Category: ಸ್ಥಳೀಯ ಸುದ್ದಿಗಳು

ಕಾರ್ಕಳ: ಕಾರು ಹರಿದು ರಸ್ತೆ ಬದಿ ಮಲಗಿದ್ದ ವ್ಯಕ್ತಿಯ ಕಾಲಿಗೆ ಗಂಭೀರ ಗಾಯ

ಕಾರ್ಕಳ: ಬಸ್ಸು ನಿಲ್ದಾಣದ ಬಳಿ ರಸ್ತೆ ಬದಿಯಲ್ಲಿ ಮಲಗಿದ್ದ ವ್ಯಕ್ತಿಯ ಕಾಲಿನ ಮೇಲೆ ಕಾರು ಹರಿದು ವ್ಯಕ್ತಿ ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ತಡರಾತ್ರಿ ಸಂಭವಿಸಿದೆ. ಕಾರ್ಕಳ ಸಿಟಿ ನರ್ಸಿಂಗ್ ಹೋಂ ಕಡೆಯಿಂದ ಬಂದ ಕಾರು ಬಸ್ ನಿಲ್ದಾಣದ ಬಳಿಯ ಮ್ಯಾಡಿಸ್…

ಹೆಬ್ರಿ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆ ನೇಣು ಬಿಗಿದು ಆತ್ಮಹತ್ಯೆ

ಹೆಬ್ರಿ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ನೇಣಿಗೆ ಶರಣಾದ ಘಟನೆ ಹೆಬ್ರಿ ತಾಲೂಕಿನ ಜರುವತ್ತು ಎಂಬಲ್ಲಿ ಶುಕ್ರವಾರ ನಡೆದಿದೆ. ಹೆಬ್ರಿ ತಾಲೂಕಿನ ಜರುವತ್ತು ನಿವಾಸಿ ಶಕುಂತಳಾ ಪೂಜಾರಿ(53) ಎಂಬವರು ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಶಕುಂತಳಾ ಎಂಬವರಿಗೆ ನೆನಪಿನ ಶಕ್ತಿ…

ಜೆ.ಇ.ಇ. ಮೈನ್ಸ್‌ ಬಿ. ಆರ್ಕ್‌ (B.Arch) ಪರೀಕ್ಷೆಯಲ್ಲಿ ಕಾರ್ಕಳ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ಕಾರ್ಕಳ: ನ್ಯಾಶನಲ್‌ ಟೆಸ್ಟಿಂಗ್‌ ಏಜೆನ್ಸಿ (NTA) ವತಿಯಿಂದ ನಡೆಸಲ್ಪಟ್ಟ ಜೆ.ಇ.ಇ. ಮೈನ್ಸ್‌ ಬಿ. ಆರ್ಕ್‌ (B.Arch) ಪರೀಕ್ಷೆಯಲ್ಲಿ ಕಾರ್ಕಳ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿದ್ದಾರೆ. ರಾಷ್ಟ್ರ ಮಟ್ಟದ ಬ್ಯಾಚುಲರ್‌ ಆಫ್‌ ಆರ್ಕಿಟೆಕ್ಚರ್‌ -2024 ರ ಪ್ರಥಮ…

ಪಶುಚಿಕಿತ್ಸಾಲಯಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಸರಕಾರದ ನಡೆ ಖಂಡನೀಯ : ಸಾಣೂರು ನರಸಿಂಹ ಕಾಮತ್ ಆಕ್ರೋಶ

ಕಾರ್ಕಳ:ಕಳೆದ 2019ರ ಜಾನುವಾರು ಗಣತಿಯ ಆಧಾರದಲ್ಲಿ ಜಾನುವಾರುಗಳ ಸಂಖ್ಯೆ ಕಡಿಮೆ ಇರುವ ಪ್ರದೇಶದ ಪಶು ಚಿಕಿತ್ಸಾಲಯ ಮತ್ತು ಆಸ್ಪತ್ರೆಗಳನ್ನು ಮುಚ್ಚಲು ರಾಜ್ಯ ಸರಕಾರ ನಿರ್ಧಾರ ತೆಗೆದುಕೊಂಡಿದ್ದು ಈಗಾಗಲೇ ಈ ಬಗ್ಗೆ ಕ್ರಮ ಕೈಗೊಳ್ಳಲು ಸಿದ್ಧತೆಯನ್ನು ನಡೆಸುತ್ತಿದೆ. ಸರಕಾರದ ಜನ ವಿರೋಧಿ ನಡೆ…

