

ಕಾರ್ಕಳ,ನ.21: ಏಕಲವ್ಯನಿಂದ ಶ್ರದ್ಧೆಯನ್ನು, ಕೃಷ್ಣ- ಸುಧಾಮರ ಗೆಳೆತನದ ಪ್ರಜ್ಞೆಯನ್ನು ಹಾಗೂ ಶಬರಿಯ ಭಕ್ತಿ ನಮಗೆ ಮಾದರಿಯಾದುದು. ಇಂತಹ ಮಾದರಿಗಳು ನಮ್ಮಲ್ಲಿ ಭಾವಾನಾತ್ಮಕವಾದ ಬೆಸುಗೆ ಒದಗಿಸಿದೆ. ಆದರೆ ಹಿಂದಿನ ಕೆಲವು ಸಂಶೋಧನೆಗಳು ಇಂದು ಮಾರಕವಾಗುತ್ತಿರುವಾಗ, ಭಾವಾನಾತ್ಮಕ ಸಂಬAಧಗಳು ದೂರವಾಗುತ್ತಿರುವ ಈ ಹೊತ್ತಿನಲ್ಲಿ ಜ್ಞಾನದೊಂದಿಗೆ ವಿವೇಕ ಬಹಳ ಮುಖ್ಯ. ಜ್ಞಾನಸುಧಾ ಶಿಕ್ಷಣದೊಂದಿಗೆವಿದ್ಯಾರ್ಥಿಗಳಿಗೆ ಸಂಸ್ಕಾರವನ್ನು ನೀಡಿ ಸಮಾಜಕ್ಕೆ ಧಾರೆಯೆರೆಯುತ್ತಿರುವ ಕಾರ್ಯ ಪ್ರಶಂಸನೀಯ ಎಂದು ಹಟ್ಟಿಯಂಗಡಿ ಶ್ರೀ ಸಿದ್ದಿವಿನಾಯಕ ವಸತಿ ಶಾಲೆಯ ಪ್ರಾಂಶುಪಾಲ ಶರಣ ಕುಮಾರ ಹೇಳಿದರು.
ಅವರು ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಜ್ಞಾನಸಂಭ್ರಮ-2026ರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅಭ್ಯಾಗತರಾಗಿ ಉಪಸ್ಥಿತರಿದ್ದ ಕಾರ್ಕಳದ ಹಿತ ಆಯುರ್ವೇದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಎಂ. ರವಿರಾಜ ಶೆಟ್ಟಿಯವರು, ಮಾತನಾಡಿ ಆಟ-ಪಾಠ-ಊಟ ಇವೆಲ್ಲದರ ಒಳ್ಳೆಯ ಅಬ್ಯಾಸವು ಜೀವನೋತ್ಸಾಹವನ್ನು ತರುತ್ತದೆ. ವಿದ್ಯಾರ್ಥಿ ದೆಸೆಯಲ್ಲಿಯೇ ದೈಹಿಕ- ಮಾನಸಿಕವಾದ ಆರೋಗ್ಯವನ್ನು ಸಧೃಢವಾಗಿರಿಸಿಕೊಂಡವರು ಶೈಕ್ಷಣಿಕವಾಗಿ ಸಹಿತ ಸರ್ವ ಕ್ಷೇತ್ರದಲ್ಲಿಯೂ ಯಶಸ್ವಿಯಾಗಲು ಸಾಧ್ಯ. ಡಾ.ಸುಧಾಕರ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಸಾಧನೆಯ ಜೊತೆಗೆ ಕ್ರೀಡಾ ಹಾಗೂ ಸಾಂಸ್ಕೃತಿಕ ಕ್ಷೇತ್ರದೊಂದಿಗೆ ಮೌಲ್ಯಯುತವಾಗಿ ಸಾಗಿ ಬರುತ್ತಿರುವುದು ಶ್ಲಾಘನೀಯ ಎಂದರು.
