Category: ಸ್ಥಳೀಯ ಸುದ್ದಿಗಳು

ನಾಳೆ (ನ.16) ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ

ಅಜೆಕಾರು: ಅಜೆಕಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ದೀಪೊತ್ಸವವು ನಾಳೆ (ನ.16) ಸಾಯಂಕಾಲ ನಡೆಯಲಿದೆ. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಪ್ರಕಟಣೆ ತಿಳಿಸಿದೆ.

ಶಿಕ್ಷಣ ಮಗುವಿನ ಮನಸ್ಸನ್ನು ವಿಕಾಸ ಗೊಳಿಸುವ ದೊಡ್ಡ ಅಸ್ತ್ರ: ಜ್ಯೋತಿ ಗುರುಪ್ರಸಾದ್

ಕಾರ್ಕಳ: ಮಕ್ಕಳನ್ನು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ನಿರ್ಮಲವಾಗಿ ನಡೆಸಿಕೊಂಡು ಹೋಗುತ್ತಿರುವ ಇಲ್ಲಿನ ವ್ಯವಸ್ಥೆ ತುಂಬಾ ಖುಷಿ ನೀಡುತ್ತಿದೆ. ಯಾವುದೇ ವ್ಯವಸ್ಥೆಯನ್ನು ಕಲ್ಪಿಸಬಹುದು ಆದರೆ ಅದನ್ನು ಉಳಿಸಿಕೊಂಡು ಹೋಗುವುದು ಬಹಳ ಮುಖ್ಯ. ಅದು ಇಲ್ಲಿನ ಎಲ್ಲ ವಿದ್ಯಾರ್ಥಿಗಳಿಗೆ ಸಿಗುತ್ತಿದೆ ಶಿಕ್ಷಣ ಮಗುವಿನ…

ಬಿಹಾರ ವಿಧಾನ ಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿಯ ಸುಳ್ಳು ಮತಕಳ್ಳತನ ಅಭಿಯಾನ ಮಕಾಡೆ ಮಲಗಿದೆ: ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್

ಕಾರ್ಕಳ, ನ.14: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ NDA ಒಕ್ಕೂಟ ಭಾರೀ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಏರುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ನಾಯಕತ್ವಕ್ಕೆ ಬಿಹಾರದ ಜನ ಆಶೀರ್ವಾದ ಮಾಡಿದ್ದಾರೆ. ಮಹಾಘಟಬಂಧನ ಪ್ರಯೋಗಿಸಿದ ಅಪಪ್ರಚಾರದ ಸರಕು, ಅಭಿವೃದ್ಧಿ ರಾಜಕಾರಣದ ಮುಂದೆ ಮಂಕಾಗಿದೆ. ಚುನಾವಣಾ…

ಮಿಯ್ಯಾರು: ಗ್ಯಾರೇಜ್ ಮಾಲೀಕನ ನಿರ್ಲಕ್ಷ್ಯಕ್ಕೆ ಕಾರ್ಮಿಕ ಬಲಿ: ಜೆಸಿಬಿ ರಿಪೇರಿ ವೇಳೆ ಕಬ್ಬಿಣದ ಬಕೆಟ್ ಅಪ್ಪಳಿಸಿ ಕಾರ್ಮಿಕ ದಾರುಣ ಸಾವು

ಕಾರ್ಕಳ, ನ,14: ಹಿಟಾಚಿ, ಜೆಸಿಬಿ,ಟಿಪ್ಪರ್ ಸೇರಿದಂತೆ ಘನವಾಹನಗಳ ರಿಪೇರಿ ಮಾಡುವ ಗ್ಯಾರೇಜಿನಲ್ಲಿ ಜೆಸಿಬಿ ಮಾಡಿರುವ ತಪ್ಪಿಗೆ ಜೆಸಿಬಿಯ ಕಬ್ಬಿಣದ ಬಕೆಟ್ ಬಡಿದು ಗ್ಯಾರೇಜ್ ಮೆಕ್ಯಾನಿಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉತ್ತರ ಭಾರತ ಮೂಲದ ಚಿಂಟು ಚೌಹಾಣ್(26) ಎಂಬವರು ಮೃತಪಟ್ಟ ಯುವಕ. ಚಿಂಟು ಚೌಹಾಣ್…

