Share this news

ಕಾರ್ಕಳ: ಸಮಾಜದ ಮುಖ್ಯವಾಹಿನಿಯಲ್ಲಿದ್ದುಕೊಂಡು ಅಸಮಾನತೆ ಹಾಗೂ ನ್ಯಾಯಕ್ಕಾಗಿ ಹೋರಾಟ ನಡೆಸಬೇಕೇ ಹೊರತು ಶಸ್ತಾçಸ್ತç ಹಿಡಿದು ರಕ್ತಕ್ರಾಂತಿಯಿAದ ಏನೂ ಸಾಧಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ 6 ಜನ ನಕ್ಸಲರು ಬಂದೂಕು ಬಿಟ್ಟು ಸರ್ಕಾರಕ್ಕೆ ಶರಣಾಗುತ್ತಿರುವುದು ಸ್ವಾಗತಾರ್ಹ ಎಂದು ಮಲೆಕುಡಿಯ ಸಂಘದ ರಾಜ್ಯಾಧ್ಯಕ್ಷ ಶ್ರೀಧರ್ ಗೌಡ ಈದು ಹೇಳಿದ್ದಾರೆ.

ಕುದುರೆಮುಖ ರಾಷ್ಟಿçÃಯ ಉದ್ಯಾನವನ ಘೋಷಣೆಯಾದ ಸಂದಭದಲ್ಲಿ ಅರಣ್ಯ ಸಂರಕ್ಷಣೆ ಕಾಯಿದೆಯಿಂದ ಜನರನ್ನು ಒಕ್ಕಲೆಬ್ಬಿಸುವ ಪ್ರಯತ್ನಗಳು ನಡೆದಾಗ ಅಂದಿನ ಕಾಲಘಟದಲ್ಲಿ ಒಂದಷ್ಟು ಜನ ಸರ್ಕಾರದ ಜನವಿರೋಧಿ ನೀತಿಯ ವಿರುದ್ಧ ಬಂದೂಕು ಹಿಡಿಯುವ ಮೂಲಕ ಸರ್ಕಾರದ ಹಾಗೂ ವ್ಯವಸ್ಥೆಯ ವಿರುದ್ಧ ಸಂಘರ್ಷಕ್ಕೆ ಇಳಿದಿದ್ದರು. ಆದರೆ ಇಂತಹ ಹೋರಾಟಗಳು ನ್ಯಾಯಸಮ್ಮತವಲ್ಲ. ನಮ್ಮ ಹಕ್ಕುಗಳು ಹಾಗೂ ಅಸಮಾನತೆ, ಸಾಮಾಜಿಕ ನ್ಯಾಯಕ್ಕಾಗಿ ಸಮಾಜದಲ್ಲಿದ್ದುಕೊಂಡೇ ಹೋರಾಟ ನಡೆಸಲು ಅವಕಾಶಗಳಿವೆ. ಆದ್ದರಿಂದ ನಕ್ಸಲರಿಗೆ ಇಂತಹ ಸಮಾಜವಿರೋಧಿ ಹೋರಾಟದಿಂದ ಏನೂ ಸಾಧಿಸಲು ಸಾಧ್ಯವಿಲ್ಲ ಎಂದು ಅರಿತು ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.


ಎರಡು ದಶಕಗಳಿಂದ ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶದಿಂದ ನಕ್ಸಲ್ ಚಟುವಟಿಕೆ ಸಂಪೂರ್ಣವಾಗಿ ನಿರ್ಮೂಲನೆಯಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರವು ಶರಣಾಗತಿಯಾದ ನಕ್ಸಲರ ಬೇಡಿಕೆಗಳಿಗೆ ಪೂರಕವಾಗಿ ಸ್ಪಂದಿಸಬೇಕು.ಕಟ್ಟುನಿಟ್ಟಿನ ಅರಣ್ಯ ಕಾಯಿದೆಯನ್ನು ಸಡಿಲಿಸಿ ಆ ಭಾಗದಲ್ಲಿ ನೆನೆಗುದಿಗೆ ಬಿದ್ದಿರುವ ಮೂಲಸೌಕರ್ಯಗಳು ಹಾಗೂ ಅಭಿವೃದ್ಧಿ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು, ಮಾತ್ರವಲ್ಲದೇ ಶರಣಾದ ನಕ್ಸಲರ ಕುಟುಂಬಗಳಿಗೆ ಅಥವಾ ಅರಣ್ಯವಾಸಿಗಳಿಗೆ ಅಧಿಕಾರಿಗಳು ಕಿರುಕುಳ ನೀಡದೇ ಅರಣ್ಯವಾಸಿಗಳ ಆಶೋತ್ತರಗಳಿಗೆ ಸ್ಪಂದಿಸಬೇಕಿದೆ ಎಂದು ಶ್ರೀಧರ್ ಗೌಡ ಹೇಳಿದ್ದಾರೆ

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *