Author: karavalinews

ಸಹಕಾರಿ ಲೆಕ್ಕಪರಿಶೋಧನಾ ಸುಧಾರಣೆಗಳಲ್ಲಿ ಪಾರದರ್ಶಕತೆ, ಗುಣಮಟ್ಟ ಮತ್ತು ಸದಸ್ಯರ ಹಿತಾಸಕ್ತಿಗೆ ಆದ್ಯತೆ ನೀಡಲು ಸಹಕಾರ ಭಾರತಿ ಆಗ್ರಹ

ಕಾರ್ಕಳ,ಸೆ.30: ಸಹಕಾರಿ ಸಂಘಗಳ ಲೆಕ್ಕಪರಿಶೋಧನಾ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಉದ್ದೇಶದಿಂದ ಪದವೀಧರರಿಗೆ ೬ ತಿಂಗಳ ತರಬೇತಿ ನೀಡಿ, ಪರವಾನಗಿ ಆಧಾರಿತ ಲೆಕ್ಕಪರಿಶೋಧನೆಗೆ ಅವಕಾಶ ಕಲ್ಪಿಸುವ ಪ್ರಸ್ತಾವನೆಯಿಂದ ಸಹಕಾರಿ ಕ್ಷೇತ್ರದಲ್ಲಿ ಪಾರದರ್ಶಕತೆ ಹೆಚ್ಚುವುದರ ಜೊತೆಗೆ ಯುವಜನರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಇದರಿಂದ ಸಂಘಗಳ ಆರ್ಥಿಕ…

ಪಶ್ಚಿಮಬಂಗಾಳದಲ್ಲಿ ಉಗ್ರರ ವಿಧ್ವಂಸಕ ದಾಳಿಯ ಮಹಾಸಂಚು ವಿಫಲಗೊಳಿಸಿದ : ಬಾಂಗ್ಲಾದೇಶದ ಉಗ್ರ ಸಂಘಟನೆಯ 13 ಉಗ್ರರ ಬಂಧನ

ಕೊಲ್ಕೊತ್ತಾ,ಸೆ.30: .ಪಶ್ಚಿಮ ಬಂಗಾಳ ಹಾಗೂ ಈಶಾನ್ಯ ಭಾರತದ ರಾಜ್ಯಗಳಲ್ಲಿ ಯುವಕರನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಸೇರಿಸು ಸಲುವಾಗಿ ಬಾಂಗ್ಲಾದೇಶ ಉಗ್ರರು ‘ಪೂರ್ವ ಆಕಾಶ್’ ಎಂಬ ಟೆಲಿಗ್ರಾಂ ಗ್ರೂಪ್ ಮೂಲಕ ಭಾರತದ ಯುವಕರನ್ನು ಆನ್‌ಲೈನ್‌ನಲ್ಲಿ ಸದ್ದಿಲ್ಲದೆ ತೀವ್ರಗಾಮಿಗಳನ್ನಾಗಿ ಪರಿವರ್ತಿಸುತ್ತಿದ್ದರು. ದೇಶ ವಿರೋಧಿ ಪ್ರಚಾರ ನಡೆಸುವುದು,…

ಮುನಿಯಾಲು: ಅಕ್ರಮ ಕೋಳಿ ಅಂಕ ನಡೆಸುತ್ತಿದ್ದ ಅಡ್ಡೆಗೆ ಪೊಲೀಸರ ದಾಳಿ: ಹಲವರ ಬಂಧನ: ಜುಗಾರಿಗೆ ಬಳಸಿದ್ದ ಬೈಕ್ ಹಾಗೂ ಕೋಳಿಗಳು ಸೀಜ್

ಹೆಬ್ರಿ, ಸೆ.29: ಹೆಬ್ರಿ ತಾಲೂಕಿನ ವರಂಗ ಗ್ರಾಮದ ತಲಮನೆ ಎಂಬಲ್ಲಿ ಅಕ್ರಮವಾಗಿ ಮೊಬೈಲ್ ಮೂಲಕ ಸಂಪರ್ಕ ಸಾಧಿಸಿ ಕೋಳಿ ಅಂಕ ನಡೆಸುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಪಡೆದ ಹೆಬ್ರಿ ಪೊಲೀಸರ ತಂಡ ದಾಳಿ ನಡೆಸಿ 15ಕ್ಕೂ ಅಧಿಕ ಜನರನ್ನು ವಶಕ್ಕೆ ಪಡೆದು,…

