ಬೆಂಗಳೂರು: ವಿವಾಹಿತ ಮಹಿಳೆಯ ಜೊತೆ ದೈಹಿಕ ಸಂಬಂಧ ಹೊಂದಿದ್ದ ಪ್ರಿಯಕರ ಆಕೆಯನ್ನು ಲಾಡ್ಜ್ ನಲ್ಲಿ ಚಾಕುವಿನಿಂದ ಇರಿದು ಪ್ರಿಯಕರ ಬರ್ಬರವಾಗಿ ಕೊಲೆಗೈದ ಘಟನೆ ಬೆಂಗಳೂರಿನ ಪೂರ್ಣಪ್ರಜ್ಞ ಲೇಔಟ್Àನಲ್ಲಿ ನಡೆದಿದೆ. 36 ವರ್ಷದ ಹರೆಯದ ವಿವಾಹಿತ ಮಹಿಳೆ ಹರಿಣಿ ಎಂಬಾಕೆ ಕೊಲೆಯಾದವಳು. ಈಕೆಯ ಪ್ರಿಯಕರ ಯಶಸ್ ಕೊಲೆ ಆರೋಪಿಯಾಗಿದ್ದು ಆತನನ್ನು ಸುಬ್ರಹ್ಮಣ್ಯಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಎರಡು ಮಕ್ಕಳ ತಾಯಿ ಹರಿಣಿಗೆ ಜಾತ್ರೆಯಲ್ಲಿ ಯಶಸ್ ಎಂಬಾತನ ಪರಿಚಯವಾಗಿತ್ತು. ಈ ಪರಿಚಯದ ಮೂಲಕ ಇಬ್ಬರ ಫೋನ್ ನಂಬರ್ ಎಕ್ಸ್ಚೇಂಜ್ ಆಗಿತ್ತು. ಬಳಿಕ ಸ್ನೇಹ ಬೆಳೆದು ಚಾಟಿಂಗ್, ಡೇಟಿಂಗ್, ಸುತ್ತಾಟ ಮಾಡಿದ್ದರು. ಕೆಲವು ಸಲ ಇಬ್ಬರು ಲೈಂಗಿಕ ಸಂಪರ್ಕ ಕೂಡ ಬೆಳೆಸಿದ್ದರು. ಹಲವು ಬಾರಿ ಇದೇ ರೀತಿ ಭೇಟಿಯಾಗಿ ಫೋನ್‌ನಲ್ಲಿ ಮಾತಾಡುತ್ತಿದ್ದರು. ಈ ವೇಳೆ ಪತಿ ದಾಸೇಗೌಡನಿಗೆ ಪತ್ನಿಯ ಅನೈತಿಕ ಸಂಬAಧ ಗೊತ್ತಾಗಿತ್ತು. ಹರಿಣಿ ಫೋನ್ ಚೆಕ್ ಮಾಡಿದಾಗ ಆಕೆಯ ಪರಸಂಗದ ಆಟ ದಾಸೇಗೌಡನಿಗೆ ಗೊತ್ತಾಗಿ ಆಕೆಯನ್ನು ಮನೆಯಲ್ಲೇ ಬಲವಂತವಾಗಿ ಕೂಡಿ ಹಾಕಿದ್ದ. ಈ ಘಟನೆ ನಡೆದು ಕೆಲವು ತಿಂಗಳ ಬಳಿಕ ಹರಿಣಿ ಮತ್ತೆ ಹೊರ ಬಂದು ತನ್ನ ಬಾಯ್‌ಫ್ರೆಂಡ್ ಯಶಸ್ ಜತೆ ಮನೆಯಲ್ಲಿ ನಡೆದ ಘಟನೆಯನ್ನು ವಿವರಿಸಿ ಇನ್ನು ನನ್ನ ನಿನ್ನ ನಡುವೆ ಯಾವುದೇ ಸಂಪರ್ಕ ಬೇಡ ಎಂದು ಹೇಳಿದ್ದಳು. ಇತ್ತ ಹರಿಣಿ ಸಂಪರ್ಕಕ್ಕೆ ಸಿಗದೇ ಹುಚ್ಚನಾಗಿದ್ದ ಪ್ರಿಯಕರ ಯಶಸ್ ಇನ್ನು ಆಕೆ ಸಿಗಲ್ಲ ಎಂದು ಗೊತ್ತಾದ ಬಳಿಕ ಆಕೆಯನ್ನು ಸಾಯಿಸಲು ನಿರ್ಧರಿಸಿದ್ದ. ಜೂನ್ 6ರಂದು ಆಕೆಯ ಜೊತೆಗೆ ಕೊನೆಯ ಬಾರಿಯ ಭೇಟಿಯಾಗುವಂತೆ ಹರಿಣಿಗೆ ಕರೆ ಮಾಡಿದ ಹಿನ್ನಲೆಯಲ್ಲಿ ಇಬ್ಬರು ಹೋಟೆಲ್‌ಗೆ ಹೋಗಿದ್ದರು. ಮೊದಲೇ ರಾಯಲ್ಸ್ ಹೋಟೆಲ್‌ನಲ್ಲಿ ರೂಮ್ ಬುಕ್ ಮಾಡಿದ್ದ ಯಶಸ್, ಹೋಟೆಲ್‌ಗೆ ಹೋಗಿ ಲೈಂಗಿಕ ಸಂಪರ್ಕ ಬೆಳೆಸಿದ್ದರು. ಬಳಿಕ ಆಕೆ ಈ ಸಂಬAಧವನ್ನು ಮುಗಿಸುವುದಾಗಿ ಹೇಳಿದಾಗ ನನ್ನನ್ನು ಕಡೆಗಣಿಸುತ್ತಿಯಾ ಎಂದು ಸಿಟ್ಟಿಗೆದ್ದ ಆತ ಚಾಕುವಿನಿಂದ ಇರಿದು ಹರಿಣಿಯನ್ನು ಭೀಕರವಾಗಿ ಹತ್ಯೆಗೈದಿದ್ದ.