

ಮಣಿಪಾಲ,ಅ.28: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ನ ಘಟಕ ಬೋಧನಾ ಆಸ್ಪತ್ರೆಯಾದ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ಡಾ. ಅಕ್ಷಯ ಪ್ರತಾಪ್ ಸಿಂಗ್ ಅವರು ಕಾರ್ಡಿಯೋಥೊರಾಸಿಕ್ ಮತ್ತು ವ್ಯಾಸ್ಕುಲರ್ ಶಸ್ತ್ರಚಿಕಿತ್ಸಾ (ಹೃದಯ ಶಸ್ತ್ರಚಿಕಿತ್ಸೆ)ವಿಭಾಗದ ಸಲಹಾ ತಜ್ಞರಾಗಿ ಸೇರ್ಪಡೆಗೊಂಡಿದ್ದಾರೆ. ಅವರು 15 ಅಕ್ಟೋಬರ್ 2026ರಿಂದ ಸಲಹೆಗೆ ಲಭ್ಯರಿದ್ದಾರೆ.
ಡಾ. ಅಕ್ಷಯ ಪ್ರತಾಪ್ ಸಿಂಗ್ ಅವರು ದಾವಣಗೆರೆಯ ಜೆ.ಜೆ.ಎಂ. ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದರು. ನಂತರ ಕಾರ್ಡಿಯೋಥೊರಾಸಿಕ್ ಮತ್ತು ವ್ಯಾಸ್ಕುಲರ್ ಶಸ್ತ್ರಚಿಕಿತ್ಸೆಯಲ್ಲಿ ದೆಹಲಿಯಿಂದ ಡಿಎನ್ಬಿ ಮತ್ತು ಬೆಂಗಳೂರಿನ ನಾರಾಯಣ ಇನ್ಸ್ಟಿಟ್ಯೂಟ್ನಲ್ಲಿ ಕಾರ್ಡಿಯೋಥೊರಾಸಿಕ್ ಮತ್ತು ವ್ಯಾಸ್ಕುಲರ್ ಶಸ್ತ್ರಚಿಕಿತ್ಸೆಯಲ್ಲಿ ಹಾಗೂ ಮಿನಿಮಲಿ ಇನ್ವೇಸಿವ್ ಕಾರ್ಡಿಯಾಕ್ ಸರ್ಜರಿ (ಎಂಐಸಿಎಸ್)ಯಲ್ಲಿ ಫೆಲೋಶಿಪ್ ಪಡೆದಿದ್ದಾರೆ. ಕಸ್ತೂರ್ಬಾ ಆಸ್ಪತ್ರೆಗೆ ಸೇರುವ ಮೊದಲು ಅವರು ಪುಣೆ ಮತ್ತು ನಾಗಪುರದ ಆಸ್ಪತ್ರೆಗಳಲ್ಲಿ ಕಾರ್ಡಿಯೋಥೊರಾಸಿಕ್ ಮತ್ತು ವ್ಯಾಸ್ಕುಲರ್ ಶಸ್ತ್ರಚಿಕಿತ್ಸಾ ಸಲಹಾ ತಜ್ಞರಾಗಿ ಸೇವೆ ಸಲ್ಲಿಸಿದ್ದಾರೆ.
