ಅಜೆಕಾರು: ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ವ್ಯಕ್ತಿಯೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆಯೊಡ್ಡಿದ ಘಟನೆ ಮರ್ಣೆ ಗ್ರಾಮದ ಅಜೆಕಾರು ದೆಪ್ಪುತ್ತೆ ಎಂಬಲ್ಲಿ ಡಿ.19 ರಂದು ನಡೆದಿದೆ.
ಶಿರ್ಲಾಲಿನ ಸುನಂದ ಎಂಬವರು ಕಳೆದ 4 ವರ್ಷಗಳಿಂದ ಸದಾಶಿವ ಎಂಬವರ ಜೊತೆಗೆ ಕೆಲಸ ಮಾಡಿಕೊಂಡಿದ್ದರು. ಅದರಂತೆ ಡಿ.19 ರಂದು ಸದಾಶಿವ ಅವರ ಸೂಚನೆ ಮೇರೆಗೆ ದೆಪ್ಪುತ್ತೆಯ ರೇಷ್ಮಾ ಟೆಲಿಸ್ ಕ್ರಿಸ್ಪಾಲ್ ರವರ ತೋಟದಲ್ಲಿ ಜ್ಯೋತಿ, ಸಂಕ್ರಾಯ , ವಿಜಯ ರವರ ಜೊತೆ ಕೆಲಸ ಮಾಡುತ್ತಿದ್ದಾಗ ಸ್ಥಳಕ್ಕೆ ಬಂದ ಪ್ರದೀಪ್ ಅವರು ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆಗೆ ಯತ್ನಿಸಿ, ಕೊಲೆ ಬೆದರಿಕೆ ಹಾಕಿದ್ದಾರೆಂದು ಸುನಂದ ದೂರು ನೀಡಿದ್ದು, ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
