
ಕಾರ್ಕಳ, ಮೇ.04:ಪಶ್ಚಿಮ ಬಂಗಾಲವನ್ನು ಸುದೀರ್ಘ ಕಾಲದಿಂದ ಕಾಡುತ್ತಿದ್ದ ಅರಾಜಕತೆಗೆ ಕೊನೆಗೂ ಅಲ್ಲಿನ ಪ್ರಜ್ಞಾವಂತ ಮತದಾರ ಅಂತ್ಯ ಹಾಡಿದ್ದಾರೆ.ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವಿನ ಮೂಲಕ ಡಾ.ಶ್ಯಾಮ ಪ್ರಸಾದ್ ಮುಖರ್ಜಿಯವರ ಕನಸು ಇಂದು ನನಸಾಗಿದೆ ಎಂದು ಶಾಸಕ ಸುನಿಲ್ ಕುಮಾರ್ ಹೇಳಿದ್ದಾರೆ.
ಬಾಂಗ್ಲಾದೇಶದ ಮತಾಂಧರಿಗೆ ದೇಶದ ಹೆಬ್ಬಾಗಿಲು ತೆರೆದು ಸ್ವಾಗತಿಸಿ ಅವರನ್ನೇ ತನ್ನ ಮತಬ್ಯಾಂಕ್ ಆಗಿಸಿಕೊಂಡು ಕ್ರೂರ ದಬ್ಬಾಳಿಕೆ ನಡೆಸುತ್ತಿದ್ದ ಮಮತಾ ಬ್ಯಾನರ್ಜಿಯವರ ದುಷ್ಟ ಅಟ್ಟಹಾಸವನ್ನು ಮಟ್ಟಹಾಕುವಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಮತ್ತು ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನಬಿನ್ ಅವರ ನಿರಂತರ ಪ್ರಯತ್ನ ಸಫಲವಾಗಿದೆ.ಈ ಮೂಲಕ ತೃಣಮೂಲ ಕಾಂಗ್ರೆಸ್ ನ ಗೂಂಡಾಗಿರಿ ರಾಜಕಾರಣಕ್ಕೆ ಕೊನೆ ಹಾಡಲಾಗಿದೆ. ಅದೇ ರೀತಿ ಆಸ್ಸಾಂನಲ್ಲಿ ಸತತ ಮೂರನೇ ಬಾರಿಗೆ ಬಿಜೆಪಿ ಗೆಲುವು ಸಾಧಿಸಿದೆ. ಪುದುಚೇರಿಯಲ್ಲಿ NDA ಗೆಲುವು ಅಭೂತಪೂರ್ವ. ಒಟ್ಟಾರೆ ಪಂಚರಾಜ್ಯಗಳ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದಕ್ಕೆ ಕಾರಣರಾದ ದೇವದುರ್ಲಭ ಕಾರ್ಯಕರ್ತರ ಅವಿಶ್ರಾಂತ ಶ್ರಮಕ್ಕೆ ಸುನಿಲ್ ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.



.
.
.
.
.
.
.
.
.
.
.
.
.
.
.
.
.
.
.
.
