

ನವದೆಹಲಿ,ನ.28: ಕೆನಡಾದ ಫೇರ್ಫ್ಯಾಕ್ಸ್ ಫೈನಾನ್ಷಿಯಲ್ ಹೋಲ್ಡಿಂಗ್ಸ್ ಸಂಸ್ಥೆಗೆ ಐಡಿಬಿಐ ಬ್ಯಾಂಕ್ ಅನ್ನು ಮಾರಾಟ ಮಾಡುವ ನಿರ್ಧಾರವನ್ನು ವಿರೋಧಿಸಿ ಬ್ಯಾಂಕ್ ನೌಕರರ ಸಂಘಗಳು ಡಿಸೆಂಬರ್ 3ರಂದು ದೇಶವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಈ ಮುಷ್ಕರವು ಬ್ಯಾಂಕ್ ಶಾಖೆಗಳ ಕಾರ್ಯಾಚರಣೆ ಮತ್ತು ಗ್ರಾಹಕರಿಗೆ ಲಭ್ಯವಿರುವ ಸೇವೆಗಳ ಮೇಲೆ ಗಮನಾರ್ಹ ಪರಿಣಾಮ ಬೀರುವ ಸಾಧ್ಯತೆಯಿದೆ.
ಐಡಿಬಿಐ ಬ್ಯಾಂಕ್ನ ನೌಕರರು ಮತ್ತು ಅಧಿಕಾರಿಗಳು ಈ ಮಾರಾಟವನ್ನು ವಿರೋಧಿಸುತ್ತಿದ್ದು, ಈ ಹೋರಾಟಕ್ಕೆ ಬೆಂಬಲವಾಗಿ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ (ಎಐಬಿಒಎ) ಮತ್ತು ಭಾರತೀಯ ಬ್ಯಾಂಕ್ ನೌಕರರ ಒಕ್ಕೂಟ (ಬಿಇಎಫ್ಐ) ಮುಷ್ಕರದಲ್ಲಿ ಪಾಲ್ಗೊಳ್ಳುವಂತೆ ಇತರ ಬ್ಯಾಂಕ್ಗಳ ನೌಕರರನ್ನು ಒತ್ತಾಯಿಸಿವೆ. ಈ ದೇಶವ್ಯಾಪಿ ಮುಷ್ಕರದಲ್ಲಿ ಸುಮಾರು 3 ಲಕ್ಷ ಬ್ಯಾಂಕ್ ನೌಕರರು ಭಾಗವಹಿಸುವ ಸಾಧ್ಯತೆಯಿದೆ. ಇದರಿಂದಾಗಿ ಹಲವಾರು ಸಾರ್ವಜನಿಕ ವಲಯದ ಬ್ಯಾಂಕ್ಗಳು ಮತ್ತು ಕೆಲವು ಖಾಸಗಿ ಬ್ಯಾಂಕ್ಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗುವ ಸಂಭವವಿದೆ. ಆದರೆ, ಮುಷ್ಕರದ ಪರಿಣಾಮವು ವಿವಿಧ ಬ್ಯಾಂಕ್ಗಳಲ್ಲಿ ಭಿನ್ನವಾಗಿರಬಹುದು ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಹಾಗೂ ಇಂಡಿಯನ್ ಓವರ್ಸೀಸ್ ಬ್ಯಾಂಕ್ನಲ್ಲಿ ನೌಕರರ ಪಾಲ್ಗೊಳ್ಳುವಿಕೆ ಕಡಿಮೆ ಇರುವ ನಿರೀಕ್ಷೆಯಿದೆ.
ಮುಷ್ಕರದ ಹಿನ್ನಲೆಯಲ್ಲಿ ಗ್ರಾಹಕರು ಬ್ಯಾಂಕ್ ಶಾಖೆಗಳಲ್ಲಿ ನಗದು ಠೇವಣಿ ಮತ್ತು ಹಿಂಪಡೆಯುವಿಕೆ, ಚೆಕ್ ವಿಲೇವಾರಿ, ಡ್ರಾಫ್ಟ್ಗಳು ಮತ್ತು ಇತರ ಕೌಂಟರ್ ಸೇವೆಗಳಲ್ಲಿ ವಿಳಂಬ ಅಥವಾ ಸಮಸ್ಯೆಗಳನ್ನು ಎದುರಿಸಬಹುದು. ಸೇವಾ ವ್ಯತ್ಯಯದ ಪ್ರಮಾಣವು ಬ್ಯಾಂಕ್ ನೌಕರರ ಪಾಲ್ಗೊಳ್ಳುವಿಕೆಯ ಮಟ್ಟವನ್ನು ಅವಲಂಬಿಸಿರುತ್ತದೆ. ಆನ್ಲೈನ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಯುಪಿಐ ಮತ್ತು ಎಟಿಎಂಗಳAತಹ ಡಿಜಿಟಲ್ ಸೇವೆಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತವೆಯಾದರೂ, ತಾಂತ್ರಿಕ ಅಥವಾ ಕಾರ್ಯಾಚರಣೆಯ ಸಮಸ್ಯೆಗಳು ಎದುರಾಗಬಹುದು. ಆದ್ದರಿಂದ ಗ್ರಾಹಕರು ಚೆಕ್ ಜಮಾ ಮಾಡುವುದು, ನಗದು ಹಿಂಪಡೆಯುವುದು, ದಾಖಲೆಗಳ ಕೆಲಸ ಅಥವಾ ಯಾವುದೇ ಅಗತ್ಯ ವಹಿವಾಟುಗಳನ್ನು ನಡೆಸಬೇಕಿದ್ದರೆ ಡಿಸೆಂಬರ್ 3ರ ಮೊದಲೇ ಪೂರ್ಣಗೊಳಿಸುವುದು ಉತ್ತಮವಾಗಿದೆ.






.
.
.
.
.
.
.
.
.
.
.
.
.
.
.
.
.
.
.
.
