ್ರಾಮದ ಪ್ರಥಮ ಹಂತದ ಗ್ರಾಮ ಸಭೆಯು ಆಡಳಿತಾಧಿಕಾರಿ ಸುರೇಂದ್ರನಾಥ್ ಅಧ್ಯಕ್ಷತೆಯಲ್ಲಿ ಅಜೆಕಾರು ರಾಮ ಮಂದಿರದ ಸಭಾಂಗಣದಲ್ಲಿ ಅ.28ರಂದು ಬುಧವಾರ ನಡೆಯಿತು.
ಅಜೆಕಾರು ಚರ್ಚ್ ರಸ್ತೆಯ ದೆಪ್ಪುತ್ತೆ ಸಂಪರ್ಕ ರಸ್ತೆಯ ವಿಚಾರವನ್ನು ಪ್ರಸ್ತಾಪಿಸಿದ ಗ್ರಾಮಸ್ಥರು, ಕಳೆದ ಹಲವು ವರ್ಷಗಳಿಂದ ಹದಗೆಟ್ಟ ಈ ರಸ್ತೆಯಲ್ಲಿ ವಾಹನಗಳ ಓಡಾಟವೇ ಕಷ್ಟಕರವಾಗಿದೆ. ಈ ಹಿನ್ನಲೆಯಲ್ಲಿ 2 ಕೋ.ರೂ ಅನುದಾನ ಮಂಜೂರಾದರೂ ಅಧಿಕಾರಿಗಳು ಕಾಮಗಾರಿ ಆರಂಭಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಯಶೋಧಾ ಶೆಟ್ಟಿ, ಜಾನ್ ಟೆಲ್ಲಿಸ್, ಚರಿತ್ರಾ ಶೆಟ್ಟಿ ಮುಂತಾದವರು ಈ ವಿಷಯದ ಕುರಿತು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ರಸ್ತೆ ದುರಸ್ತಿಗೆ ಲೋಕೋಪಯೋಗಿ ಸಚಿವರು 2 ಕೋ.ರೂ ಅನುದಾನ ಮಂಜೂರುಗೊಳಿಸಿದ್ದರು. ಒಂದು ವರ್ಷವಾದರೂ ಕಾಮಗಾರಿ ನಡೆಸಲು ಇನ್ನೂ ಟೆಂಡರ್ ಕರೆದಿಲ್ಲ. ಮಾತ್ರವಲ್ಲದೇ ಅಧಿಕಾರಿಗಳು ಯಾವುದೇ ಮಾಹಿತಿ ನೀಡುತ್ತಿಲ್ಲ ಅಲ್ಲದೇ ಜನರ ಕಷ್ಟಕ್ಕೆ ಸ್ಪಂದಿಸದೇ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ, ಇಂತಹ ನಿರ್ಲಕ್ಷ್ಯತನದ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇದಕ್ಕೆ ಉತ್ತರಿಸಿದ ಆಡಳೀತಾಧಿಕಾರಿ ಸುರೇಂದ್ರನಾಥ್, ಈ ಕುರಿತು ಲೋಕೋಪಯೋಗಿ ಇಲಾಖೆಯಿಂದ ಮಾಹಿತಿ ಪಡೆದು ಮುಂದಿನ ಸಾಮಾನ್ಯ ಸಭೆಯಲ್ಲಿ ಕೈಗೊಂಡ ಕ್ರಮದ ಕುರಿತು ಮಾಹಿತಿ ನೀಡಲಾಗುವುದೆಂದು ಭರವಸೆ ನೀಡಿದರು.

ಅಜೆಕಾರು ಯೂನಿಯನ್ ಬ್ಯಾಂಕಿನಲ್ಲಿ ಈ ಹಿಂದೆ ಇದ್ದ ಆಧಾರ್ ಕಾರ್ಡ್ ನೋಂದಣಿ ವ್ಯವಸ್ಥೆಯು ಸ್ಥಗಿತಗೊಂಡಿದ್ದು ಇದರಿಂದ ಜನರಿಗೆ ತೊಂದರೆಯಾಗುತ್ತಿದೆ ಆದ್ದರಿಂದ ಮತ್ತೆ ಆಧಾರ್ ನೋಂದಣಿ ಕೌಂಟರ್ ಆರಂಭಿಸಬೇಕೆಂದು ಸಭೆಯಲ್ಲಿ ಆಗ್ರಹಿಸಲಾಯಿತು. ಇದಲ್ಲದೇ ಬ್ಯಾಂಕಿನ ಎಟಿಎಮ್ ರಾತ್ರಿ ಪಾಳಿಯಲ್ಲಿ ಬಂದ್ ಆಗಿದ್ದು ಇದರಿಂದ ತುರ್ತು ಸಂದರ್ಭದಲ್ಲಿ ಜನರಿಗೆ ತೊಂದರೆಯಾಗತ್ತಿದೆ ಎಂದು ಗ್ರಾಮಸ್ಥರು ದೂರಿದರು. ಇದಕ್ಕೆ ಬ್ಯಾಂಕಿನ ಅಧಿಕಾರಿ ಉತ್ತರಿಸಿ, ಆಧಾರ್ ಕಾರ್ಡ್ ನೋಂದಣಿ ಕೌಂಟರ್ ಮತ್ತೆ ಆರಂಭಿಸುವ ಕುರಿತು ಮೇಲಾಧಿಕಾರಿಗಳಿಗೆ ತಿಳಿಸುವುದಾಗಿ ಹೇಳಿದರು. ಗ್ರಾಮೀಣ ಪ್ರದೇಶಗಳ ಎಟಿಎಂಗಳಿಗೆ ಭದ್ರತಾ ಸಿಬ್ಬಂದಿ ಇಲ್ಲದ ಕಾರಣದಿಂದ ರಾತ್ರಿವೇಳೆ ಎಟಿಎಂ ತೆರೆಯಲು ಅವಕಾಶವಿಲ್ಲ, ಜನರಿಗೆ ತೊಂದರೆಯಾಗುತ್ತಿರುವ ಹಿನ್ನಲೆಯಲ್ಲಿ ಪ್ರಾದೇಶಿಕ ಕಚೇರಿಗೆ ಈ ಕುರಿತು ಪತ್ರ ಬರೆಯಾಗುವುದು ಎಂದರು.