ಮಿಯ್ಯಾರು: ಮೊಬೈಲ್ ಕೊಡಿಸಿಲ್ಲ ಎನ್ನುವ ಕಾರಣಕ್ಕೆ ತಾಯಿ ಜೊತೆ ಜಗಳವಾಡಿ ವಿದ್ಯಾರ್ಥಿ ಕಲ್ಲಿಕೋರೆಯ ನೀರಿಗೆ ಹಾರಿ ಆತ್ಮಹತ್ಯೆ

ಕಾರ್ಕಳ, ನ,14: ಮೊಬೈಲ್ ತೆಗೆಸಿ ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ತಾಯಿ ಜೊತೆ ಜಗಳವಾಡಿ ವಿದ್ಯಾರ್ಥಿಯೋರ್ವ ಮನೆಬಿಟ್ಟು ಕಲ್ಲಿನಕೋರೆಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಕಾರ್ಕಳ ತಾಲೂಕಿನ ಮಿಯ್ಯಾರಿನಲ್ಲಿ ನಡೆದಿದೆ. ಮಿಯ್ಯಾರು ಗ್ರಾಮದ ಸುರೇಖಾ ಎಂಬವರ ಪುತ್ರ ಸುಮಂತ್ ದೇವಾಡಿಗ(16)…

ಕಾರ್ಕಳದಲ್ಲಿ ಭಾರೀ ಮಳೆ: ಅಕಾಲಿಕ ಮಳೆಯಿಂದ ಅಡಿಕೆ, ಭತ್ತದ ಕೃಷಿ, ಹಣ್ಣಿನ ಬೆಳೆಗಳಿಗೆ ಮಾರಕ

ಕಾರ್ಕಳ, ನ,13: ಕಳೆದ ಒಂದು ವಾರದಿಂದ ಕಾರ್ತಿಕ ಮಾಸದಲ್ಲಿ ಮಾಗಿಯ ಚಳಿ ಆರಂಭವಾದ ಬೆನ್ನಲ್ಲೇ ಇದೀಗ ಮತ್ತೆ ಹವಾಮಾನದಲ್ಲಿ ದಿಢೀರ್ ಬದಲಾವಣೆಯಾಗಿದ್ದು, ಎರಡು ದಿನಗಳಿಂದ ಮೋಡ ಕವಿದ ವಾತಾವರಣವಿತ್ತು. ಇಂದು ಸಂಜೆ 5 ಗಂಟೆಯ ವೇಳೆಗೆ ಕಾರ್ಕಳ ಪೇಟೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ…

ಅಕ್ರಮ ಗೋವು ಕಳ್ಳತನ-ಅಕ್ರಮ ಕಸಾಯಿಖಾನೆ ಸ್ಥಳೀಯ ಕಾಂಗ್ರೆಸ್‌ ಬೆಂಬಲದಿಂದ ನಡೆಯುತ್ತಿದೆಯೇ ?: ಬಿಜೆಪಿ ಯುವಮೋರ್ಚಾ ಅಧ್ಯಕ್ಷ ರಾಕೇಶ್ ಶೆಟ್ಟಿ ಪ್ರಶ್ನೆ

ಕಾರ್ಕಳ,ನ.13 : ಕಾರ್ಕಳ ತಾಲೂಕಿನಲ್ಲಿ ನಿರಂತರವಾಗಿ ಗೋವು ಕಳ್ಳತನ ಹಾಗೂ ರಾಜಾರೋಷವಾಗಿ ಹತ್ಯೆ ನಡೆಯುತ್ತಿದೆ. ಈ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳು ಕಾಂಗ್ರೆಸ್‌ ಕಾರ್ಯಕರ್ತರೆ ಇದ್ದಾರೆ. ಆದ್ದರಿಂದ ಇವರಿಗೆ ಯಾರು ಬೆಂಬಲವಾಗಿ ನಿಂತಿದ್ದಾರೆ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡುತ್ತಿದೆ. ಕಾಂಗ್ರೆಸ್‌…

