

ಹೆಬ್ರಿ,ಸೆ.04: ವಿವಿಧ ಮೂಲಸೌಕರ್ಯಗಳಿಗೆ ಆಗ್ರಹಿಸಿ ಹೆಬ್ರಿ ಗ್ರಾಮದ ಸಾಂತೊಳ್ಳಿ ಮಣಿಗುಂಡಿ, ಜಡ್ಡು ಗ್ರಾಮಗಳ ಜನರು ಹೆಬ್ರಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಸಾಂತೊಳ್ಳಿ ಮಣಿಗುಂಡಿಗೆ ಹೋಗುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು,ಕಲ್ಲು ಹೊಂಡ ಕೆಸರಿನಿಂದ ಕೂಡಿದ್ದು, ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ ಮಾತ್ರವಲ್ಲದೇ ನಡೆದುಕೊಂಡು ಹೋಗುವುದಕ್ಕೂ ಸಾಧ್ಯವಿಲ್ಲದಂತಾಗಿದೆ.
ಈ ಭಾಗದಿಂದ ಪ್ರತಿನಿತ್ಯ ಡೈರಿಗೆ ಹಾಲು ಕೊಡುವವರು ಶಾಲೆಗೆ ಹೋಗುವ ಮಕ್ಕಳು ಹಿರಿಯರು ತಮ್ಮಲ್ಲಿ ವಾಹನವಿದ್ದರೂ ಹದಗೆಟ್ಟ ರಸ್ತೆಯಲ್ಲಿ ನಡೆದುಕೊಂಡೇ ಸಾಗಬೇಕಾದ ದುಸ್ಥಿತಿ ಎದುರಾಗಿದೆ. ಮಳೆಗಾಲದಲ್ಲಿ ಮಣಿಗುಂಡಿ ಹೊಳೆಯು ತುಂಬಿ ಹರಿಯುತ್ತದೆ.ಸೇತುವೆ ಇಲ್ಲದ ಕಾರಣದಿಂದ ಜೀವದ ಹಂಗು ತೊರೆದು ಹೊಳೆ ದಾಟಬೇಕಾದ ಪರಿಸ್ಥಿತಿಯಿದೆ.ತುರ್ತು ಸಂದರ್ಭದಲ್ಲಿ ರಸ್ತೆ ಹಾಗೂ ಸೇತುವೆ ಇಲ್ಲದ ಹಿನ್ನಲೆಯಲ್ಲಿ ಬಾಡಿಗೆ ವಾಹನಗಳು ಬರುವುದಿಲ್ಲ.ಮಾತ್ರವಲ್ಲದೇ ಮೊಬೈಲ್ ನೆಟ್ವರ್ಕ್ ಸಂಪರ್ಕ ಇಲ್ಲದೆ ತುಂಬಾ ತೊಂದರೆಯಾಗುತ್ತಿದೆ. ಮೂಲಭೂತ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದರು, ಯಾವುದೇ ಪ್ರಯೋಜನವಾಗದ ಹಿನ್ನಲೆಯಲ್ಲಿ ತಹಶೀಲ್ದಾರ್ ಗೆ ಮನವಿ ಸಲ್ಲಿಸದರು.
ಈ ಸಂದರ್ಭದಲ್ಲಿ ರಜಿನಿ, ಮಂಜುನಾಥ್, ರಮೇಶ್ ಕುಲಾಲ್, ಕರುಣಾಕರ ಹೆಗಡೆ, ಕೃಷ್ಣ ಹೆಗಡೆ, ಬೇಬಿ, ಸುಂದರ ಕುಲಾಲ್, ಲಲಿತ, ರವೀಂದ್ರ ಕುಲಾಲ್, ಸೀನ ಕೊಲಾಲ್, ನಾರಾಯಣ, ಅಮ್ಮಣಿ, ಅರವಿಂದ್ ಆಚಾರ್ಯ ಮುಂತಾದವರು ಹಾಜರಿದ್ದರು.





.
.
.
.
.
.
.
.
.
.
.
.
.
.
.
.
.
.
.
.