ಇದೇ ಸಂದರ್ಭ ಸಂಸ್ಥೆಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಬಿಸ್ನೆಸ್ ಫೇರ್ – ರ್ನ್ ಮತ್ತು ರ್ನ್ನಿಂದ ಗಳಿಸಿದ ಲಾಭಾಂಶ ರೂ 20ಸಾವಿರವನ್ನು ಆನೆಕೆರೆ ಸಮೀಪದ ನಿವಾಸಿ ಅನಾರೋಗ್ಯ ಪೀಡಿತ ವಿಘ್ನೇಶ್ರವರಿಗೆ ಗಣ್ಯರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.
2026ನೇ ಸಾಲಿನ ರಾಷ್ಟç, ರಾಜ್ಯಮಟ್ಟದಲ್ಲಿ ಸಾಧನೆಗೈದ ಕ್ರೀಡಾ ಸಾಧಕರನ್ನು, ಕಾಲೇಜು ಹಂತದಲ್ಲಿ ನಡೆಸಿದ ಸಾಂಸ್ಕೃತಿಕ ಸ್ಪರ್ಧೆಯ ವಿಜೇತರನ್ನು ಗುರುತಿಸಿ ಗೌರವಿಸಲಾಯಿತು. ಸಮಗ್ರ ಕ್ರೀಡಾ ಪ್ರಶಸ್ತಿಯನ್ನು ಪ್ರಥಮ ಪಿಯುಸಿಯ ಬಿ-1 ತನ್ನದಾಗಿಸಿಕೊಂಡಿತು.ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀ ಸಾಹಿತ್ಯ ಹಾಗೂ ಶ್ರೀಮತಿ ಉಷಾ ರಾವ್ ಯು, ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢಶಾಲೆಯ ಉಪಪ್ರಾಂಶುಪಾಲೆ ಶ್ರೀಮತಿ ವಾಣಿ ಕೆ, ಡೀನ್ ಅಕಾಡೆಮಿಕ್ ಡಾ. ಮಿಥುನ್ ಯು, ಡೀನ್ ಸ್ಟೂಡೆಂಟ್ ಅಫೈರ್ ಶ್ರೀಮತಿ ಶಕುಂತಳಾ ಎಂ ಸುವರ್ಣ, ಜ್ಞಾನಸುಧಾ ಎಂಟ್ರನ್ಸ್ ಅಕಾಡೆಮಿ ಸಂಯೋಜಕ ಶ್ರೀ ಸಂದೀಪ, ವಿದ್ಯಾರ್ಥಿ ನಾಯಕರಾದ ವಿಶ್ವನಾಥ್ ಎಸ್ ಎನ್ ಹಾಗೂ ಗ್ರೀಷ್ಮಾ ಎಸ್ ಉಪಸ್ಥಿತರಿದ್ದರು.
ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪ್ರಾಂಶುಪಾಲ ದಿನೇಶ್ ಎಂ ಕೊಡವೂರ್ ಸ್ವಾಗತಿಸಿ, ಪಿ.ಆರ್.ಒ ಜ್ಯೋತಿ ಪದ್ಮನಾಭ ಭಂಡಿ ವಂದಿಸಿದರು. ವಾರ್ಷಿಕ
ವರದಿಯನ್ನು ಭೌತಶಾಸ್ತç ವಿಭಾಗದ ಶರತ್ ಆಚಾರ್ಯ, ಸಾಧಕರ ಪಟ್ಟಿಯನ್ನು ಆಂಗ್ಲಭಾಷಾ ವಿಭಾಗದ ಕು.ದಿವ್ಯ, ಜೀವಶಾಸ್ತç ವಿಭಾಗದ ಕು.ಸಹನ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕಿ ಶ್ರೀಮತಿ ಸೌಜನ್ಯ ಹೆಗ್ಡೆ ವಾಚಿಸಿದರು. ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸಂಗೀತ ಕುಲಾಲ್ ನಿರೂಪಿಸಿದರು.





.
.
.
.
.
.
.
.
.
.
.
.
.
.
.
.
.
.
.
.