ಸಮಾಜ ಸೇವಕ,ಉದ್ಯಮಿ ಅರುಣ್ ಕುಮಾರ್ ನಿಟ್ಟೆ ಅವರಿಗೆ ಸನ್ಮಾನ

ಕಾರ್ಕಳ: ಯಕ್ಷಧ್ರುವ ಪಟ್ಲ ಫೌಂಡೇಶನ್ ಪಳ್ಳಿ ಘಟಕ ಇದರ 5ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಕಾರ್ಕಳದ ಉದ್ಯಮಿ ಹಾಗೂ ಸಮಾಜ ಸೇವಕ ಅರುಣ್ ಕುಮಾರ್ ನಿಟ್ಟೆ ಅವರ ಸಮಾಜ ಸೇವೆ ಹಾಗೂ ಭಾಗವತಿಕೆಯಲ್ಲಿ ಅತ್ಯುತ್ತಮ ಪ್ರತಿಭೆ ಪ್ರದರ್ಶಿಸುತ್ತಿರುವ ಶ್ರೀರಕ್ಷಾ ಹೆಗ್ಡೆಯವರನ್ನು ಸನ್ಮಾನಿಸಿ…

ನಂದಳಿಕೆ: ಶ್ರೀ ಗುರುದುರ್ಗಾ ಮಿತ್ರ ಮಂಡಳಿ ಹಾಗೂ ಶ್ರೀ ಗುರುದುರ್ಗಾ ಮಹಿಳಾ ಮಂಡಳಿ ವಾರ್ಷಿಕೋತ್ಸವ

ಕಾರ್ಕಳ : ಒಗ್ಗಟ್ಟು ಇದ್ದಲ್ಲಿ ಕೆಲಸವನ್ನು ಜೊತೆಗೆ ಸಾಧನೆಯನ್ನು ಮಾಡಲು ಸುಲಭವಾಗುತ್ತದೆ. ಸಣ್ಣ ಸಣ್ಣ ಜೀವಿಗಳಿಂದ ಸಾಕಷ್ಟು ಕಲಿಯಬೇಕಾಗಿದೆ. ಯುವಕ ಹಾಗೂ ಯುವತಿ ಮಂಡಳಿಗಳು ಯಾವುದೆ ಮತ ಬೇಧವಿಲ್ಲದೆ ನಾವೆಲ್ಲರೂ ಸಮಾನರು ಎಂದು ಸದಾ ದುಡಿದಾಗ ಸಂಘದ ಏಳಿಗೆ ಸಾಧ್ಯವಾಗುತ್ತದೆ. ಮಾನವ…

ಮಾ.9 ಹಾಗೂ 12 ರಂದು ಸ್ತನ ಹಾಗೂ ಗರ್ಭಕಂಠ ಕ್ಯಾನ್ಸರ್ ಉಚಿತ ತಪಾಸಣಾ ಶಿಬಿರ : ಕಾರ್ಕಳದ ಡಾ. T.M.A Pai ರೋಟರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸಾ ಶಿಬಿರ

ಕಾರ್ಕಳ,ಮಾ 07: ಮಹಿಳೆಯರ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಕಾರ್ಕಳ ಡಾ.ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆ ಮತ್ತು ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲ ಜಂಟಿಯಾಗಿ ಸ್ತನ ಕ್ಯಾನ್ಸರ್ ಮತ್ತು ಗರ್ಭಕಂಠದ ಕ್ಯಾನ್ಸರ್ ಉಚಿತ ಕಲಾ ಶಿಬಿರವನ್ನು ಆಯೋಜಿಸಿದೆ. ಈ…

ಈದು: ಅಕ್ರಮ ದನ ಸಾಗಾಟ ಪ್ರಕರಣ: ಮನೆಯಲ್ಲಿ ಅಕ್ರಮ ಕಸಾಯಿಖಾನೆ?

