ಲಕ್ನೋ: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದ ಪತಿಯನ್ನು ಹನಿಮೂನ್ ಗೆ ಕರೆದೊದ್ದ ಪತ್ನಿ ತನ್ನ ಗೆಳೆಯರ ಜೊತೆ ಸೇರಿ ಹತ್ಯೆಗೈದ ಪ್ರಕರಣದಲ್ಲಿ ಪತ್ನಿ ಹಾಗೂ ಆಕೆಯ ಮೂವರು ಗೆಳೆಯರನ್ನು ಬಂಧಿಸಲಾಗಿದೆ.
ಉತ್ತರ ಪ್ರದೇಶದ ಘಾಜಿಪುರ ಜಿಲ್ಲೆಯ ರಾಜಾ ರಘುವಂಶಿ(29) ಮತ್ತು ಸೋನಮ್ ರಘುವಂಶಿ(25) ಎಂಬವರು ಕಳೆದ ಮೇ 11ರಂದು ವೈವಾಹಿಕ ಜೀವಕ್ಕೆ ಕಾಲಿಟ್ಟಿದ್ದರು. ವಿವಾಹವಾದ ಬಳಿಕ ರಾಜಾ ರಘುವಂಶಿ ತನ್ನ ಪತ್ನಿ ಸೋನಮ್ ಜೊತೆ ಮೇ 20ರಂದು ಹನಿಮೂನ್ ಗೆಂದು ಮೇಘಾಲಯಕ್ಕೆ ತೆರಳಿದ್ದರು.ಮೇ 21ರಂದು ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ನ ಬಾಲಾಜಿ ಅತಿಥಿ ಗೃಹದಲ್ಲಿ ಉಳಿದುಕೊಂಡಿದ್ದಾರೆ.ಮೇ 22ರ ಬೆಳಿಗ್ಗೆ ದ್ವಿಚಕ್ರ ವಾಹನವೊಂದನ್ನು ಬಾಡಿಗೆ ಪಡೆದ ದಂಪತಿ, ಅತಿಥಿ ಗೃಹದಿಂದ ಜನಪ್ರಿಯ ಪ್ರವಾಸಿ ತಾಣ ಸೊಹ್ರಾಕ್ಕೆ(ಚಿರಾಪುಂಜಿ) ತೆರಳುತ್ತಾರೆ.ಆದರೆ ಮೇ 23 ರಂದು ಏಕಾಎಕಿ ರಾಜಾ ರಘುವಂಶಿ ನಾಪತ್ತೆಯಾಗಿದ್ದ, ಇದಕ್ಕೂ ಮುನ್ನ ಪತ್ನಿ ಸೋನಮ್ ಜತೆ ಮೇಘಾಲಯದಲ್ಲಿ ಹಲವು ಪ್ರದೇಶಗಳಿಗೆ ಭೇಟಿ ನೀಡಿದ್ದ.
ಮೇಘಾಲಯಕ್ಕೆ ಹನಿಮೂನ್‌ಗೆಂದು ತೆರಳಿ ದಂಪತಿ ನಾಪತ್ತೆಯಾಗಿದ್ದ ಪ್ರಕರಣದಲ್ಲಿ ಹೊಸ ತಿರುವು ಸಿಕ್ಕಿದೆ. ನಾಪತ್ತೆಯಾಗಿದ್ದ ರಾಜಾ ರಘುವಂಶಿ ತನ್ನ ಪತ್ನಿಯಿಂದಲೇ ಕೊಲೆಯಾಗಿದ್ದು ಆತನ ಶವ ಜೂನ್ 2 ರಂದು ಮೇಘಾಲಯದ ಜಲಪಾತದಲ್ಲಿ ಪತ್ತೆಯಾಗಿದ್ದು ಪತ್ನಿಯೇ ಗಂಡನ ಕಥೆ ಮುಗಿಸಿದ ಭಯಾನಕ ಸಂಚು ಪೊಲೀಸರ ತನಿಖೆಯಿಂದ ಹೊರಬಿದ್ದಿದೆ. ಪೊಲೀಸರು ಡ್ರೋಣ್ ಬಳಸಿ ಆತನ ಶವವನ್ನು ಪತ್ತೆ ಹಚ್ಚಿದ್ದರು. ಪತಿ ರಾಜಾ ರಘುವಂಶಿ ನಾಪತ್ತೆಯ ಕಥೆ ಕಟ್ಟಿದ್ದ ಪತ್ನಿ ಸೋನಮ್ ಳನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಕೊಲೆ ರಹಸ್ಯ ಬಯಲಾಗಿದೆ.
ರಾಜಾ ರಘುವಂಶಿ ಹತ್ಯೆ ಕುರಿತಂತೆ ಉತ್ತರ ಪ್ರದೇಶದಿಂದ ಓರ್ವ ಮತ್ತು ಮಧ್ಯಪ್ರದೇಶದ ಇಂದೋರ್‌ನಿAದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಪತಿಯನ್ನು ತಾನೇ ಹತ್ಯೆ ಮಾಡಿರುವುದಾಗಿ ಪತ್ನಿ ಸೋನಮ್ ಪೊಲೀಸರಲ್ಲಿ ಬಾಯಿ ಬಿಟ್ಟಿದ್ದು ಆಕೆಯನ್ನು ಬಂಧಿಸಲಾಗಿದೆ. ಈ ಹನಿಮೂನ್ ಕೊಲೆ ಪ್ರಕರಣವನ್ನು ಭೇದಿಸಿದ್ದಕ್ಕಾಗಿ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಪೊಲೀಸರನ್ನು ಶ್ಲಾಘಿಸಿದ್ದಾರೆ.