Category: ಸ್ಥಳೀಯ ಸುದ್ದಿಗಳು

ಫುಟ್‌ಬಾಲ್ ಪಂದ್ಯಾಟದಲ್ಲಿ ಕಾರ್ಕಳ ಜ್ಞಾನಸುಧಾದ ಮೂವರು ರಾಜ್ಯ ತಂಡಮಟ್ಟಕ್ಕೆ

ಕಾರ್ಕಳ : ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಸೈಂಟ್‌ಮೇರಿಸ್ ಪದವಿ ಪೂರ್ವ ಕಾಲೇಜು ಶಿರ್ವದಲ್ಲಿ ಜರುಗಿದ ಜಿಲ್ಲಾ ಮಟ್ಟದ ಫುಟ್‌ಬಾಲ್ ಪಂದ್ಯಾಟದಲ್ಲಿ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಬಾಲಕರ ತಂಡವು ದ್ವಿತೀಯ ಸ್ಥಾನವನ್ನು ಪಡೆದು ಸಂಸ್ಥೆಯ ಅನ್ಸಿತ್ ಎ ಭಂಡಾರಿ,…

ಮಾಳ ಕೆರ್ವಾಶೆ ವ್ಯವಸಾಯ ಸೇವಾ ಸಹಕಾರ ಸಂಘದ ಮಹಾಸಭೆ: ರೂ. 1.10 ಕೋಟಿ ಲಾಭ, ಶೇ 18 ಡಿವಿಡೆಂಡ್ ಘೋಷಣೆ

ಕಾರ್ಕಳ: ಮಾಳ ಕೆರ್ವಾಶೆ ವ್ಯವಸಾಯ ಸೇವಾ ಸಹಕಾರ ಸಂಘ ನಿ. ಮಾಳ ಇದರ 2024-25 ನೇ ಆರ್ಥಿಕ ವರ್ಷದಲ್ಲಿ 184 ಕೋಟಿ ರೂ. ವ್ಯವಹಾರ ನಡೆಸಿ ರೂ. 1.10 ಕೋಟಿ ನಿವ್ವಳ ಲಾಭ ಗಳಿಸಿದೆ. ಆರ್ಥಿಕ ಸಾಲಿನಲ್ಲಿ ಶೇ. 100 ಸಾಲ…

ಕಾರ್ಕಳ ಜ್ಞಾನಸುಧಾದಲ್ಲಿ ತಾಲೂಕು ಮಟ್ಟದ ಥ್ರೋಬಾಲ್ ಪಂದ್ಯಾಟ: ಜ್ಞಾನಸುಧಾ ಬಾಲಕಿಯರ ಹಾಗೂ ಭುವನೇಂದ್ರ ಬಾಲಕರ ತಂಡ ಜಿಲ್ಲಾಮಟ್ಟಕ್ಕೆ ಆಯ್ಕೆ

ಕಾರ್ಕಳ: ಗೆಲುವಿಗಾಗಿ ಆಡಿದವ ಸೋಲುತ್ತಾನೆ. ಉತ್ತಮ ಪ್ರದರ್ಶನ ನೀಡುವೆನೆಂದವ ಗೆಲ್ಲುತ್ತಾನೆ. ಕ್ರೀಡೆಯು ವ್ಯಕ್ತಿಯ ವಿಕಾಸದಲ್ಲಿ ಮಹತ್ವದ ಪಾತ್ರವಹಿಸುತ್ತಿದೆ ಎಂದು ಕಾರ್ಕಳ ಗ್ರಾಮಾಂತರ ಪೋಲಿಸ್ ಠಾಣೆಯ ಎಸ್.ಐ ಶ್ರೀ ಪ್ರಸನ್ನ ಎಂ. ಎಸ್ ಹೇಳಿದರು. ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ…

ಹೆಬ್ರಿ: ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿವೇತನ ವಿತರಣೆ

ಹೆಬ್ರಿ: ವಿದ್ಯಾರ್ಥಿ ವೇತನವನ್ನು ನೀಡುತ್ತಿರುವ ದಾನಿಗಳ ಆದರ್ಶವನ್ನು ಮೈಗೂಡಿಸಿಕೊಳ್ಳಿ ಮುಂದೆ ಜೀವನದಲ್ಲಿ ನೀವು ಅವರಂತೆ ಶಿಕ್ಷಣಕ್ಕೆ ನೆರವು ನೀಡುವವರಂತಾಗಿ, ಟ್ರಸ್ಟಿನ ಅಧ್ಯಕ್ಷ ಅವಿನಾಶ್ ಜಿ ಶೆಟ್ಟಿಯವರ ನಿಸ್ವಾರ್ಥ ಸೇವೆಗೆ ಅಭಿನಂದನೆಗಳು ಎಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾದ ವಿ. ಸುನಿಲ್ ಕುಮಾರ್…

ಶಿವಪುರ: ಮದ್ಯ ವ್ಯಸನಿ ಯುವಕ ನೇಣು ಬಿಗಿದು ಆತ್ಮಹತ್ಯೆ

ಹೆಬ್ರಿ,ಸೆ 13: ವಿಪರೀತ ಮದ್ಯಪಾನದ ಚಟ ಹೊಂದಿದ್ದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೆಬ್ರಿ ತಾಲೂಕಿನ ಶಿವಪುರ ಗ್ರಾಮದ ದೊರಿಯಾಲ್ ನಿವಾಸಿ ನಾಗೇಶ್(32) ಎಂಬವರು ಆತ್ಮಹತ್ಯೆ ಮಾಡಿಕೊಂಡ ಯುವಕ.ಅವರು ಕಳೆದ ಹಲವು ವರ್ಷಗಳಿಂದ ಮದ್ಯಪಾನ ಮಾಡುವ ಚಟ ಹೊಂದಿದ್ದರು. ಇದಲ್ಲದೇ ರಕ್ತದೊತ್ತಡ ಕಾಯಿಲೆಯಿಂದ…