ಕಾರ್ಕಳ: ಕಳವು ಮಾಡಿದ ದನಗಳನ್ನು ಮನೆಯ ಆವರಣದಲ್ಲಿ ಕಡಿದು ಮಾಂಸ ಮಾಡಿ ಮಾರಾಟ ಮಾಡುತ್ತಿದ್ದ ಜಾಲವನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ಸ್ಥಳೀಯರ ಸಹಾಯದಿಂದ ಬಯಲಿಗೆಳೆದಿದ್ದಾರೆ. ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ನೆಲ್ಲಿಕಾರು ಕಡೆಯಿಂದ ಹೊಸ್ಮಾರು ಕಡೆಗೆ ಪಿಕಪ್ ವಾಹನದಲ್ಲಿ ಜಾನುವಾರುಗಳನ್ನು…

ನಾಳೆ (ಮಾ.8 ರಂದು) ಮಹಾಶಿವರಾತ್ರಿ : ಕಾರ್ಕಳ ತಾಲೂಕಿನ ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ,ಜಾಗರಣೆ

ಕಾರ್ಕಳ: ಶುಕ್ರವಾರ ನಾಡಿನೆಲ್ಲೆಡೆ ಮಹಾಶಿವರಾತ್ರಿ ಸಡಗರಕ್ಕೆ ಶಿವ ದೇವಾಲಯಗಳು ಸಜ್ಜಾಗಿದ್ದು, ಈ ಹಿನ್ನೆಲೆಯಲ್ಲಿ ಕಾರ್ಕಳ ತಾಲೂಕಿನಾದ್ಯಂತ ಶಿವ ದೇವಾಲಯಗಳಲ್ಲಿ ಭಜನೆ, ಜಾಗರಣೆ ಸೇರಿದಂತೆ ವಿಶೇಷ ಪೂಜೆ ಪುನಸ್ಕಾರಗಳು ನಡೆಯಲಿವೆ. ಕಾರ್ಕಳ ತಾಲೂಕಿನ ಕೆರ್ವಾಶೆ, ಮಿಯ್ಯಾರು, ಪೆರ್ವಾಜೆ ಮಹಾಲಿಂಗೇಶ್ವರ ದೇವಸ್ಥಾನ, ಕಾರ್ಕಳ ಶಿವತಿಕೆರೆ…

ಮಾಳ: ಅಕ್ಷಯ ಇಂಡಸ್ಟ್ರೀಸ್  ಇಂಟರ್‌ಲಾಕ್, ಪ್ರಿಕ್ಯಾಸ್ಟ್ ವಾಲ್ ಫಟಕ ಶುಭಾರಂಭ

ಕಾರ್ಕಳ: ಇಂಟರ್ ಹಾಗೂ ಪ್ರಿಕ್ಯಾಸ್ಟ್ ವಾಲ್ ಉತ್ಪಾದಿಸುವ ಘಟಕ ಅಕ್ಷಯ ಇಂಡಸ್ಟ್ರೀಸ್ ಮಾ 6ರಂದು ಕಾರ್ಕಳ ತಾಲೂಕಿನ ಮಾಳ ಗ್ರಾಮದ ನ್ಯೂ ಪಡೀಲ್ ಎಂಬಲ್ಲಿ ಬುಧವಾರ ಶುಭಾರಂಭಗೊAಡಿದೆ. ಕಾರ್ಕಳ ತಾಲೂಕು ಮಿವೃತ್ತ ತಹಶೀಲ್ದಾರ್ ಶಾಂತರಾಮ ಚಿಪ್ಲುಣ್ಕರ್ ಹಾಗೂ ಉದ್ಯಮಿ ಶ್ರೀನಾಥ ಪೈ…