
ಕಾರ್ಕಳ,ಜೂ.24: ಕಾರ್ಕಳ ತಾಲೂಕು ಕಸಬಾ ಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಿದ್ದ ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಚಂದ್ರದೇವಿ(38ವ) ಎಂಬವರು ಎಸ್ ವಿಟಿ ಶಾಲೆಯ ಬಳಿ ಶ್ರೀನಿವಾಸ್ ನಗರ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಕಾರ್ಕಳ ಮಾರ್ಕೆಟ್ ರಸ್ತೆಯಲ್ಲಿ “ಮಹಾಲಕ್ಷ್ಮಿ” ಎಂಬ ಹೆಸರಿನ ಬಟ್ಟೆ ಅಂಗಡಿಯನ್ನು ನಡೆಸುತ್ತಿದ್ದರು. ಕೆಲವು ತಿಂಗಳಿನಿAದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಅವರು ಮಂಗಳವಾರ (ಜೂ.23) ಶಾಲೆಗೆ ಹೋಗಿದ್ದ ಮಗ ಮನೆಗೆ ಮಧ್ಯಾಹ್ನ ಮನೆಗೆ ವಾಪಾಸಾಗುವ ವೇಳೆ ಚಂದ್ರದೇವಿ ಅವರು ನೇಣು ಬಿಗಿದುಕೊಂಡಿದ್ದರು. ಅವರನ್ನು ಕೂಡಲೇ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



.
.
.
.
.
.
.
.
.
.
.
.
.
.
.
.
.
.
.
.
