

ಕಾರ್ಕಳ,ನ.22: ಕಾರ್ಕಳದಲ್ಲಿ ಬಾಹುಬಲಿ, ಕೋಟಿ ಚೆನ್ನಯ್ಯ ಥೀಮ್ ಪಾರ್ಕ್ , ಸೃಷ್ಟಿಕರ್ತ ಪರಶುರಾಮ ಥೀಮ್ ಪಾರ್ಕ್ ಸೇರಿದಂತೆ ಮೂರನ್ನು ಒಳಗೊಂಡ ಸಮೃದ್ಧ ಕ್ಷೇತ್ರವಾಗಿದೆ. ಕಾರ್ಕಳವನ್ನು ಪ್ರವಾಸೋದ್ಯಮದ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಬೇಕೆಂದು ನಾವು ಪ್ರಯತ್ನಿಸಿದರೆ, ಕಾಂಗ್ರೆಸ್ ನಾಯಕರು ಪ್ರವಾಸೋದ್ಯಮಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಕಳೆದ 4 ವರ್ಷಗಳಿಂದ ಪರಶುರಾಮ ಥೀಮ್ ಪಾರ್ಕ್ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿದ್ದಾರೆ. ಯಾರು ಕಾರ್ಕಳವನ್ನು ಪ್ರೀತಿಸುತ್ತಾರೋ, ಯಾರಿಗೆ ಕಾರ್ಕಳದ ಬಗ್ಗೆ ಅಭಿಮಾನ ಇದೆಯೋ ಅವರು ಪರಶುರಾಮ ಥೀಮ್ ಪಾರ್ಕಿಗೆ ಅಡ್ಡಿಪಡಿಸುವುದಿಲ್ಲ. ಆದರೆ ಕಾಂಗ್ರೆಸ್ ನಾಯಕರಿಗೆ ಕಾರ್ಕಳದ ಅಭಿವೃದ್ಧಿ ಬೇಕಿಲ್ಲ ಅವರಿಗೆ ಪರಶುರಾಮ ಥೀಮ್ ಪಾರ್ಕ್ ರಾಜಕೀಯದ ವಿಷಯವಾದರೆ, ನಮಗೆ ಅಭಿವೃದ್ಧಿಯ ವಿಚಾರವಾಗಿದೆ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೇಳಿದರು.
ಅವರು ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ನ.22ರಂದು ಪರಶುರಾಮ ಥೀಮ್ ಪಾರ್ಕ್ ಸಾರ್ವಜನಿಕರಿಗೆ ಮುಕ್ತಗೊಳಿಸುವಂತೆ ಒತ್ತಾಯಿಸಿ ನಡೆದ ಜನಾಗ್ರಹ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಪರಶುರಾಮ ಥೀಮ್ ಪಾರ್ಕಿನ ಪರಶುರಾಮ ಮೂರ್ತಿಯ ಮರವಿನ್ಯಾಸ ಮಾಡಲು ಶಿಲ್ಪಿಗೆ ಅನುಮತಿ ನೀಡಿದ್ದು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯೇ ಹೊರತು ನಾವಲ್ಲ ಎಂದರು. ಪ್ರತಿನಿತ್ಯ ಪರಶುರಾಮ ಥೀಮ್ ಪಾರ್ಕ್ ಸರಿಯಿಲ್ಲ ಎಂದು ಅಪಪ್ರಚಾರ ಮಾಡಿಕೊಂಡು ತಿರುಗಾಡುವ ಕಾಂಗ್ರೆಸ್ ನಾಯಕರಿಗೆ ಪರಶುರಾಮ ಮೂರ್ತಿ ಫೈಬರಿದ್ದೋ ಅಥವಾ ಕಂಚೋ ಎಂದು ತನಿಖೆ ನಡೆಸಲು 4 ವರ್ಷಗಳು ಬೇಕೇ ಎಂದು ಪ್ರಶ್ನಿಸಿದರು.