ಮಣಿಪಾಲ ಜ್ಞಾನಸುಧಾದಲ್ಲಿ ಎನ್.ಎಸ್. ಎಸ್ ದಿನಾಚರಣೆ

ಮಣಿಪಾಲ,ಸೆ.29: ಮಣಿಪಾಲ ಜ್ಞಾನಸುಧಾ ಪ. ಪೂ. ಕಾಲೇಜಿನಲ್ಲಿ ಎನ್.ಎಸ್. ಎಸ್ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಡಾ.ಜಿ.ಶಂಕರ್ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜುಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಇಲ್ಲಿಯ ಪ್ರಾಂಶುಪಾಲರಾದ ಡಾ.ನಿಕೇತನ ಇವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಕಾರ್ಯಕ್ರಮವನ್ನು ಉದ್ದೇಶಿಸಿ…

ಹಿರ್ಗಾನ : ಸ್ನೇಹಿತರೊಂದಿಗೆ ಈಜಲು ಹೋದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ದಾರುಣ ಸಾವು

ಕಾರ್ಕಳ, ಸೆ.29: ಹಿರ್ಗಾನ ಗ್ರಾಮದ ಹೆರ್ಮುಂಡೆಯ ಸುವರ್ಣ ನದಿಯಲ್ಲಿ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಇಬ್ಬರು ನೀರಿನಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ. ಹಿರ್ಗಾನ ಗ್ರಾಮದ ಪೇಂಟಿAಗ್ ವೃತ್ತಿಯ ಭರತ್ ಪೂಜಾರಿ(29) ಹಾಗೂ ಹರ್ಷನ್ ಆಚಾರ್ಯ(23) ಎಂಬವರು ಮೃತಪಟ್ಟ…

ರಾಜ್ಯದಲ್ಲಿ ಬರ ಪರಿಶೀಲನೆಗೆ ಕೇಂದ್ರದಿಂದ 3 ತಂಡ: ಅಕ್ಟೋಬರ್‌ನಲ್ಲಿ ಅಂತಿಮ ಮನವಿ ಸಲ್ಲಿಸಲು ಸರ್ಕಾರ ಸಜ್ಜು

ಬೆಂಗಳೂರು,ಸೆ.29 : ರಾಜ್ಯದಲ್ಲಿ ತೀವ್ರಗೊಂಡಿರುವ ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿ ಪರಿಶೀಲಿಸಲು ಕೇಂದ್ರ ಸರ್ಕಾರದ ಉನ್ನತ ಮಟ್ಟದ ಅಂತರ್ ಸಚಿವಾಲಯದ ಅಧಿಕಾರಿಗಳ ತಂಡ ಅಕ್ಟೋಬರ್ ಮೊದಲ ವಾರ ರಾಜ್ಯಕ್ಕೆ ಆಗಮಿಸಲಿದೆ. ಅ.3ರಿಂದ 6ರವರೆಗೆ ರಾಜ್ಯದ ವಿವಿಧ ಬರಪೀಡಿತ ಜಿಲ್ಲೆಗಳಲ್ಲಿ ಪ್ರವಾಸ…

ಮನೆ ಬಿಟ್ಟು ಕೊಡುವ ವಿಚಾರದಲ್ಲಿ ತಾರಕಕ್ಕೇರಿದ್ದ ಅಪ್ಪ ಮಗನ ಜಗಳ: ಕತ್ತಿಯಿಂದ ಕಡಿದು ಮಗನ ಮೆಲೆ ಹಲ್ಲೆಗೈದ ತಂದೆ!

ಕಾರ್ಕಳ, ಸೆ.29: ಹೊಸ ಮನೆಯನ್ನು ತನಗೆ ಬಿಟ್ಟುಕೊಡಬೇಕೆಂದು ದಿನನಿತ್ಯ ಕುಡುಕ ಮಗ ತಂದೆತಾಯಿಯನ್ನು ಪೀಡಿಸುತ್ತಿದ್ದ ಹಿನ್ನಲೆಯಲ್ಲಿ ಬೇಸತ್ತ ತಂದೆ ಮಗನಿಗೆ ಕತ್ತಿಯಿಂದ ಕಡಿದು ಹಲ್ಲೆ ನಡೆಸಿದ ಘಟನೆ ಕಾರ್ಕಳ ತಾಲೂಕಿನ ತೆಳ್ಳಾರು ಎಂಬಲ್ಲಿ ನಡೆದಿದೆ. ಕೇರಳ ಮೂಲದ ತ್ರೆಸಿಯಾಮ್ (65) ಎಂಬವರು…

ಕಾರ್ಕಳ: ಬಿಜೆಪಿ ಗ್ರಾಮ ಸಮಿತಿಗಳ ಸಂಘಟನಾತ್ಮಕ ಸಭೆ

ಕಾರ್ಕಳ,ಸೆ.29: ತಾಲೂಕಿನ ಸಾಣೂರು, ಇರ್ವತ್ತೂರು ಮತ್ತು ಕಾಂತವರ ಬಿಜೆಪಿ ಗ್ರಾಮ ಸಮಿತಿಗಳ ಸಭೆ ಸಾಣೂರು ರಿಜೆನ್ಸಿ ಹಾಲ್ ನಲ್ಲಿ ನಡೆಯಿತು. ಸಭೆಯಲ್ಲಿ ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಮಣಿರಾಜ ಶೆಟ್ಟಿ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ, ಮಿಯಾರು…

ಉಡುಪಿ: ಪರಿಶುದ್ಧ ಸೇವಾ ಚಾರಿಟೇಬಲ್ ಟ್ರಸ್ಟ್ ನ ಪ್ರಥಮ ವಾರ್ಷಿಕೋತ್ಸವ

ಉಡುಪಿ, ಸೆ.28: ಸಮಾಜದ ವಿವಿಧ ವರ್ಗಗಳ ಜನರಿಗೆ ನೆರವು ನೀಡುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಉಡುಪಿ ಪರಿಶುದ್ಧ ಸೇವಾ ಚಾರಿಟೇಬಲ್ ಟ್ರಸ್ಟ್ ನ ಪ್ರಥಮ ವಾರ್ಷಿಕೋತ್ಸವ ಸೆ.28 ರಂದು ಜರುಗಿತು. ಸಭೆಯಲ್ಲಿ ಟ್ರಸ್ಟ್ನ ಸ್ಥಾಪಕ ಹಾಗೂ ವ್ಯವಸ್ಥಾಪಕ ಟ್ರಸ್ಟಿ ಅಲೆಕ್ಸ್ ರತನ್ ಅಂಚನ್…

ಕಾರ್ಕಳ ಸರ್ಕಾರಿ ಆಸ್ಪತ್ರೆಯ ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಿದ ವ್ಯಕ್ತಿ ವಿರುದ್ಧ ಕ್ರಮ ಜರುಗಿಸಲು ಹಿಂದೇಟು: ರಮಿತಾ ಸೂರ್ಯವಂಶಿ ಆರೋಪ

ಕಾರ್ಕಳ,ಸೆ.28: ಕಾರ್ಕಳದ ಸರ್ಕಾರಿ ಆಸ್ಪತ್ರೆಯ ಮಹಿಳಾ ವಿಭಾಗಕ್ಕೆ ಪ್ರವೇಶಿಸಿ ವೈದ್ಯರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಬೆದರಿಕೆ ಹಾಕಿರುವ ಆರೋಪದಲ್ಲಿ ವ್ಯಕ್ತಿ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿದೇ ಆರೋಪಿಯನ್ನು ರಕ್ಷಿಸಲಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತೆ ರಮಿತಾ ಸೂರ್ಯವಂಶಿ ಆರೋಪಿಸಿದ್ದಾರೆ. ಅವರು ಕಾರ್ಕಳ ಪತ್ರಿಕಾಭವನದಲ್ಲಿ ನಡೆದ…