Category: ಸ್ಥಳೀಯ ಸುದ್ದಿಗಳು

ನಲ್ಲೂರು ಅಕ್ರಮ ಗೋಹತ್ಯೆ ಪ್ರಕರಣ: ರಾಜಕೀಯ ಒತ್ತಡಕ್ಕೆ ಮಣಿಯದೆ ಆರೋಪಿಗಳ ಹೆಡೆಮುರಿಕಟ್ಟಿ – ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್‌ ನಾಯಕ್‌ ಆಗ್ರಹ

ಕಾರ್ಕಳ : ನಲ್ಲೂರಿನಲ್ಲಿ ನಡೆದಿರುವ ಅಕ್ರಮ ಹಾಗೂ ವ್ಯವಸ್ಥಿತ ಗೋಹತ್ಯೆ ದಂಧೆಯ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಯನ್ನು ವಿಧಿಸಬೇಕು ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಆಗ್ರಹಿಸಿದ್ದಾರೆ. ಪ್ರತಿ ಬಾರಿ ಗೋ ರಕ್ಷಣೆಯ ಕಾರ್ಯ ಮಾಡುವ ಹಿಂದೂ ಸಂಘಟನೆಗಳ ಕಾರ್ಯಕರ್ತರ…

ರಾಜ್ಯಮಟ್ಟದ ಸ್ಕೇಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಜನಿಟ ವೆಲಿಕಾ ಡಿಸೋಜಾ ಅವರಿಗೆ ಚಿನ್ನದ ಪದಕ

ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ 2ನೇ ವರ್ಷದ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿದ್ಯಾರ್ಥಿನಿ ಜನಿಟ ವೆಲಿಕ ಡಿಸೋಜ ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್ ಬೆಂಗಳೂರಿನಲ್ಲಿ ನವೆಂಬರ್ 5ರಿಂದ 8ರವರೆಗೆ ಆಯೋಜಿಸಿದ್ದ 41ನೇ ಕರ್ನಾಟಕ ರೋಲರ್ ಸ್ಕೇಟಿಂಗ್…

ಕಾರ್ಕಳ: ನಲ್ಲೂರಿನಲ್ಲಿ ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ: 200 ಕೆಜಿಗಿಂತ ಅಧಿಕ ದನದ ಮಾಂಸ ವಶಕ್ಕೆ-ಪ್ರಮುಖ ಆರೋಪಿ ಅಶ್ರಫ್ ಸೇರಿದಂತೆ ಮೂವರು ಪರಾರಿ

ಕಾರ್ಕಳ : ನಲ್ಲೂರು ಗ್ರಾಮದ ಕರ್ಮರಟ್ಟೆ ಪಡೀಲುಬೆಟ್ಟು ಎಂಬಲ್ಲಿ ಅಕ್ರಮ ಕಸಾಯಿಖಾನೆಗೆ ಪೊಲೀಸರು ದಾಳಿ ನಡೆಸಿ, 200 ಕೆಜಿ ಗಿಂತ ಅಧಿಕ ದನದ ಮಾಂಸವನ್ನು ವಸಪಡಿಸಿಕೊಂಡಿದ್ದಾರೆ. ದಾಳಿಯ ವೇಳೆ ಪ್ರಮುಖ ಆರೋಪಿ ಅಶ್ರಫ್ ಸೇರಿದಂತೆ ನವಾಜ್, ಅಫ್ತಾಬ್ (ಅಪ್ಪು) ಪರಾರಿಯಾಗಿದ್ದಾರೆ. ಅಶ್ರಫ್…

ಕಾರ್ಕಳ ಶಾಸಕರಿಂದ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ: ಇಲಾಖೆಗಳ ನಡುವೆ ಹೊಂದಾಣಿಕೆಯಿಂದ ಕೆಲಸ ಮಾಡಬೇಕು: ಯೋಜನೆಗಳು ಜನರಿಗೆ ತಲುಪಿಸುವಲ್ಲಿ ಬೇಜವಾಬ್ದಾರಿತನ ಸಹಿಸಲು ಸಾಧ್ಯವಿಲ್ಲ: ಅಧಿಕಾರಿಗಳಿಗೆ ಶಾಸಕ ಸುನಿಲ್ ಕುಮಾರ್ ಖಡಕ್ ಸೂಚನೆ

