Category: ಅಪರಾಧ

ಉಡುಪಿ :ಕೊಲೆ ಪ್ರಕರಣದ ಮೂವರು ಆರೋಪಿಗಳು ಅರೆಸ್ಟ್- ಕರಾವಳಿ ಜಂಕ್ಷನ್ ಬಳಿ ಒಂದುವರೆ ವರ್ಷದ ಹಿಂದೆ ನಡೆದಿದ್ದ ಕೊಲೆ ಪ್ರಕರಣ

ಉಡುಪಿ : ಕರಾವಳಿ ಜಂಕ್ಷನ್ ಬಳಿ ಒಂದುವರೆ ವರ್ಷದ ಹಿಂದೆ ನಡೆದಿದ್ದ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂದಿತ ಆರೋಪಿಗಳನ್ನು ಕೊಪ್ಪಳ ಜಿಲ್ಲೆ, ಕುಷ್ಟಗಿ ತಾಲೂಕಿನ ಕನಕಪ್ಪ ಹನುಮಂತ ರೋಡಿ(46) ಯಮನೂರ ತಿಪ್ಪಣ್ಣ ಮಾರಣಬಸರಿ (24)…

ಅಜೆಕಾರು: ಸೀಯಾಳ ಕೊಯ್ಯಲು ಹೋಗಿದ್ದ ವ್ಯಕ್ತಿ ನೀರಿನಲ್ಲಿ ಬಿದ್ದು ಮೃತ್ಯು

ಅಜೆಕಾರು: ಸೀಯಾಳ ಮತ್ತು ತೆಂಗಿನಕಾಯಿ ಕೊಯ್ಯಲೆಂದು ಹೋಗಿದ್ದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ಮರ್ಣೆ ಗ್ರಾಮದ ಅಜೆಕಾರಿನಲ್ಲಿ ನಡೆದಿದೆ. ಅಜೆಕಾರಿನ ಶೀನ(77ವ) ಮೃತಪಟ್ಟವರು. ಶೀನ ಅವರು ಭಾನುವಾರ ನೀಲಬೈಲು ಎಂಬಲ್ಲಿನ ಜಾಗದ ತೆಂಗಿನ ಮರದಿಂದ ತೆಂಗಿನ ಕಾಯಿ ಹಾಗೂ…

ನಕ್ರೆ: ಬೈಕ್ ಮುಖಾಮುಖಿ ಡಿಕ್ಕಿ:ಸವಾರ ಸಾವು

ಕಾರ್ಕಳ: ಬೈಕ್ ಹಾಗೂ ಸ್ಕೂಟರ್ ಮುಖಾಮುಖಿ ಡಿಕ್ಕಿಯಾಗಿ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ನಕ್ರೆ ನಿವಾಸಿ ನಿತೇಶ್ (21) ಎಂಬವರು ಮೃತಪಟ್ಟ ಸ್ಕೂಟರ್ ಸವಾರ. ನಿತೇಶ್ ಫೆ 7ರಂದು ನಕ್ರೆ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆ ಮುಗಿಸಿ ವಾಪಾಸು…

ಚೆಕ್ ಬೌನ್ಸ್ ಪ್ರಕರಣ: ಮಾಜಿ ಗುಮಾಸ್ತನಿಗೆ ಜೈಲು ಶಿಕ್ಷೆ

ಮಂಗಳೂರು: ಬೈಕಂಪಾಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಲೆಮಿನಾ ಸಮೂಹ ಸಂಸ್ಥೆಗಳಿಗೆ ಸೇರಿದ ವಿವಿಧೋದ್ದೇಶ ಸಹಕಾರಿ ಸಂಘದ ಮಾಜಿ ಗುಮಾಸ್ತ ಲೋಕನಾಥ ಜಿ. ಶೆಟ್ಟಿ ಕೃಷ್ಣಾಪುರ ಎನ್ನುವಾತನಿಗೆ ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ಜೈಲು ಶಿಕ್ಷೆಯಾಗಿದೆ. 2011ರ ಎ. 1ರಿಂದ 2012ರ ಅಕ್ಟೋಬರ್‌ ಅವಧಿಯಲ್ಲಿ ನಗದು ವ್ಯವಹಾರದ…

ಅರ್ಚಕನೊಬ್ಬನ ನಗ್ನ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಆರೋಪ; ಯಕ್ಷಗಾನ ಕಲಾವಿದ ಅಶ್ವತ್ ಆಚಾರ್ಯ ವಿರುದ್ಧ ಪ್ರಕರಣ ದಾಖಲು

