Author: karavalinews

ಹಾಲಿನ ಬೆಲೆ ಹೆಚ್ಚಳ ವಿರೋಧಿಸುವ ಬಿಜೆಪಿಗರಿಗೆ ಹೈನುಗಾರರ ಕಷ್ಟ ಅರಿಯಲು ಸಾದ್ಯವಿಲ್ಲ: ಕಾಂಗ್ರೆಸ್ ವಕ್ತಾರ ಬಿಪಿನ್’ಚಂದ್ರ ಪಾಲ್

ಕಾರ್ಕಳ: ಹಸುವನ್ನು ಗೋಮಾತೆ ಎಂದು ಪೂಜಿಸುವುದಕ್ಕೆ ಮಾತ್ರ ಗೊತ್ತಿರುವ ಬಿಜೆಪಿಗರಿಗೆ ಹೈನುಗಾರರ ಕಷ್ಟವನ್ನು ಅರಿಯಲು ಸಾಧ್ಯವಿಲ್ಲ,ಆದ್ದರಿಂದ ಹಾಲಿನ ಬೆಲೆ ಹೆಚ್ಚಳವನ್ನು ವಿರೋಧಿಸುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್’ಚಂದ್ರ ಪಾಲ್ ನಕ್ರೆ ಟೀಕಿಸಿದ್ದಾರೆ. ರಾಜ್ಯದ ರೈತರು ಹಾಗೂ ಹೈನುಗಾರರ ಬೇಡಿಕೆಯಂತೆ…

ಹೆಬ್ರಿ ನಾಡ್ಪಾಲಿನಲ್ಲಿ ಭೀಕರ ಅಪಘಾತ: ಬೊಲೆರೊ -ಸ್ವಿಫ್ಟ್ ಕಾರು ಮುಖಾಮುಖಿ ಡಿಕ್ಕಿ: ಓರ್ವ ಸಾವು

ಹೆಬ್ರಿ: ಮಹೀಂದ್ರಾ ಬೊಲೆರೊ ಹಾಗೂ ಮಾರುತಿ ಸ್ವಿಫ್ಟ್ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಓರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಜಕ್ಕನಮಕ್ಕಿ ಎಂಬಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದೆ.ಮೃತಪಟ್ಟ ಪ್ರಯಾಣಿಕನನ್ನು ಬಿಸ್ತ್ವಾನ್ ಎಂದು ಗುರುತಿಸಲಾಗಿದೆ. ಸಾಗರದಿಂದ ಮಣಿಪಾಲ…

ಉಡುಪಿ: ವಿದ್ಯಾರ್ಥಿನಿಯನ್ನು ಅಪಹರಿಸಿ ಮದುವೆಯಾಗಲು ಯತ್ನ- ಲವ್ ಜಿಹಾದ್ ಷಡ್ಯಂತ್ರ ಎಂದು ಆರೋಪಿಸಿ ಪೋಷಕರ ದೂರು

ಉಡುಪಿ: ಓರ್ವ ಮುಸ್ಲಿಂ ಯುವಕ ತನ್ನ ಮಗಳನ್ನು ಅಪಹರಿಸಿ, ವಿವಾಹವಾಗಲು ಮುಂದಾಗಿದ್ದಾನೆ ಎಂದು ಯುವತಿಯೊಬ್ಬಳ ತಂದೆ ಆರೋಪಿಸಿ ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಓರ್ವ ಮುಸ್ಲಿಂ ಯುವಕ ನನ್ನ ಮಗಳನ್ನು ಅಪಹರಿಸಿದ್ದಾನೆ. ಇದು ಲವ್ ಜಿಹಾದ್ ಷಡ್ಯಂತ್ರವಾಗಿದೆ ಎಂದು…

ಮಂಗಳೂರಿನ ಬಜಪೆಯಲ್ಲಿ ಅಕ್ರಮ ಗೋ ಸಾಗಾಟ : ಚಾಲಕ ಪರಾರಿ, ಗೋವುಗಳ ರಕ್ಷಣೆ

ಮಂಗಳೂರು : ಮಂಗಳೂರಿನ ಹೊರವಲಯದ ಬಜಪೆ ಸುರಲ್ಪಾಡಿಯಲ್ಲಿ ಶುಕ್ರವಾರ (ಮಾ.28) ಅಕ್ರಮ ಗೋ ಸಾಗಾಟ ಬಯಲಿಗೆ ಬಂದಿದ್ದು ಗೋ ಸಾಗಾಟದ ವಾಹನಕ್ಕೆ ಬಜರಂಗದಳದ ಕಾರ್ಯಕರ್ತರು ತಡೆಯೊಡ್ಡಿದ್ದಾರೆ. ಅಕ್ರಮವಾಗಿ ಗೋವುಗಳನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ವಾಹನವನ್ನು ತಡೆದು ಪರಿಶೀಲನೆ ನಡೆಸಿದ…

ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ದೇವಸ್ಥಾನಗಳ ಪ್ರಸಾದ: “ಇ-ಪ್ರಸಾದ” ಕಾರ್ಯಕ್ರಮಕ್ಕೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ

ಬೆಂಗಳೂರು: ಸಾಮಾನ್ಯವಾಗಿ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದಾಗ ಅಲ್ಲಿಂದ ದೇವರ ಪ್ರಸಾದವನ್ನು ಖರೀದಿಸಿ, ಬಂಧು-ಬಳಗ ಹಾಗೂ ನೆರೆಹೊರೆಯವರಿಗೆ ವಿತರಿಸುವುದು ಬಹಳ ಹಿಂದಿನಿAದಲೂ ನಡೆದುಕೊಂಡು ಬಂದಿದೆ. ಅಲ್ಲದೇ ದೂರದ ದೇವಸ್ಥಾನಗಳಿಗೆ ಬೇರೆಯವರು ಹೋಗುವವರಿದ್ದರೆ ಅವರ ಬಳಿ ಪ್ರಸಾದ ತರಿಸುವುದೂ ಇದೆ. ಆದರೆ ಇದೀಗ…

ಅಜೆಕಾರು: ಮದ್ಯಪಾನದ ಚಟದಿಂದ ಯುವಕ ಮೃತ್ಯು

ಅಜೆಕಾರು: ವಿಪರೀತ ಮದ್ಯಪಾನ ಮಾಡುವ ಚಟವಿದ್ದ ಯುವಕನೊಬ್ಬ ಮೃತಪಟ್ಟಿರುವ ಘಟನೆ ಮರ್ಣೆ ಗ್ರಾಮದ ಕುರ್ಡೇಲು ಎಂಬಲ್ಲಿ ಮಾ.27 ರಂದು ನಡೆದಿದೆ. ಮೂಲತಃ ಮಿಯ್ಯಾರಿನ ಮೇರಿ ಎಂಬವರ ಪುತ್ರ ರೊಶನ್ (36) ಬಾಲ್ಯದಿಂದಲೂ ಅಜೆಕಾರು ಕುರ್ಡೇಲುವಿನ ಹಿಲ್ಡಾ ಡಿಸೋಜ ಎಂಬವರ ಮನೆಯಲ್ಲಿ ವಾಸವಿದ್ದು,…

ಕಡ್ತಲದಲ್ಲಿ‌ ಕರ್ಣಾಟಕ ಬ್ಯಾಂಕ್ ನೂತನ ಗ್ರಾಮೀಣ ಶಾಖೆ ಉದ್ಘಾಟನೆ

ಕಾರ್ಕಳ: ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಬ್ಯಾಂಕಿಂಗ್ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಖಾಸಗಿ ವಲಯದ ಕರ್ಣಾಟಕ ಬ್ಯಾಂಕ್ ಮುಂಚೂಣಿಯಲ್ಲಿದೆ. ರಾಷ್ಟ್ರೀಕೃತ ಬ್ಯಾಂಕುಗಳು ತಲುಪದ ಕಡೆಗಳಲ್ಲಿ ಜನರ ಮನೆಮಾತಾಗಿರುವ ಕರ್ಣಾಟಕ ಬ್ಯಾಂಕ್ ಕಡ್ತಲ ಗ್ರಾಮದಲ್ಲಿ ತನ್ನ ಗ್ರಾಮೀಣ ಶಾಖೆಯನ್ನು ತೆರೆದಿದೆ. ಕಡ್ತಲದ ಕುಂಜೆಕ್ಯಾರ್…

ಎಳ್ಳಾರೆ: ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿ ಬಾವಿಗೆ ಹಾರಿ ಆತ್ಮಹತ್ಯೆ

ಕಾರ್ಕಳ: ವಿದ್ಯಾರ್ಥಿಯೋರ್ವ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯಲ್ಲಿ ಅನುತ್ತೀರ್ಣನಾದ ಕಾರಣಕ್ಕೆ ಮನನೊಂದು ತನ್ನ ಮನೆಯಿಂದ ಸ್ವಲ್ಪ ದೂರದಲ್ಲಿರುವ ತೆರೆದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾರ್ಕಳ ತಾಲೂಕಿನ ಎಳ್ಳಾರೆ ಗ್ರಾಮದ ಮಂಜರಬೆಟ್ಟುವಿನ ರಮೇಶ್ ಅವರ ಪುತ್ರ ತೇಜಸ್ (17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.…

ಬೈರಂಪಳ್ಳಿ : ಉಪ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ

ಉಡುಪಿ: ಕಾಪು ವಿಧಾನಸಭಾ ಕ್ಷೇತ್ರದ ಬೈರಂಪಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಪ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣಕ್ಕೆ 65 ಲಕ್ಷ ರೂಪಾಯಿ ಅನುದಾನದ ಮಂಜೂರಾಗಿದ್ದು ಇದರ ಗುದ್ದಲಿ ಪೂಜೆಯನ್ನು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ…

ಮಲ್ಪೆ ಹಲ್ಲೆ ಪ್ರಕರಣ : ಬಂಧಿತ ಮೂವರಿಗೆ ಹೈಕೋರ್ಟ್ ಷರತ್ತುಬದ್ದ ಜಾಮೀನು

ಬೆಂಗಳೂರು : ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪದಲ್ಲಿ ಮಹಿಳೆಯನ್ನು ಕಟ್ಟಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮೂವರು ಆರೋಪಿಗಳಿಗೆ ಹೈಕೋರ್ಟ್ ಷರತ್ತುಬದ್ದ ಜಾಮೀನು ನೀಡಿದೆ. ಹಲ್ಲೆ ಪ್ರಕರಣದಲ್ಲಿ ಬಂಧಿತರಾಗಿರುವ ಲಕ್ಷ್ಮೀ, ಶಿಲ್ಪಾ ಹಾಗೂ ಸುಂದರ್‌ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ…