Author: karavalinews

ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ -ಮುನಿಯಾಲು ಕೆಪಿಎಸ್ ಪ್ರೌಢಶಾಲಾ ವಿಭಾಗದ ಬಾಲಕರ ತಂಡ ಪ್ರಥಮ

ಹೆಬ್ರಿ : ಇಂದು ಬ್ರಹ್ಮಾವರ ವಲಯದ ಬೆಳ್ಳಾರ್ಪಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಕಬ್ಬಡಿ ಪಂದ್ಯಾಟದಲ್ಲಿ ಕೆಪಿಎಸ್ ಮುನಿಯಾಲಿನ ಪ್ರೌಢಶಾಲಾ ವಿಭಾಗದ ಬಾಲಕರ ತಂಡವು ಪ್ರಥಮ ಸ್ಥಾನ ಪಡೆದು ಮಂಡ್ಯದಲ್ಲಿ ನಡೆಯುವ ಮೈಸೂರು ವಿಭಾಗ ಮಟ್ಟದ ಸ್ಪರ್ಧೆಗೆ…

ಜಿಲ್ಲಾಧಿಕಾರಿ ಮನವಿ ಹಿನ್ನಲೆ : ಪರಶುರಾಮ ಪ್ರತಿಮೆಯ ಗುಣಮಟ್ಟ ಹಾಗೂ ನೈಜತೆ ಪರೀಕ್ಷೆಯ ಕುರಿತು ನಡೆಯುತ್ತಿದ್ದ ಉಪವಾಸ ಸತ್ಯಾಗ್ರಹ ವಾಪಸ್

ಕಾರ್ಕಳ : ಕಳೆದ ಎಂಟು ದಿನಗಳಿಂದ ಬೈಲೂರಿನ ಉಮಿಕ್ಕಳ ಬೆಟ್ಟದಲ್ಲಿರುವ ಪರಶುರಾಮ ಥೀಮ್ ಪಾರ್ಕ್ ನಲ್ಲಿನ ಪರಶುರಾಮ ಪ್ರತಿಮೆಯ ನೈಜತೆ ಹಾಗೂ ಗುಣಮಟ್ಟದ ಪರೀಕ್ಷೆಗಾಗಿ ಒತ್ತಾಯಿಸಿ ಕಳೆದ ಶನಿವಾರದಿಂದ ಸಮಾನ ಮನಸ್ಕ ವೇದಿಕೆಯ ಹೋರಾಟಗಾರರು ಕಾರ್ಕಳ ತಾಲೂಕು ಕಚೇರಿ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ…

ಇಂದಿರಾಗಾಂಧಿ ಕುಟುಂಬ ಪ್ರತಿಮೆ ಸ್ಥಾಪಿಸಿದ್ದಲ್ಲಿ ವಿರೋಧಿಸುತ್ತಿರಲಿಲ್ಲ: ಪರಶುರಾಮ ಥೀಮ್ ಪಾರ್ಕ್ ವಿರೋಧಿ ಹೋರಾಟ ರಾಜಕೀಯಪ್ರೇರಿತ: ಶಾಸಕ ಸುನಿಲ್ ಕುಮಾರ್

ಕಾರ್ಕಳ:ಕಾರ್ಕಳವನ್ನು ಪ್ರವಾಸೋದ್ಯಮದ ಕೇಂದ್ರಬಿಂದುವನ್ನಾಗಿಸಬೇಕೆಂಬ ಉದ್ದೇಶದಿಂದ ಪರಶುರಾಮ‌ ಥೀಮ್ ಪಾರ್ಕ್ ಸ್ಥಾಪನೆಯ ಯೋಜನೆ ಅನುಷ್ಟಾನಗೊಳಿಸಲಾಗಿದೆ. ಆದರೆ ಈ ಮಹತ್ವಾಕಾಂಕ್ಷಿ ಯೋಜನೆಯನ್ನೇ ಕಾಂಗ್ರೆಸ್ ವಿರೋಧಿಸುತ್ತಿದ್ದು, ಇಂದಿರಾ ಗಾಂಧಿ ಅಥವಾ ಅವರ ಕುಟುಂಬದ ಪ್ರತಿಮೆ ಸ್ಥಾಪಿಸಿದ್ದಲ್ಲಿ ಈ‌ ಯೋಜನೆಯನ್ನು ವಿರೋಧಿಸುತ್ತಿರಲಿಲ್ಲ ಎಂದು ಮಾಜಿ ಸಚಿವ ಹಾಗೂ…

ಕಾರ್ಕಳ ಬೈಪಾಸ್ ಹೆದ್ದಾರಿಯಲ್ಲಿ ಲಾರಿ ಪಲ್ಟಿ: ಚಾಲಕ ಪವಾಡಸದೃಶ ಪಾರು

ಕಾರ್ಕಳ: ಕಾರ್ಕಳ ಹೆಬ್ರಿ ರಾಜ್ಯ ಹೆದ್ದಾರಿಯ ಕಾಬೆಟ್ಟು ಬೈಪಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಸ್ಫೋಟಕಗಳು ತುಂಬಿದ್ದ ಈಚರ್ ಕ್ಯಾಂಟರ್ ಲಾರಿ ಪಲ್ಟಿಯಾಗಿದೆ. ಅತಿವೇಗವಾಗಿ ಸಾಗುತ್ತಿದ್ದಾಗ ಹಠಾತ್ ವಾಹನವೊಂದು ಅಡ್ಡಬಂದ ಪರಿಣಾಮ ನಿಯಂತ್ರಣ ತಪ್ಪಿದ ಲಾರಿ ಮಾರ್ಗಮಧ್ಯೆ ಪಲ್ಟಿಯಾಗಿದೆ. ವರಂಗದಿಂದ ಮಂಗಳೂರಿಗೆ…

ಇ-ಕಾಮರ್ಸ್ ಕಾರ್ಮಿಕರಿಗೆ 4 ಲಕ್ಷ ರೂ. ವಿಮಾ ಸೌಲಭ್ಯ: ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ರಾಜ್ಯದಲ್ಲಿ ಇ-ಕಾಮರ್ಸ್‌ ವಲಯಗಳಾದ ಸ್ವಿಗ್ಗಿ, ಝೋಮ್ಯಾಟೊ, ಅಮೆಜಾನ್‌, ಫ್ಲಿಪ್‌ಕಾರ್ಟ್, ಬಿಗ್‌ ಬಾಸ್ಕೆಟ್‌ ಮುಂತಾದವುಗಳಲ್ಲಿ ಕೆಲಸ ಮಾಡುತ್ತಿರುವ ‘ಗಿಗ್’ ಕಾರ್ಮಿಕರಿಗೆ ಒಟ್ಟು 4 ಲಕ್ಷ ರು.ಗಳ ವಿಮಾ ಸೌಲಭ್ಯ ಒದಗಿಸುವ ‘ಕರ್ನಾಟಕ ರಾಜ್ಯ ಗಿಗ್‌ ಕಾರ್ಮಿಕ ವಿಮಾ ಯೋಜನೆ’ ಜಾರಿಗೊಳಿಸಿ…

ಪ್ರೌಢಶಾಲಾ ವಿಭಾಗದ ವಾಲಿಬಾಲ್ ಪಂದ್ಯಾಟ: ಕಾರ್ಕಳ ಕೆ.ಎಂ.ಇ.ಎಸ್ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕಾರ್ಕಳ :ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಬಜಗೋಳಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪ್ರೌಢಶಾಲಾ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಕಾರ್ಕಳದ ಕೆ . ಎಂ . ಇ. ಎಸ್ . ಶಿಕ್ಷಣ ಸಂಸ್ಥೆಯ ಬಾಲಕರ ತಂಡವು ಪ್ರಥಮ ಸ್ಥಾನ…

ಆಂಧ್ರಪ್ರದೇಶದ ಮಾಜಿ ಸಿಎಂ, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಬಂಧನ

ಅಮರಾವತಿ​ : ಸ್ಕಿಲ್​ ಹಗರಣದ ಎ1 ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರನ್ನು ಆಂಧ್ರದ ನಂದ್ಯಾಲದಲ್ಲಿ ಇಂದು (ಸೆ.09) ರಂದು ನಸುಕಿನ ಜಾವ ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಚಂದ್ರಬಾಬು ನಾಯ್ಡು ಅವರು ಸ್ಕಿಲ್​ ಡೆವಲಪ್​​ಮೆಂಟ್​ ಯೋಜನೆಯಲ್ಲಿ 371…

ಮೊರಾಕೊದಲ್ಲಿ ಪ್ರಬಲ ಭೂಕಂಪಕ್ಕೆ 296 ಜನ ಬಲಿ: ಸಾವಿರಾರು ಜನರಿಗೆ ಗಾಯ

ವಾಷಿಂಗ್ಟನ್:ಶುಕ್ರವಾರ ತಡರಾತ್ರಿ ಮೊರಾಕೋದ ಮರ್ಕೆಚ್ ಬಳಿ ಭೀಕರ ಪ್ರಬಲ ಭೂಕಂಪ ಸಂಭವಿಸಿದ್ದು ಸುಮಾರು 296ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ ಎಂದು ದೇಶದ ಆಂತರಿಕ ಸಚಿವಾಲಯ ಸ್ಪಷ್ಟಪಡಿಸಿದೆ. ಮೊರಾಕ್ಕೋದ ಮರ್ಕೇಜ್ ನೈಋತ್ಯ ಭಾಗದಲ್ಲಿ ಶುಕ್ರವಾರ ತಡರಾತ್ರಿ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ…

ಮಂಗಳೂರು : ಸ್ವ ಉದ್ಯೋಗ ತರಬೇತಿಯ ಸಮಾರೋಪ ಸಮಾರಂಭ

ಮಂಗಳೂರು :ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ) ಮಂಗಳೂರು ಇವರ ಪ್ರಾಯೋಜಕತ್ವದಲ್ಲಿ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇವರ ನೇತೃತ್ವದಲ್ಲಿ, ಶ್ರೀ ಸ್ವಾಮಿ ರಮಾನಂದ ಹೊಲಿಗೆ ತರಬೇತಿ ಕೇಂದ್ರ ಕೊಲ್ಯ ಇವರ ಸಹಕಾರದಲ್ಲಿ 15 ದಿನಗಳ ಕಾಲ ನಡೆದ ಬಟ್ಟೆ ಕಸೂತಿ…

ಕಾರ್ಕಳ ಬೋರ್ಡ್ ಹೈಸ್ಕೂಲ್ ನಲ್ಲಿ ಕಾನೂನು ಅರಿವು ಕಾರ್ಯಕ್ರಮ

ಕಾರ್ಕಳ : ಜೇಸಿಐ ಕಾರ್ಕಳ ರೂರಲ್ ಹಾಗೂ ಪೋಲಿಸ್ ಇಲಾಖೆಯ ಜಂಟಿ ಸಹಯೋಗದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ (ಬೋರ್ಡ್ ಹೈಸ್ಕೂಲ್) ಕಾರ್ಕಳ ಮತ್ತು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಕಾರ್ಯಕ್ರಮ ಕಾರ್ಕಳ ಬೋರ್ಡ್…