ನಾಳೆ (ಸೆ. 14) ಜೋಡುಕಟ್ಟೆ ಕಲ್ಲಗುಪ್ಪೆ ಶಾಲೆಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಕಾರ್ಕಳ: ಸೇವಾ ಭಾರತ್ ಮಿಯ್ಯಾರು ಇವರ ನೇತೃತ್ವದಲ್ಲಿ ಅನ್ಕಾಡಿ ಫ್ರೆಂಡ್ಸ್ ಬೋರ್ಕಟ್ಟೆ, ಗಣೇಶೋತ್ಸವ ಸಮಿತಿ ಕುಂಟಿ ಬೈಲು, ನೆಲ್ಲಿಗುಡ್ಡೆ ಫ್ರೆಂಡ್ಸ್ ಮಿಯ್ಯಾರು, ಜವನೆರ ಕೂಟ ಮನ್ನಡ್ಕ ಬೋರ್ಕಟ್ಟೆ, ಸೂರಾಲು ಗ್ರಾಮ ಸೇವಾ ಟ್ರಸ್ಟ್ ಕಾರ್ಕಳ, ಹಳೆ ವಿದ್ಯಾರ್ಥಿ ಸಂಘ ಸರಕಾರಿ ಹಿರಿಯ…

ಕೆಎಂಇಎಸ್ ಕಾಲೇಜಿನಲ್ಲಿ ವಾಲಿಬಾಲ್ ಪಂದ್ಯಾಟ ಸಮಾರೋಪ- ಪಂದ್ಯಾಟಗಳಲ್ಲಿ ಸೋಲು ಗೆಲುವುಗಳು ಸಹಜ : ಅಂತಾರಾಷ್ಟ್ರೀಯ ಕ್ರಿಡಾಪಟು ಪದ್ಮನಾಭ ಭಂಡಿ

ಕಾರ್ಕಳ: ಕ್ರೀಡೆಗಳಲ್ಲಿ ಸೋಲು ಗೆಲುವು ಸಾಮಾನ್ಯ, ಕ್ರೀಡಾಪಟುಗಳು ಸೋತರೂ ಗೆದ್ದರೂ ಒಂದೇ ಮನಸ್ಥಿತಿಯನ್ನು ಹೊಂದಿರಬೇಕು. ಇಂದಿನ ಸ್ಫರ್ಧಾತ್ಮಕ ಯುಗದಲ್ಲಿ ಕ್ರೀಡಾಪಟುಗಳು ಮನೋರಂಜನೆಗಾಗಿ ಆಡಬೇಕು. ಕ್ರೀಡೆಗಳ ಮೂಲಕ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಬೇಕು ಎಂದು ಅಂತರಾಷ್ಟ್ರೀಯ ಕ್ರೀಡಾಪಟು ಪದ್ಮನಾಭ ಭಂಡಿಯವರು ಹೇಳಿದರು. ಅವರು…

ಕ್ರಿಯೇಟಿವ್ ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಕಾರ್ಕಳ: ಕಾರ್ಕಳ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ (ರಿ), ಕಾರ್ಕಳ ತಾಲೂಕು ಇದರ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸಪ್ತಸ್ವರ ವೇದಿಕೆಯಲ್ಲಿ “ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ” ಸೆ.12 ರಂದು ನಡೆಯಿತು. ಉದ್ಘಾಟಕರಾಗಿ ಆಗಮಿಸಿದ ತಾಲೂಕು ಜನಜಾಗೃತಿ…

ಬ್ರಹ್ಮಾವರ: ಪ್ರೇಯಸಿಯನ್ನು ಕೊಂದು ಪರಾರಿಯಾಗಿದ್ದ ಪ್ರಿಯಕರ ಶವವಾಗಿ ಪತ್ತೆ

ಉಡುಪಿ: ಮದುವೆಯಾಗಲು ನಿರಾಕರಿಸಿ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಕೋಪಗೊಂಡು ಪಾಗಲ್ ಪ್ರೇಮಿಯೊಬ್ಬ ಯುವತಿಯ ಕತ್ತು ಮತ್ತು ಎದೆಗೆ ಚಾಕುವಿನಿಂದ ಇರಿದು, ಪರಾರಿಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಪ್ರೇಯಸಿಗೆ ಚಾಕುವಿನಿಂದ ಇರಿದಿದ್ದ ಪಾಗಲ್ ಪ್ರೇಮಿ ತಾನು ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ…

ಕಾರ್ಕಳದಲ್ಲಿ ಗ್ಯಾರಂಟಿ ಸಮಾವೇಶ ಹಾಗೂ ಗ್ಯಾರಂಟಿ ಅದಾಲತ್: ಸದಾ ಬಡವರ ಬಗ್ಗೆ ಚಿಂತಿಸುವ ಪಕ್ಷ ಕಾಂಗ್ರೆಸ್: ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಉಡುಪಿ,ಸೆ 12: ಕರ್ನಾಟಕದ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದ ಬಿಜೆಪಿ ಇಂದು ಬೇರೆ ರಾಜ್ಯಗಳಲ್ಲಿ ನಮ್ಮ ಯೋಜನೆಗಳನ್ನು ನಕಲು ಮಾಡುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ‌…