ಯೋಗಾಸನ ಸ್ಪರ್ಧೆ : ಕಾರ್ಕಳ ಜ್ಞಾನಸುಧಾ ಕಾಲೇಜಿನ ಮೂವರು ರಾಜ್ಯ ಮಟ್ಟಕ್ಕೆ

ಕಾರ್ಕಳ,ನ,13 : ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಜಿಲ್ಲೆ ಹಾಗೂ ವಿದ್ಯೋದಯ ಪದವಿ ಪೂರ್ವ ಕಾಲೇಜು ಇವರ ಜಂಟಿ ಆಶ್ರಯದಲ್ಲಿ ಜರುಗಿದ ಉಡುಪಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಆರ್ಟಿಸ್ಟಿಕ್ ಸೋಲೊ ವಿಭಾಗದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ…

ತಾಲೂಕು ಮಟ್ಟದ ಥ್ರೋಬಾಲ್ ಪಂದ್ಯಾಟ: ಅಜೆಕಾರು ಚರ್ಚ್ ಶಾಲೆಯ ಬಾಲಕ- ಬಾಲಕಿಯರ ತಂಡ ಪ್ರಥಮ

ಕಾರ್ಕಳ : ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢ ಶಾಲಾ ವಿಭಾಗ ಸಾಣೂರು ಇಲ್ಲಿ ನಡೆದ ತಾಲೂಕು ಮಟ್ಟದ ಥ್ರೋ ಬಾಲ್ ಪಂದ್ಯಾಟದಲ್ಲಿ ಚರ್ಚ್ ಆಂಗ್ಲ ಮಾಧ್ಯಮ ಶಾಲೆ ಅಜೆಕಾರು ಇಲ್ಲಿಯ ಬಾಲಕ ಬಾಲಕಿಯರ ಎರಡು ತಂಡಗಳು ಪ್ರಥಮ ಸ್ಥಾನ ಪಡೆದು…

ಕಾರ್ಕಳದ ನಲ್ಲೂರಿನಲ್ಲಿ ಅಕ್ರಮ ಕಸಾಯಿಖಾನೆ, ತೆಳ್ಳಾರಿನಲ್ಲಿ ಜಿಂಕೆ ಮಾಂಸ ಪತ್ತೆ ಪ್ರಕರಣ: ಕಾಂಗ್ರೆಸ್ ಪರ ಕೆಲಸ ಮಾಡಿದ ಆರೋಪಿಗಳ ಅಪರಾಧ ಕೃತ್ಯಗಳಿಗೆ ಕಾಂಗ್ರೆಸ್ ನೇರ ಬೆಂಬಲ: ಶಾಸಕ ಸುನಿಲ್ ಕುಮಾರ್ ಆಕ್ರೋಶ

ಕಾರ್ಕಳ,ನ.12: ಕಾರ್ಕಳದ ಶಿರ್ಲಾಲಿನಲ್ಲಿ ಬಡ ಹೈನುಗಾರ ಮಹಿಳೆಗೆ ತಲವಾರು ತೋರಿಸಿ ದನ ಕಳ್ಳತನ ಪ್ರಕರಣ, ನಲ್ಲೂರಿನಲ್ಲಿ ಮನೆಯಲ್ಲೇ ಅಕ್ರಮ ಕಸಾಯಿಖಾನೆ , ತೆಳ್ಳಾರಿನಲ್ಲಿ ಕಾಡುಪ್ರಾಣಿ ಮಾಂಸ ಪತ್ತೆ ಪ್ರಕರಣದ ಆರೋಪಿಗಳು ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡಿದ್ದು,ಇಂತಹ ಕ್ರಿಮಿನಲ್ ಗಳಿಗೆ ಕಾರ್ಕಳ…