Category: ಸ್ಥಳೀಯ ಸುದ್ದಿಗಳು

ಪ್ರಬಂಧ ಸ್ಪರ್ಧೆ :ಜ್ಞಾನಸುಧಾದ ಪ್ರಜ್ಞಾ ಮೋಹನ್‌ಗೆ ತೃತೀಯ ಸ್ಥಾನ

ಕಾರ್ಕಳ,ಡಿ,17: ತುಮಕೂರಿನ ಎಂಪ್ರೈಸ್ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಸಹಯೋಗದಲ್ಲಿ ನಡೆದ ಪದವಿಪೂರ್ವ ಕಾಲೇಜಿನ ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆ-2025ರ ಕನ್ನಡಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಸ್ಥಾನ…

ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು: ಕಾರ್ಕಳ ತಹಶೀಲ್ದಾರ್  ಪ್ರದೀಪ್.ಆರ್.

ಕಾರ್ಕಳ ಡಿ. 17: ಕಾರ್ಕಳ .ಕೆ.ಎಮ್.ಇ.ಎಸ್ ವಿದ್ಯಾಸಂಸ್ಥೆ ಜಗತ್ತಿನಾದ್ಯಾಂತ ಹಲವಾರು ಗಣ್ಯವ್ಯಕ್ತಿಗಳನ್ನು ನೀಡಿದೆ.ಕರಾವಳಿಯ ವಿದ್ಯಾರ್ಥಿಗಳು ಐ.ಎ.ಎಸ್, ಕೆ.ಎ.ಎಸ್ ನಂತಹ ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಅಧಿಕಾರಿಗಳಾಗಿ ಆಡಳಿತ ವ್ಯವಸ್ಥೆಯಲ್ಲಿ ಪಾಲ್ಗೊಳ್ಳುವಂತೆ ಕಾರ್ಕಳ ತಹಶೀಲ್ದಾರ್ ಪ್ರದೀಪ್.ಆರ್. ಕರೆ ನೀಡಿದರು. ಅವರು ಕಾರ್ಕಳ ಕುಕ್ಕುಂದೂರು ಕೆ.ಎಮ್.ಇ.…

ಮಾಳ: ಮದ್ಯವ್ಯಸನಿ ನೇಣು ಬಿಗಿದು ಆತ್ಮಹತ್ಯೆ

ಕಾರ್ಕಳ,ಡಿ.17:ತಾಲೂಕಿನ ಮಾಳ ಗ್ರಾಮದ ಮುಳ್ಳೂರು ಎಂಬಲ್ಲಿ ಮದ್ಯವ್ಯಸನಿ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಳ್ಳೂರಿನ ವಿಷ್ಣು ನಾಯಕ್‌ ಆತ್ಮಹತ್ಯೆ ಮಾಡಿಕೊಂಡವರು. ಕೂಲಿ ಕೆಲಸ ಮಾಡಿಕೊಂಡಿದ್ದ ವರು ವಿಪರೀತ ಮದ್ಯಪಾನ ಮಾಡುತ್ತಿದ್ದರು. ಅಲ್ಲದೆ ಹೃದಯ ಸಂಬಂದಿ ಕಾಯಿಲೆಯಿಂದ ಬಳಲುತ್ತಿದ್ದರು. ಈ ಬಗ್ಗೆ…

ಮಾಳ ಶ್ರೀ ಗುರುಕುಲ ಅನುದಾನಿತ ಶಾಲೆಯ ಅಮೃತ ಮಹೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

ಕಾರ್ಕಳ,ಡಿ.17: ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾಳ ಇದರ ಅಮೃತ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಶಾಲಾ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಶ್ರೀ ಗುರುಕುಲ ಅಮೃತ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ನಾಗಭೂಷಣ ಜೋಶಿ ಮಾಳ, ಕಾರ್ಯಾಧ್ಯಕ್ಷರಾದ…

ಕಾರ್ಕಳ ಮೈನ್ ಶಾಲೆಯಲ್ಲಿ ಕಲಿಕಾ ಹಬ್ಬ

ಕಾರ್ಕಳ, ಡಿ.17: ಸಾಣೂರು ಕ್ಲಸ್ಟರ್ ಮಟ್ಟದ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನದ ಕಲಿಕಾ ಹಬ್ಬವನ್ನು ಕಾರ್ಕಳ ಮೈನ್ ಶಾಲೆಯಲ್ಲಿ ಪುರಸಭೆಯ ನಿಕಟ ಪೂರ್ವ ಅಧ್ಯಕ್ಷ ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿ ಪ್ರದೀಪ್ ರಾಣೆ ಅಧ್ಯಕ್ಷತೆ ವಹಿಸಿ, ಉದ್ಘಾಟಿಸಿ ಶುಭ ಹಾರೈಸಿದರು.…