ಕಾರ್ಕಳ, ನ. 10: ಅಧಿಕಾರಿಗಳು ತಮ್ಮ ಇಲಾಖೆಗಳ ನಡುವೆ ಹೊಂದಾಣಿಕೆಯಿಂದ ಕೆಲಸ ಮಾಡಿದಾಗ ಕಾರ್ಕಳದ ಸಮಗ್ರ ಅಭಿವೃದ್ಧಿ ಸಾಧ್ಯ. ಅಧಿಕಾರಿಗಳು ಕಚೇರಿ ಬಿಟ್ಟು ಜನರ ಬಳಿಗೆ ಹೋಗಿ ಸರ್ಕಾರದ ಯೋಜನೆಗಳನ್ನು ತಲುಪಿಸುವ ಪ್ರಯತ್ನ ಮಾಡಬೇಕು ಎಂದು ಶಾಸಕ ಸುನಿಲ್ ಕುಮಾರ್ ಅಧಿಕಾರಿಗಳಿಗೆ…

 ಖ್ಯಾತ ನ್ಯಾಯವಾದಿ ದಿ. ಎಂ ಕೆ ವಿಜಯ ಕುಮಾರ್ ಅವರ ಸ್ಥಿರಸ್ಥಾಯಿ ನೆನಪಿಗಾಗಿ ಕಾರ್ಕಳ ಬಾಹುಬಲಿ ಬೆಟ್ಟಕ್ಕೆ ಶಾಶ್ವತ ದಾರಿದೀಪ ಅಳವಡಿಕೆ

ಕಾರ್ಕಳ : ಕಾರ್ಕಳದ ಖ್ಯಾತ ನ್ಯಾಯವಾದಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ದಿ. ಎಂ ಕೆ ವಿಜಯ ಕುಮಾರ್ ಅವರ ಸ್ಥಿರಸ್ಥಾಯಿ ನೆನಪಿಗಾಗಿ ಕಾರ್ಕಳದ ಬಾಹುಬಲಿ ಬೆಟ್ಟದ ರಸ್ತೆಗೆ ಹಾಗೂ ಬಾಹುಬಲಿ ಬೆಟ್ಟದ ಮೇಲ್ಬಾಗದಲ್ಲಿ ಎಸ್ ಸಿ ಡಿ ಸಿ ಸಿ…

ಬ್ರಿಟಿಷ್ ಅಧಿಕಾರಿಯನ್ನು ಸ್ವಾಗತಿಸಲು ರಾಷ್ಟ್ರಗೀತೆ ಬರೆಯಲಾಯಿತು ಎನ್ನುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿಕೆ ಖಂಡನೀಯ: ತಕ್ಷಣವೇ ಸಂಸದ ಸ್ಥಾನದಿಂದ ವಜಾಗೊಳಿಸಿ: ಕಾಂಗ್ರೆಸ್ ವಕ್ತಾರ ಬಿಪಿನ್’ಚಂದ್ರ ಪಾಲ್ ಆಗ್ರಹ

ಕಾರ್ಕಳ, ನ.10: ದೇಶದ ಪರಮೋಚ್ಚ ಸಂವಿಧಾನದಡಿಯಲ್ಲಿ ನಾವು ಒಪ್ಪಿಕೊಂಡ ರಾಷ್ಟ್ರಗೀತೆಯನ್ನು ಬ್ರಿಟಿಷ್ ಅಧಿಕಾರಿಯನ್ನ ಸ್ವಾಗತಿಸಲು ಬರೆದ ಕವಿತೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನೀಡಿದ ಹೇಳಿಕೆ ದೇಶಕ್ಕೆ ಮಾಡಿದ ಮಹಾಪಮಾ‌ನ. ಇದರ ಹಿಂದೆ ಬಿಜೆಪಿಯ ಮನುವಾದಿ ಹಿನ್ನೆಲೆಯ ಗುಪ್ತ ಕಾರ್ಯ…