ಮಂಗಳೂರು: ಕಾಸರಗೋಡಿನ ಅರ್ಚಕರೊಬ್ಬರನ್ನು ಫೇಸ್‌ಬುಕ್‌ ಮೂಲಕ ಫ್ರೆಂಡ್‌ ಮಾಡಿಕೊಂಡು ಲೈಂಗಿಕವಾಗಿ ಆಕರ್ಷಿಸಿ ಫೋಟೋ, ವೀಡಿಯೋ ಶೇರ್‌ ಮಾಡಿ ಅದನ್ನೇ ಮುಂದಿಟ್ಟು ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಿದ ಆರೋಪದಲ್ಲಿ ಯಕ್ಷಗಾನ ಕಲಾವಿದನೊಬ್ಬನನ್ನು ಬದಿಯಡ್ಕ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ಮಂಗಳೂರು ತಾಲೂಕಿನ ಕೊಳಂಬೆ…

ಮಂಗಳೂರು: 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್

ಮಂಗಳೂರು : 1999 ನೇ ಇಸವಿಯಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಾಗೂ 2012 ನೇ ವರ್ಷದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ 3 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯದಿಂದ ಬಿಡುಗಡೆಗೊಂಡು ಪ್ರಕರಣದ ವಿಚಾರಣೆ ಸಮಯ ಹಾಜರಾಗದೇ…

ಹೆಬ್ರಿ: ಅಡಿಕೆ ಮರ ತಲೆಯ ಮೇಲೆ ಬಿದ್ದು ವ್ಯಕ್ತಿ ಮೃತ್ಯು

ಹೆಬ್ರಿ: ಒಣಗಿದ್ದ ಅಡಿಕೆ ಮರವನ್ನು ಹಗ್ಗದ ಸಹಾಯದಿಂದ ಎಳೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ಆಯತಪ್ಪಿ ಮರ ತುಂಡಾಗಿ ವ್ಯಕ್ತಿಯ ತಲೆಯ ಮೇಲೆ ಬಿದ್ದ ಪರಿಣಾಮ ವ್ಯಕ್ತಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆಗೆ ಸ್ಪಂದಿಸದೆ ಫೆ.6 ರಂದು ಮೃತಪಟ್ಟಿದ್ದಾರೆ. ವರಂಗ ಗ್ರಾಮದ ನಿವಾಸಿ…

ಮಂಗಳೂರು: ಪತ್ನಿಯ ಹಂತಕನಿಗೆ ಜೀವಾವಧಿ ಶಿಕ್ಷೆ- ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಂಬಿಸಿದ್ದ ಪತಿ

ಮಂಗಳೂರು : ಕುಡಿದ ಮತ್ತಿನಲ್ಲಿ ಪತ್ನಿಯನ್ನು ಕುತ್ತಿಗೆ ಹಿಸುಕಿ ಕೊಲೆಗೈದು ಬಳಿಕ ಲುಂಗಿಯ ತುಂಡನ್ನು ಕುತ್ತಿಗೆಗೆ ಕಟ್ಟಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸಾಕ್ಷ ನಾಶ ಮಾಡಿದ ಪತಿಗೆ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ…

ಕಾರ್ಕಳ: ಪ್ರಯಾಗ್‌ರಾಜ್ ನ ಕುಂಭಮೇಳಕ್ಕೆ ಹೋಗಿದ್ದ ವ್ಯಕ್ತಿ ನಾಪತ್ತೆ

ಕಾರ್ಕಳ: ಪ್ರಯಾಗ್‌ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳ ಮತ್ತು ಕಾಶಿಗೆ ಹೋಗುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದ ಕಾರ್ಕಳದ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದಾರೆ. ಕಾರ್ಕಳ ಕಾಬೆಟ್ಟು ನಿವಾಸಿ ಸುಧಾಕರ್(69ವ) ನಾಪತ್ತೆಯಾದವರು. ಸುಧಾಕರ್ ಅವರು ಜ.25 ರಂದು ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಕುಂಭಮೇಳದ ಪ್ರಯುಕ್ತ ಪ್ರಯಾಗ್ ರಾಜ್ ಮತ್ತು…

ಅಜೆಕಾರು : ಅಕ್ರಮ ಮರಳು ಸಾಗಾಟ : ಮರಳು ಸಹಿತ ಟಿಪ್ಪರ್ ಲಾರಿ ವಶಕ್ಕೆ

ಅಜೆಕಾರು : ಕೆರ್ವಾಶೆಯ ಬಂಗ್ಲೆಗುಡ್ಡೆ ಜಂಕ್ಷನ್‌ನಲ್ಲಿ ಬುಧವಾರ ಮಧ್ಯಾಹ್ನ ಅಜೆಕಾರು ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ. ಅಜೆಕಾರು ಪೊಲೀಸ್ ಠಾಣೆ ಪಿಎಸ್ಐ ಪ್ರವೀಣ ಕುಮಾರ್‌ ಆರ್‌ ಅವರು ತಮ್ಮ ಸಿಬ್ಬಂದಿಯೊಂದಿಗೆ ವಾಹನ…