ಕನ್ನಡ ಸಂಘ ಕಾಂತಾವರಕ್ಕೆ ಸೃಜನ ಸಾಹಿತ್ಯ ಸೌರಭ ಪ್ರಶಸ್ತಿ

ಕಾರ್ಕಳ, ಡಿ.15: ಕಾರ್ಕಳ ತಾಲೂಕು ಇಪ್ಪತ್ತೊಂದನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ. ಸುಧಾಕರ ಶೆಟ್ಟಿ, ಅಧ್ಯಕ್ಷರು ಪದ್ಮ ಗೋಪಾಲ ಎಜುಕೇಶನ್ ಟ್ರಸ್ಟ್ ಗಣಿತ ನಗರ ಕುಕ್ಕುಂದೂರು ಇವರ ಪ್ರಾಯೋಜಕತ್ವದಲ್ಲಿ ದಿ| ಗೋಪಾಲ ಭಂಡಾರಿ ಇವರ ಸ್ಮರಣಾರ್ಥ ಕನ್ನಡ ನಾಡು – ನುಡಿ…

ನೆಲ್ಲಿಕಟ್ಟೆ: ಮದ್ಯವ್ಯಸನಿ ಕುಸಿದು ಬಿದ್ದು ಸಾವು

ಕಾರ್ಕಳ,ಡಿ.15: ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ನೆಲ್ಲಿಕಟ್ಟೆ ಎಂಬಲ್ಲಿ ಮದ್ಯವ್ಯಸನಿ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟಿದ್ದಾರೆ.ಕೊರಳ ಮನೆ ನಿವಾಸಿ ದಯಾನಂದ ಮೂಲ್ಯ (52) ಮೃತಪಟ್ಟವರು. ಅವರು ಮನೆಯ ಸಮೀಪದಲ್ಲಿ ಕ್ಯಾಂಟೀನ್‌ ನಡೆಸಿ ಜೀವನ ನಡೆಸುತ್ತಿದ್ದು ಇವರು ಕಳೆದ 25 ವರ್ಷಗಳಿಂದ ಮದ್ಯಪಾನದ…

ಮೊಹಮ್ಮದ್ ಶರೀಫ್ ಅವರಿಗೆ ‘ರಾಷ್ಟ್ರೀಯ ಮಾಧ್ಯಮ ರತ್ನ’ ಪ್ರಶಸ್ತಿ

ಕಾರ್ಕಳ,ಡಿ.13: ಚಿರಾಯು ಕನ್ನಡ ಟಿವಿ, ನೆನಪು ಫೌಂಡೇಶನ್ (ರಿ.), ಕರ್ನಾಟಕ ವತಿಯಿಂದ ಆಯೋಜಿಸಲಾದ ರಾಷ್ಟ್ರಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆಯುವ ಸಾಧಕರಿಗೆ ಗೌರವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಮಾಜ ಸೇವಕ ಮೊಹಮ್ಮದ್ ಶರೀಫ್…

ಗೋ ನಂದಿ ಸೇವಾದಳ ಕರ್ನಾಟಕ ಇದರ ರಾಜ್ಯ ಮಹಿಳಾ ಸಂಚಾಲಕಿ ಆಗಿ ಕಾರ್ಕಳದ ಶ್ರೀಮತಿ ರಮಿತಾ ಸೂರ್ಯವಂಶಿ ಆಯ್ಕೆ

ಕಾರ್ಕಳ, ಡಿ.13: ಗೋ ಸೇವಾ ಕಾರ್ಯಚಟುವಟಿಕೆ ದೇಶಾದ್ಯಂತ ಮಾಡುವ ಉದ್ದೇಶದಿಂದ ಗೋವಿನ ರಕ್ಷಣೆ ಮತ್ತು ಪೋಷಣೆ ಮುಖ್ಯ ವಾಗಿ ಆಗಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲಿ ಮಹಿಳಾ ಜಾಗೃತಿ ಕಾರ್ಯಕ್ರಮದ ಅಗತ್ಯವಿರುವುದರಿಂದ ತಂಡದ ರಾಜ್ಯ ಮಹಿಳಾ ಸಂಚಾಲಕಿ ಆಗಿ ಕಾರ್ಕಳದ…

ಪರಸ್ಪರ ಸೇವಾ ಟ್ರಸ್ಟ್ ಈದು -ನಾರಾವಿ ವತಿಯಿಂದ ಹಿಂದೂ ಸಂಘಟನೆ ಕಾರ್ಯಕರ್ತನಿಗೆ ಒಂದು ಲಕ್ಷ ರೂ. ಸಹಾಯಧನ ವಿತರಣೆ

ಕಾರ್ಕಳ,ಡಿ.12: ಹಿಂದೂ ಸಂಘಟನೆಯ ಕಾರ್ಯಕರ್ತರಾದ ಸಂತೋಷ್ ಆಚಾರ್ಯ ಅವರು ಒಂದು ತಿಂಗಳ ಹಿಂದೆ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ವೇಳೆ ಮಾಡಿನಿಂದ ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಮಂಗಳೂರಿನ ಎ.ಜೆ ಹಾಸ್ಪಿಟಲ್ ನಲ್ಲಿ ಒಂದು ತಿಂಗಳ ಕಾಲ ಚಿಕಿತ್ಸೆ ಪಡೆದು ಕೆಲವು ದಿನಗಳ…