
ಹೆಬ್ರಿ,ಜು.03: ಹೆಬ್ರಿ ತಾಲೂಕಿನ ಕುಚ್ಚೂರಿನ ಬಾಗಲ್ ಜೆಡ್ಡು ಎಂಬಲ್ಲಿ ಮನೆಯಲ್ಲಿ ಗಲಾಟೆ ಮಾಡಿಕೊಂಡು ಹೋಗಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದಾರೆ.
ಕುಚ್ಚೂರಿನ ಕುಶಾಲ ಶೆಟ್ಟಿ(55ವ) ಎಂಬವರು ಜೂ.28 ರಂದು ಮನೆಯಲ್ಲಿ ತನ್ನ ಮಗನೊಂದಿಗೆ ಗಲಾಟೆ ಮಾಡಿ ಕೋಪದಿಂದ ಮನೆ ಬಿಟ್ಟು ಹೋಗುವುದಾಗಿ ಹೇಳಿ ಬಟ್ಟೆ ಬರೆಯೊಂದಿಗೆ ತನ್ನ ಓಮ್ನಿ ಕಾರಿನಲ್ಲಿ ಹೋದವರು ಮರಳಿ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.
ಅವರನ್ನು ಪರಿಚಯಸ್ಥರು ಮತ್ತು ಸಂಬAಧಿಕರ ಮನೆಯಲ್ಲಿ ಹುಡುಕಾಡಿ ಎಲ್ಲಿಯೂ ಪತ್ತೆಯಾಗದ ಕಾರಣ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.



.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