ಕಾರ್ಕಳದ ಜನ 2004ರಿಂದ ನನ್ನನ್ನು ಶಾಸಕರನ್ನಾಗಿ ಮಾಡಿದ್ದಾರೆ, ಡಬ್ಬಿ ಬಾರಿಸಿಕೊಂಡು 20 ವರ್ಷ ಓಡಾಡಿದ ಕಾಂಗ್ರೆಸ್ ನಾಯಕರು ನನ್ನ ಮೇಲೆ ಒಂದೇ ಒಂದು ಭ್ರಷ್ಟಾಚಾರ ಆರೋಪ ಸಾಬೀತುಪಡಿಸಲು ಸಾಧ್ಯವಾಯಿತೇ ಎಂದು ಪ್ರಶ್ನಿಸಿದರು. ಸುಳ್ಳು ಆರೋಪ ಮಾಡುತ್ತಿರುವ ಉದಯ ಶೆಟ್ಟಿಯವರೇ ನೀವು ನನ್ನನ್ನು ಸೇರಿಸಿ ಎಷ್ಟು ಜನರಿಗೆ ಬಾಕಿ ಇರಿಸಿದ್ದೀರಿ ಎನ್ನುವುದು ಗೊತ್ತಿದೆ, ಅದೆಲ್ಲವನ್ನು ಮುಂದಿನ ಸಭೆಯಲ್ಲಿ ಹೇಳುತ್ತೇನೆ ಎಂದರು. ಉದಯ ಶೆಟ್ಟಿಯವರೇ ನಿಮಗೆ ಯೋಗವೂ ಇಲ್ಲ, ಯೋಗ್ಯತೆಯೂ ಇಲ್ಲ. ಮನಸ್ಸಿನಲ್ಲಿ ಕಲ್ಮಶ ತುಂಬಿಕೊAಡು ಬಿಳಿ ಡ್ರೆಸ್ ಹಾಕಿ ಓಡಾಡಿದರೆ ವ್ಯಕ್ತಿತ್ವ ಪರಿಶುದ್ಧವಾಗಲು ಸಾಧ್ಯವಿಲ್ಲ ಎಂದರು.ಕಾರ್ಕಳದ ಜನರಿಗೆ ಸತ್ಯ ಏನು ಎಂದು ಚೆನ್ನಾಗಿ ಗೊತ್ತಿದೆ. ನಿಮ್ಮ ಬೆದರಿಕೆಗೆ ಒತ್ತಡಕ್ಕೆ ಹೆದರುವ ವ್ಯಕ್ತಿ ನಾನಲ್ಲ. ಎಲ್ಲವನ್ನು ಎದುರಿಸಿ ಹೋರಾಡುವ ಶಕ್ತಿ ನನಗಿದೆ ಎಂದರು. ಮುಂದಿನ ಬಾಹುಬಲಿ ಮಸ್ತಕಾಭಿಷೇಕದ ಒಳಗಾಗಿ ಪರಶುರಾಮ ಥೀಮ್ ಪಾರ್ಕ್ ಮರು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕೆAದು ಎಂದರು.
ಈ ಸಂದರ್ಭದಲ್ಲಿ ಜನಾಗ್ರಹ ಸಮಿತಿ ಅಧ್ಯಕ್ಷ ಸಚ್ಚಿದಾನಂದ ಶೆಟ್ಟಿ, ಶಾಸಕರಾದ ವೇದವ್ಯಾಸ ಕಾಮತ್, ಹರೀಶ್ ಪೂಂಜಾ, ಡಾ. ಭರತ್ ಶೆಟ್ಟಿ,ಗುರ್ಮೆ ಸುರೇಶ್ ಶೆಟ್ಟಿ,ಯಶ್ಪಾಲ್ ಸುವರ್ಣ, ಬಿಜೆಪಿ ಹಿರಿಯ ಮುಖಂಡ ಬೋಳ ಪ್ರಭಾಕರ ಕಾಮತ್,ವಕೀಲರಾದ ಮಣಿರಾಜ ಶೆಟ್ಟಿ,ವೆಂಕಪ್ಪ ಹೆಗ್ಡೆ, ರತ್ನಾಕರ ಶೆಟ್ಟಿ ಮುಂಡ್ಕೂರು, ಚಂದ್ರಶೇಖರ ಮಾಡ, ಸುಧೀರ್ ಹೆಗ್ಡೆ, ಪ್ರಕಾಶ್ ಶೆಟ್ಟಿ, ರಾಜೇಂದ್ರ ಶೆಟ್ಟಿ, ಸಂತೋಷ್ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸುಮಿತ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ರಮೇಶ್ ಕಲ್ಲೊಟ್ಟೆ ಸ್ವಾಗತಿಸಿದರು. ಉದಯ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.





.
.
.
.
.
.
.
.
.
.
.
.
.
.
.
.
.
.
.
.