ಯೋಗ ಸ್ಪರ್ಧೆ : ಕ್ರಿಯೇಟಿವ್ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಕಾರ್ಕಳ,ನ. 09: ಜಿಲ್ಲಾಮಟ್ಟದ ಯೋಗ ಸ್ಪರ್ಧೆ ಉಡುಪಿಯ ವಿದ್ಯೋದಯ ಪಿ.ಯು ಕಾಲೇಜಿನಲ್ಲಿ ನ. 7ರಂದು ಜರುಗಿತು. ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಅರ್ಥಮ್ ಎ. ಶೆಟ್ಟಿ ಹಾಗೂ ರಕ್ಷಕ್ ಎಸ್. ಗೌಡ ಇವರು ಕಲಾತ್ಮಕ ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕದೊಂದಿಗೆ…

ಎಳ್ಳಾರೆಯ ಅಶ್ವಥ್ ನಾಯಕ್ ಅವರಿಗೆ ಸಂಶೋಧನಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ: ಶಾಸಕ ಸುನಿಲ್ ಕುಮಾರ್ ಅವರಿಂದ ಸನ್ಮಾನ

ಕಾರ್ಕಳ, ನ.09: ಮೀನು ಸಾಕಣೆಯ ಉದ್ದೇಶಕ್ಕಾಗಿ ರೋಹು ಮತ್ತು ಟಿಲಾಪಿಯಾ ಎಂಬ ಮೀನಿನಿಂದ ಪ್ರೋಬಯಾಟಿಕ್ ಬ್ಯಾಕ್ಟೀರಿಯಾದ ಪ್ರತ್ಯೇಕತೆ ಮತ್ತು ಗುಣಲಕ್ಷಣದ ಬಗ್ಗೆ ಡಾ.ಬಿಸ್ವಜಿತ್ ಮೈತಿ ಇವರ ಮಾರ್ಗದರ್ಶನದಲ್ಲಿ ಎಳ್ಳಾರೆ ಹಸಲುಜಡ್ಡು ಪುಂಡಲೀಕ ನಾಯಕ್ ಮತ್ತು ಸುಮನ ದಂಪತಿಯ ಪುತ್ರ ಅಶ್ವಥ್ ನಾಯಕ್…

ಮಹಾಮಜ್ಜನ ಸಜ್ಜಾದ ಕಾರ್ಕಳದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ: ಮಹಾಮಸ್ತಕಾಭಿಷೇಕ ಮಹೋತ್ಸವದ ಪೂರ್ವಭಾವಿ ಸಮಾಲೋಚನಾ ಸಭೆ

ಕಾರ್ಕಳ,ನ. 09 : ಅಹಿಂಸೆಯ ಸಂದೇಶವನ್ನು ಜಗತ್ತಿಗೆ ಸಾರಿದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕಕ್ಕೆ ಕಾರ್ಕಳ ಮತ್ತೊಮ್ಮೆ ಸಜ್ಜಾಗುತ್ತಿದೆ. ಮಸ್ತಕಾಭಿಷೇಕ ಮಹೋತ್ಸವದ ಪೂರ್ವಭಾವಿ ಸಮಾಲೋಚನಾ ಸಭೆಯು ಶ್ರೀ ಜೈನ ಧರ್ಮ ಜೀರ್ಣೋದ್ಧಾರಕ ಸಂಘದ ಕಾರ್ಯಾಧ್ಯಕ್ಷರಾದ ಡಾ. ಎಂ ಎನ್ ರಾಜೇಂದ್ರ…

ಅಜೆಕಾರು: ಹೃದಯಾಘಾತದಿಂದ ಯುವಕ ಮೃತ್ಯು

ಕಾರ್ಕಳ, ನ.08: ತೀವೃ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅಜೆಕಾರಿನ ಯುವಕನೋರ್ವ ಚಿಕಿತ್ಸೆ ಫಲಿಸದೇ ಮೃತಪಟ್ಟ ದಾರುಣ ಘಟನೆ ಶನಿವಾರ ನಡೆದಿದೆ. ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಅಜೆಕಾರು ದೆಪ್ಪುತ್ತೆ ಮೊಗಂಟೆಯ ಸುದರ್ಶನ ಶೆಟ್ಟಿ ಎಂಬವರ ಪುತ್ರ ಪುನೀತ್ ಶೆಟ್ಟಿ(37ವ) ಎಂಬವರು ಮೃತಪಟ್ಟ…