
ಕಾರ್ಕಳ,ಏ.25: ಬಿಲ್ಲವ ಸಮಾಜ ಸೇವಾ ಸಂಘ (ರಿ.) ಕಾರ್ಕಳ, ರೋಟರಿ ಕ್ಲಬ್ ಕಾರ್ಕಳ, ಯುವವಾಹಿನಿ (ರಿ.) ಕಾರ್ಕಳ ಘಟಕ, ವಂಶಿ ಇವೆಂಟ್ಸ್ ಮತ್ತು ಬೆನಕ ಇವೆಂಟ್ಸ್ ಇವರ ಸಹಯೋಗದಲ್ಲಿ ಆಯೋಜಿಸಲಾಗಿರುವ ತಾಲೂಕು ಮಟ್ಟದ ಬೃಹತ್ ಹಲಸಿನ ಮೇಳವನ್ನು ಶಾಸಕ ವಿ.ಸುನಿಲ್ ಕುಮಾರ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಇಂತಹ ಹಲಸಿನ ಮೇಳಗಳು ಸ್ವ ಉದ್ಯೋಗಕ್ಕೆ ಉತ್ತೇಜನ ಕೊಡುತ್ತವೆ ಎಂದರು.
ಈ ಸಂದರ್ಭದಲ್ಲಿ ಉದ್ಯಮಿ ನಿತ್ಯಾನಂದ ಪೈ, ಕ್ರಿಯೇಟಿವ್ ಸಂಸ್ಥೆಯ ಸಹ ಸಂಸ್ಥಾಪರಾದ ಅಶ್ವಥ್, ರೋಟರಿ ಸಂಸ್ಥೆಯ ಅಧ್ಯಕ್ಷ ನವೀನ್ ಶೆಟ್ಟಿ, ಎನ್ ಪಿ ಗ್ರೂಪ್ ನ ಮಾಲೀಕ ವಾಸುದೇವ್ ಭಟ್, ಯುವವಾಹಿನಿ ಘಟಕದ ಅಧ್ಯಕ್ಷ ಪ್ರಕಾಶ್ ಪೂಜಾರಿ, ಬೆನಕ ಇವೆಂಟ್ಸ್ ನ ಮಾಲಕ ಗಣೇಶ್ ಶೆಟ್ಟಿ ಉಪಸ್ಥಿತರಿದ್ದರು.
ಸಾಮಾಜಿಕ ಕಾರ್ಯಕರ್ತೆ ವಂಶಿ ಇವೆಂಟ್ಸ್ ನ ರಮಿತಾ ಸೂರ್ಯವಂಶಿ ಸ್ವಾಗತಿಸಿ ಪ್ರಸ್ತಾವನೆಗೈದರು.ಕು. ಪ್ರಾರ್ಥನಾ ಪ್ರಾರ್ಥಿಸಿದರು. ಯುವವಾಹಿನಿ ಘಟಕದ ನಿಕಟ ಪೂರ್ವ ಅಧ್ಯಕ್ಷೆ ಮಮತ ಪೂಜಾರಿ ವಂದಿಸಿದರು.
ಕು. ಹರ್ಷಿತಾ ನಿರೂಪಿಸಿದರು.
ಹಲಸಿನ ಮೇಳದಲ್ಲಿ ಹಲಸಿನ ಜಿಲೇಬಿ, ಕೇರಳದ 60ಕ್ಕೂ ಹೆಚ್ಚು ಹಲಸಿನ ತಿಂಡಿ, ಐಸ್ ಕ್ರೀಮ್, ಮುಳಕ, ಗೋಬಿಮಂಚೂರಿ,ಹಲ್ವಾ, ಕಡಬು, ಪೋಡಿ, ಪಾಯಸ, ಹಲಸಿನ ಬೀಜದ ಪತ್ರೊಡೆ ಅಲ್ಲದೇ ಇನ್ನಿತರ ವಸ್ತುಗಳಾದ ಇಳಕಲ್ ಸೀರೆ, ಮೈಸೂರು ಸಿಲ್ಕ್, ಹೇಗೋಡ್ ಖಾದಿ, ಆದಿವಾಸಿ ಹೇರ್ ಆಯಿಲ್, ಚೆನ್ನಪಟ್ಟಣ ಗೊಂಬೆ, ವಿವಿಧ ಉಪ್ಪಿನಕಾಯಿ, ಆಯುರ್ವೇದ ಉತ್ಪನ್ನಗಳು, ಅಲಂಕಾರಿಕ ಉತ್ಪನ್ನಗಳು ಹಾಗೂ ಕೇರಳ ಬೆಲ್ಲ ಮುಖ್ಯ ಆಕರ್ಷಣೆಯಾಗಿದ್ದವು.


.
.
.
.
.
.
.
.
.
.
.
.
.
.
.
.
.
.
.
.
