

ಕಾರ್ಕಳ,ಅ.23: ಶ್ರೀ ಬ್ರಹ್ಮಲಿಂಗೇಶ್ವರ ಫ್ರೆಂಡ್ಸ್ ಕಣಜಾರು ವತಿಯಿಂದ ಬೆಳಕಿನ ಹಬ್ಬದ “ಬೆಳ್ಳಿ ಹಬ್ಬ” ಹಾಗೂ ಪಟೇಲ ಶೇಖರ್ ಹೆಗ್ಡೆಯವರ ಜನ್ಮ ಶತಾಬ್ದಿಯ ನೆನಪಿನ ಜೊತೆಗೆ , ಉಡುಪಿ ಜಿಲ್ಲಾ ರಕ್ತದಾನ ಕೇಂದ್ರದ ಸಹಯೋಗದೊಂದಿಗೆ ಅಕ್ಟೋಬರ್ 18ರಂದು ಮಡಿಬೆಟ್ಟು ಶಾಲೆಯಲ್ಲಿ ಬೃಹತ್ ರಕ್ತದಾನ ಶಿಬಿರ ಜರುಗಿತು.
ಹಿರಿಯಡ್ಕ ಪೊಲೀಸ್ ಠಾಣಾಧಿಕಾರಿ ಪುನೀತ್ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ವೀಣಾ ರಕ್ತದಾನದ ಮಹತ್ವ ತಿಳಿಸಿದರು. ವೇದಿಕೆಯಲ್ಲಿ ವಿಕ್ರಮ್ ಹೆಗ್ಡೆ, ಶರ್ಮಿಳಾ ನವೀನ್ ಚಂದ್ರ ಭಂಡಾರಿ, ನ್ಯಾಯವಾದಿ ಸತೀಶ್ ಪೂಜಾರಿ ಪೆಲತ್ತೂರು, ಶಾಲಾ ಸಂಚಾಲಕ ಸಿಎ ಚಂದನ್ ಕುಮಾರ್ ಹೆಗ್ಡೆ, ಸಚ್ಚಿದಾನಂದ ಪ್ರಭು, ಮಹೇಶ್ ಶೆಟ್ಟಿ, ಸುರೇಶ್ ಶೆಟ್ಟಿ ಹಾಗೂ ಮಾಲತಿ ಶೆಟ್ಟಿ ಉಪಸ್ಥಿತರಿದ್ದರು.
ಶ್ರೀ ಮೇಲ್ಬಂಟ ಫ್ರೆಂಡ್ಸ್, ಹಡಂಕೋಳಿ ಫ್ರೆಂಡ್ಸ್, ನಮ್ಮ ಜವನೆರ್ ಕಣಜಾರು, ಪೆಲತ್ತೂರು ಫ್ರೆಂಡ್ಸ್, ಮಹಾಲಿಂಗೇಶ್ವರ ಭಜನಾ ಮಂಡಳಿ ಪೆಲತ್ತೂರು, ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿ ಕಣಜಾರು ಹಾಗೂ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸ್ವ ಸಹಾಯ ಸಂಘ ಕಣಜಾರು ಒಕ್ಕೂಟದವರು ಸಹಕರಿಸಿದರು. ಶ್ರೀ ಬ್ರಹ್ಮಲಿಂಗೇಶ್ವರ ಎಜುಕೇಶನ್ ಟ್ರಸ್ಟ್ ಖಜಾಂಚಿ ಪ್ರಕಾಶ್ ಪ್ರಭು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಶ್ವನಾಥ ಪ್ರಭು, ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ಸಂಘದ ಸರ್ವ ಸದಸ್ಯರು ಪಾಲ್ಗೊಂಡಿದ್ದರು.
ವಿಕ್ರಮ್ ಹೆಗ್ಡೆ ಪ್ರಸ್ತಾವಿಸಿದರು. ಕಾರ್ತಿಕ್ ಶೆಟ್ಟಿ ಸ್ವಾಗತಿಸಿ, ನಿಖಿಲ್ ಶೆಟ್ಟಿ ನಿರೂಪಿಸಿ, ನಿಮೇಶ್ ಶೆಟ್ಟಿ ವಂದಿಸಿದರು.
ತದನಂತರ ಶ್ರೀ ಬ್ರಹ್ಮಲಿಂಗೇಶ್ವರ ಫ್ರೆಂಡ್ಸ್ ಕಣಜಾರು ಇವರ 25ನೇ ವರ್ಷದ ಸಂಭ್ರಮದಲ್ಲಿ ನವೆಂಬರ್ 07 ರಂದು ಕಣಜಾರಿನ ಕೀರಬೆಟ್ಟು ಬಳಿ ಭಾರತ ಮಾತೆಗೆ ಹಣತೆ ಹಚ್ಚಿ ದೇಶ ಭಕ್ತಿಯನ್ನು ಜಾಗ್ರತಿ ಗೊಳಿಸುವ ಸಾಮೂಹಿಕ ದೀಪಾವಳಿ ಕಾರ್ಯಕ್ರಮ ನಡೆಯಲಿದ್ದು, ಚಕ್ರವರ್ತಿ ಸೂಲಿಬೆಲೆ ಯವರಿಂದ ದಿಕ್ಸೂಚಿ ಭಾಷಣ ನಡೆಯಲಿದೆ. ಶಾಸಕರಾದ ವಿ ಸುನಿಲ್ ಕುಮಾರ್ ಮತ್ತು ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ಉಪಸ್ಥಿತಿಯಲ್ಲಿ ನಡೆಯಲಿರುವ “ಬೆಳಕಿನ ಹಬ್ಬದ ಬೆಳ್ಳಿ ಹಬ್ಬ” ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಕಣಜಾರು ಇಲ್ಲಿ ಹಿರಿಯರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.






.
.
.
.
.
.
.
.
.
.
.
.
.
.
.
.
.
.
.
.
