Category: ಸ್ಥಳೀಯ ಸುದ್ದಿಗಳು

ನೂರಾಳ್’ಬೆಟ್ಟು: ಕೌಟುಂಬಿಕ ಕಲಹ ಹಿನ್ನೆಲೆ: ಪತಿಯಿಂದಲೇ ಪತ್ನಿಗೆ ಮಾರಣಾಂತಿಕ ಹಲ್ಲೆ, ಮಹಿಳೆ ಗಂಭೀರ

ಕಾರ್ಕಳ, ಜ. 28: ಕಾರ್ಕಳ ತಾಲೂಕಿನ ನೂರಾಳ್ ಬೆಟ್ಟು ಗ್ರಾಮದ ಗುಮ್ಮೆತ್ತು ಎಂಬಲ್ಲಿ ಪತಿಯೇ ಪತ್ನಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಮಹಿಳೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೂರಾಳ್ ಬೆಟ್ಟವಿನ ಗೀತಾ ಹಲ್ಲೆಗೊಳಗಾದ ಮಹಿಳೆ. ಗೀತಾ ಮತ್ತು ಪತಿ ಸುನೀಲ್…

ಅತ್ತೂರು ಸಂತ ಲಾರೆನ್ಸ್ ಬಸಿಲಿಕಾ ಪುಣ್ಯಕ್ಷೇತ್ರದ 3 ನೇ ದಿನದ ವಾರ್ಷಿಕ ಮಹೋತ್ಸವ

ಕಾರ್ಕಳ,ಜ.28: ಅತ್ತೂರು ಸಂತ ಲಾರೆನ್ಸ್ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ ಮೂರನೇ ದಿನ ಸಹಸ್ರಾರು ಭಕ್ತಾದಿಗಳ ಭಕ್ತಿಭಾವದ ನಡುವೆ ಭವ್ಯವಾಗಿ ನೆರವೇರಿತು. ದಿನವಿಡೀ ಸುಮಾರು ಹತ್ತು ದಿವ್ಯ ಬಲಿಪೂಜೆಗಳು ನೆರವೇರಿದವು. ಈ ವರ್ಷದ ಮಹೋತ್ಸವದ ಮುಖ್ಯ ಸಂದೇಶವಾಗಿರುವ “ನಾನು ನಿನ್ನನ್ನು ಪ್ರೀತಿಸಿದ್ದೇನೆ” ಎಂಬ…

ಮುನಿಯಾಲು ಗೋಧಾಮದಲ್ಲಿ ಶ್ರೀಮನ್ನಾಗಮಂಡಲ – ಕಚೇರಿ ಉದ್ಘಾಟನೆ:   ಗೋ ಸೇವೆಯಿಂದ ನಾಡು ಸಮೃದ್ಧಿ-  ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ

ಹೆಬ್ರಿ, ಜ.28: ಗೋಧಾಮದಲ್ಲಿ ಡಾ. ರಾಮಕೃಷ್ಣ ಆಚಾರ್ಯರು ಕೃಷಿಯೊಂದಿಗೆ, ಗೋವುಗಳ ಸೇವೆ ಮಾಡಿ ಮನ್ನಣೆ ಪಡೆದಿದ್ದಾರೆ. ರೈತನ ಬದುಕಿನ ಬಗ್ಗೆ ವಿಶೇಷ ಗೌರವ ನೀಡಿ ರೈತ ಪೀಠ ಪ್ರಶಸ್ತಿ ನೀಡುತ್ತಿರುವುದು ಉತ್ತಮವಾದ ಬೆಳವಣಿಗೆ. ವಿಜ್ಞಾನ, ವೈಚಾರಿಕತೆ, ಕೃಷಿ, ಆಧುನಿಕತೆಯೊಂದಿಗೆ, ಪ್ರಾಕೃತಿಕ ಸೌಂದರ್ಯದೊಂದಿಗೆ…

ರಸ್ತೆ ದಾಟುತ್ತಿದ್ದ ಪಾದಚಾರಿಗೆ ರಿಕ್ಷಾ ಡಿಕ್ಕಿ: ಗಾಯಗೊಂಡ ವ್ಯಕ್ತಿ ಚಿಕಿತ್ಸೆ ಫಲಿಸದೇ ಸಾವು

ಕಾರ್ಕಳ,ಜ.28: ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ರಿಕ್ಷಾ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ನಡೆದಿದೆ. ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ದೂಪದಕಟ್ಟೆ ಎಂಬಲ್ಲಿ ಸೋಮವಾರ ಸಂಜೆ ಈ ಅಪಘಾತ ಸಂಭವಿಸಿದ್ದು, ಸ್ಟ್ಯಾನಿ ರೋಡ್ರಿಗಸ್ ಎಂಬವರು ಮೃತಪಟ್ಟಿದ್ದಾರೆ. ರಿಕ್ಷಾ…

ಪ್ರತ್ಯೇಕ ಪ್ರಕರಣ : ಕಾರ್ಕಳ ತಾಲೂಕಿನಲ್ಲಿ ಇಬ್ಬರು ಆತ್ಮಹತ್ಯೆ

ಕಾರ್ಕಳ, ಜ.27: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕಾರ್ಕಳ ತಾಲೂಕಿನ ಎರಡು ಕಡೆ ಇಬ್ಬರು ವ್ಯಕ್ತಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಡಾರು ಗ್ರಾಮದ ಬಜಗೋಳಿಯ ಶೀನ ಪೂಜಾರಿ(48) ಎಂಬವರು ಪಿತ್ತಕೋಶ ಮತ್ತು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು, ಮದ್ಯಪಾನ ಮಾಡುವ ಚಟ ಹೊಂದಿದ್ದರು. ಕೆಲ ದಿನಗಳಿಂದ…

ಪಳ್ಳಿ ಗ್ರಾಮದಲ್ಲಿ ಅಕ್ರಮ ಕೆಂಪು ಕಲ್ಲಿನ ಕೋರೆಗೆ ದಾಳಿ: ಯಂತ್ರೋಪಕರಣಗಳು ಸೀಜ್

ಕಾರ್ಕಳ,ಜ.27: ಕಾರ್ಕಳ ತಾಲೂಕಿನ ಪಳ್ಳಿ ರಾಮದ ಕೊಲ್ಲಜಾಲು ಎಂಬಲ್ಲಿನ ನಾರಾಯಣ ನಾಯ್ಕ್ ಎಂಬವರ ಜಾಗದಲ್ಲಿ ಆರೋಪಿ ಶರಣಪ್ಪ ಎಂಬಾತ ಗಣಿ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೇ ಅಕ್ರಮವಾಗಿ ಕೆಂಪು ಕಲ್ಲು ತೆಗೆಯುವ ಖಚಿತ ಮಾಹಿತಿ ಮೇರೆಗೆ ಕಾರ್ಕಳ ನಗರ ಠಾಣೆಯ ಪೊಲೀಸರು…

ವರಂಗ : ಬೈಕಿಗೆ ಟಾಟಾ ಏಸ್ ಡಿಕ್ಕಿಯಾಗಿ ಸವಾರರಿಬ್ಬರಿಗೆ ಗಾಯ

ಹೆಬ್ರಿ,ಜ.27: ಬೈಕಿಗೆ ಟಾಟಾ ಏಸ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರರಿಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಹೆಬ್ರಿಯ ವರಂಗದಲ್ಲಿ ಭಾನುವಾರ ನಡೆದಿದೆ. ಶಂಕರನಾರಾಯಣದ ರಾಮ ಅವರು ತನ್ನ ಸಂಬಂಧಿ ಮನೋಜ್ ಅವರೊಂದಿಗೆ ಬೈಕಿನಲ್ಲಿ ಹೆಬ್ರಿಯಿಂದ ಕಾರ್ಕಳ ಕಡೆಗೆ ಹೋಗುತ್ತಿದ್ದಾಗ ವರಂಗ ಕೆಲ್…

ಹೆಬ್ಬೇರಿ ಉತ್ಸವ -2026 ಆಮಂತ್ರಣ ಪತ್ರಿಕೆ ಬಿಡುಗಡೆ

ಹೆಬ್ರಿ, ಜ. 27: ಹೆಬ್ಬೇರಿ ಉತ್ಸವ -2026 ರ ಆಮಂತ್ರಣ ಪತ್ರಿಕೆಯನ್ನು ಹೆಬ್ರಿ ಪೊಲೀಸ್ ಉಪನಿರೀಕ್ಷಕ ರವಿ ಬಿ.ಕೆ,ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಉದ್ಯಮಿ ಸಮಾಜ ಸೇವಕ ಎಚ್ ಬಾಸ್ಕರ್ ಜೋಯಿಸ್,ಉದ್ಯಮಿ ಕೇಶವ ನಾಯಕ್,ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿರುವ ಜನಾರ್ದನ ದೇವಾಡಿಗ ,ಲಯನ್ ಟಿ.ಜಿ…

ಬೆಂಗಳೂರು ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘದ ಕಾರ್ಕಳ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ಮಮತಾ ಅಂಚನ್ ಆಯ್ಕೆ

ಕಾರ್ಕಳ, ಜ.27: ಬೆಂಗಳೂರು ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘದ ಕಾರ್ಕಳ ತಾಲೂಕು ಘಟಕದ ಅಧ್ಯಕ್ಷರಾಗಿ ಕಾರ್ಕಳ ಪುರಸಭಾ ಮಾಜಿ ಸದಸ್ಯೆ ಮಮತಾ ಅಂಚನ್ ಆಯ್ಕೆಯಾಗಿದ್ದಾರೆ. ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ನಡೆದ ಶ್ರೀ ನಾರಾಯಣ ಗುರು ತತ್ತ್ವಪೂಜೆ ಹಾಗೂ ದಶಮಾನೋತ್ಸವ…

ಅಜೆಕಾರಿನಲ್ಲಿ ಕಾರಿಗೆ ಡಿಕ್ಕಿಯಾಗಿ ಪಲ್ಟಿಯಾದ ಮರ ಸಾಗಾಟದ ಲಾರಿ: ಮಹಿಳೆ ಸೇರಿ ಇಬ್ಬರಿಗೆ ಸಣ್ಣಪುಟ್ಟ ಗಾಯ

ಕಾರ್ಕಳ, ಜ. 26: ಮರ ಸಾಗಾಟದ ಲಾರಿಯೊಂದು ಕಾರಿಗೆ ಮುಖಾಮುಖಿ ಡಿಕ್ಕಿಯಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಸೇರಿ ಇಬ್ಬರು ಗಾಯಗೊಂಡ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ. ಮರದ ದಿಮ್ಮಿಗಳನ್ನು ಹೇರಿಕೊಂಡು ಹೆಬ್ರಿ ಕಡೆಯಿಂದ ಕಾರ್ಕಳ ಕಡೆಗೆ ಅತಿವೇಗವಾಗಿ ಸಾಗುತ್ತಿದ್ದಾಗ ಅಜೆಕಾರು ಮಸೀದಿ…