ಡಾ. ಅಕ್ಷಯ ಪ್ರತಾಪ್ ಸಿಂಗ್ ಅವರು ಹೃದಯ ಶಸ್ತ್ರಚಿಕಿತ್ಸೆಯಲ್ಲಿ ವ್ಯಾಪಕ ಅನುಭವ ಹೊಂದಿದ್ದಾರೆ. ಕೊರೊನರಿ ಆರ್ಟರಿ ಬೈಪಾಸ್ ಗ್ರಾಫ್ಟಿಂಗ್ (ಸಿಎಬಿಜಿ), ಮಿನಿಮಲಿ ಇನ್ವೇಸಿವ್ ಹೃದಯ ಶಸ್ತ್ರಚಿಕಿತ್ಸೆ, ಮೈಟ್ರಲ್ ಮತ್ತು ಅಯೋರ್ಟಿಕ್ ಕವಾಟಗಳ ದುರಸ್ತಿ ಮತ್ತು ಬದಲಾವಣೆ, ಮರು-ಹೃದಯ ಶಸ್ತ್ರಚಿಕಿತ್ಸೆ (ರಿಡೂ ಸರ್ಜರಿ), ಸಂಕೀರ್ಣ ಅಯೋರ್ಟಿಕ್ ಶಸ್ತ್ರಚಿಕಿತ್ಸೆಗಳು ಹಾಗೂ ಆಯ್ದ ಜನ್ಮಜಾತ ಹೃದಯ ಶಸ್ತ್ರಚಿಕಿತ್ಸೆಗಳು ಅವರ ಕಾರ್ಯಕ್ಷೇತ್ರದಲ್ಲಿ ಸೇರಿವೆ. ಡಾ. ಸಿಂಗ್ ಅವರನ್ನು ಸ್ವಾಗತಿಸಿದ ಮಾಹೆ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಒಒ) ಡಾ. ಸುಧಾಕರ್ ಕಂಟಿಪುಡಿ ಅವರು, “ಡಾ. ಅಕ್ಷಯ ಪ್ರತಾಪ್ ಸಿಂಗ್ ಅವರನ್ನು ಮಾಹೆ ಕುಟುಂಬಕ್ಕೆ ಸ್ವಾಗತಿಸಲು ನಮಗೆ ಸಂತೋಷವಾಗಿದೆ. ಮಿನಿಮಲಿ ಇನ್ವೇಸಿವ್ ಹೃದಯ ಶಸ್ತ್ರಚಿಕಿತ್ಸೆಯಲ್ಲಿ ಅವರ ತರಬೇತಿ ಹಾಗೂ ವಿವಿಧ ಸಂಕೀರ್ಣ ಹೃದಯ ಶಸ್ತ್ರಚಿಕಿತ್ಸೆಗಳಲ್ಲಿನ ಅನುಭವವು ನಮ್ಮ ಕಾರ್ಡಿಯೋಥೊರಾಸಿಕ್ ಮತ್ತು ವ್ಯಾಸ್ಕುಲರ್ ಶಸ್ತ್ರಚಿಕಿತ್ಸಾ ಸೇವೆಗಳನ್ನು ಇನ್ನಷ್ಟು ಬಲಪಡಿಸಲಿದೆ. ಇದರಿಂದ ಕರಾವಳಿ ಕರ್ನಾಟಕ ಹಾಗೂ ಸುತ್ತಮುತ್ತಲಿನ ರೋಗಿಗಳಿಗೆ ಸುಧಾರಿತ ಹೃದಯ ಶಸ್ತ್ರಚಿಕಿತ್ಸಾ ಸೇವೆಯನ್ನು ಅವರ ಊರಿನ ಸಮೀಪದಲ್ಲೇ ಒದಗಿಸಲು ಸಾಧ್ಯವಾಗಲಿದೆ” ಎಂದು ಹೇಳಿದರು.
ಡಾ. ಸಿಂಗ್ ಅವರು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಕಾರ್ಡಿಯೋಥೊರಾಸಿಕ್ ಮತ್ತು ವ್ಯಾಸ್ಕುಲರ್ ಸರ್ಜರಿ ವಿಭಾಗದಲ್ಲಿ ಸಮಾಲೋಚನೆಗಾಗಿ ಲಭ್ಯವಿರುತ್ತಾರೆ. ಅಪಾಯಿಂಟ್ಮೆAಟ್ಗಾಗಿ, ದಯವಿಟ್ಟು 0820 2575555 ಸಂಖ್ಯೆಗೆ ಅಥವಾ ಹೆಲ್ಪ್ ಡೆಸ್ಕ್ ಸಂಖ್ಯೆ 0820 2922761 ಕ್ಕೆ ಕರೆ ಮಾಡಬಹುದು ಎಂದು ತಿಳಿಸಿದ್ದಾರೆ.





.
.
.
.
.
.
.
.
.
.
.
.
.
.
.
.
.
.
.
.