ಮಳೆ ಕೊರತೆಯಿಂದ ಈ ಬಾರಿಯ ಬೇಸಗೆಯಲ್ಲಿ ಅವಧಿಪೂರ್ಣ ಜಲ ಕ್ಷಾಮ ತಲೆದೋರುವ ಸಾಧ್ಯತೆಯಿದ್ದು, ಇದಕ್ಕೆ ಅಧಿಕಾರಿಗಳು ಸಜ್ಜಾಗಬೇಕು ಎಂದು ರಾಘವೇಂದ್ರ ಆಚಾರ್ಯ ಅಧಿಕಾರಿಗಳಿಗೆ ಸಲಹೆ ನೀಡಿದರು. ಬೇಸಗೆಯಲ್ಲಿ ನೀರಿನ ಕೊರತೆ ಬಾಧಿಸುವ ಸಾಧ್ಯತೆಗಳಿದ್ದು, ಈ ನಿಟ್ಟಿನಲ್ಲಿ ವರಾಹಿ ನೀರಾವರಿ ಯೋಜನೆಯು ಸಂಪೂರ್ಣವಾಗಿ ಕಾರ್ಯಗತವಾದಲ್ಲಿ ನೀರಿನ ಸಮಸ್ಯೆಗೆ ಮುಕ್ತಿ ಸಿಗಲಿದೆ. ಆದರೆ ಹೆಬ್ರಿ ತಾಲೂಕಿನ ಹಲವೆಡೆ ಅರಣ್ಯ ವ್ಯಾಪ್ತಿಯಲ್ಲಿ ಪೈಪ್ ಲೈನ್ ಅಳವಡಿಕೆ ವಿಚಾರದಲ್ಲಿ ತಾಂತ್ರಿಕ ಸಮಸ್ಯೆಯಿದ್ದು, ಆದಷ್ಟು ಶೀಘ್ರವೇ ಬಗೆಹರಿಸಿ ನೀರು ಪೂರೈಸಲು ಪ್ರಯತ್ನಿಸುವುದಾಗಿ ಆಡಳಿತಾಧಿಕಾರಿ ಹಾಗೂ ನೀರಾವರಿ ವಿಭಾಗದ ಎಇಇ ಸುರೇಂದ್ರನಾಥ್ ಭರವಸೆ ನೀಡಿದರು.

ವಿವಿಧ ಇಲಾಖೆಗಳ ಅಧಿಕಾರಿಗಳು ಇಲಾಖೆಯ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ನೋಡಲ್ ಅಧಿಕಾರಿಯಾಗಿ ಅಕ್ಷರ ದಾಸೋಹ ಇಲಾಖೆಯ ಭಾಸ್ಕರ.ಟಿ, ಕಾರ್ಕಳ ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸ,ಬಿ.ವಿ, ಎಎಸ್‌ಐ ನಾಗೇಶ್, ಜಿ.ಪಂ ಕಿರಿಯ ಇಂಜಿನಿಯರ್ ಸದಾನಂದ ನಾಯ್ಕ್, ಅಜೆಕಾರು ಪಶು ಸಂಗೋಪನೆ ಇಲಾಖೆಯ ಪರಿವೀಕ್ಷಕ ಸುರೇಶ್ ರಾಥೋಡ್ ಮುಂತಾದವರು ಉಪಸ್ಥಿತರಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಂಕಿತಾ ನಾಯಕ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಂಪ್ಯೂಟರ್ ವಿಭಾಗದ ಅಶ್ವಿತಾ ವಂದಿಸಿದರು.
ಪಂಚಾಯತ್  ಸಿಬ್ಬಂದಿಗಳಾದ ಅರುಂಧತಿ ಶೆಟ್ಟಿ, ವಸಂತ, ಚಂದ್ರಶೇಖರ,ಕಾಂತಿ, ಜಯಶ್ರೀ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

 

 

.

 

.

.

.

 

 

 

 

 

 

 

 

 

 

 

 

 

.

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

                                       

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

                 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

Leave a Reply

Your email address will not be published. Required fields are marked *