ಹೆಬ್ರಿ: ಕಳೆದ 8 ವರ್ಷಗಳಿಂದ ಕಾಲುನೋವಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಜ.12 ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೆಬ್ರಿ ಚಾರ ಗ್ರಾಮದ ನಿವಾಸಿ ಶೇಖರ (47) ಆತ್ಮಹತ್ಯೆ ಮಾಡಿಕೊಂಡವರು.
ಶೇಖರ ಅವರಿಗೆ ಸುಮಾರು 8 ವರ್ಷಗಳಿಂದ ಎರಡು ಕಾಲಿನ ಮಂಡಿಯಿAದ ಕೆಳಗೆ ರಕ್ತ ಸಂಚಾರವಾಗದೆ ನೋವಿನಿಂದ ಬಳಲುತ್ತಿದ್ದು ಈ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆ, ಉದ್ಯಾವರ, ಹಾಗೂ ಮಣಿಪಾಲ ಕೆ, ಎಂ,ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿದರೂ ಗುಣ ಮುಖವಾಗಿರಲಿಲ್ಲ. ಇದೇ ಕಾರಣಕ್ಕೆ ಬೇಸತ್ತಿದ್ದ ಅವರು ಜ.12 ರಂದು ತನ್ನ ಹೆಂಡತಿ ಅಂಗಡಿಗೆ ಹೋಗಿದ್ದ ವೇಳೆ ಮನೆಯ ಅಡುಗೆ ಮನೆಯ ಮಾಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತು ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.