ಕಾರ್ಕಳ: ಕಾರ್ಕಳದ ಸರ್ಕಾರಿ ಆಸ್ಪತ್ರೆಯ ಬಳಿ ನೂತನವಾಗಿ ನಿರ್ಮಾಣವಾದ ಪ್ರೆöÊಮ್ ಪ್ರಾಪರ್ಟಿಸ್ ಮಾಲೀಕತ್ವದ ಪ್ರೈಮ್ ಸಿಟಿ ಸೆಂಟರ್ ವಾಣಿಜ್ಯ ಸಂಕೀರ್ಣವು ಜ.12 ರಂದು ಶುಭಾರಂಭಗೊAಡಿದೆ.
ಕಾರ್ಕಳ: ಶಾಸಕ ಸುನಿಲ್ ಕುಮಾರ್ ಪ್ರೈಮ್ ಸಿಟಿ ಸೆಂಟರ್ ಅನ್ನು ಉದ್ಘಾಟಿಸಿ ಮಾತನಾಡಿ, ಕಾರ್ಕಳದ ಬೆಳವಣಿಗೆಗೆ ಪ್ರೈಮ್ ಸಿಟಿ ಸೆಂಟರ್ ಪೂರಕವಾದ ಕೊಡುಗೆಯನ್ನು ನೀಡಲಿದೆ. ಅಭಿವೃದ್ಧಿ ಕೇವಲ ಸರ್ಕಾರದಿಂದ ಮಾತ್ರ ಸಾಧ್ಯವಿಲ್ಲ. ಇದರ ಜೊತೆಗೆ ಖಾಸಗಿ ಪಾಲುದಾರಿಕೆಯು ಕೂಡಾ ಮುಖ್ಯವಾಗಿದೆ. ಕಾರ್ಕಳವು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಇಂತಹ ವಾಣಿಜ್ಯ ಸಂಕೀರ್ಣಗಳಿಂದ ಆರ್ಥಿಕ ಚಟುವಟಿಕೆಗಳಿಗೆ ಬಲ ಸಿಗಲಿದೆ. ಪ್ರೈಮ್ ಸಿಟಿ ಸೆಂಟರ್‌ನಲ್ಲಿ ಐಟಿ ಕಂಪೆನಿಯು ಕಾರ್ಯಾರಂಭ ಮಾಡಿದ್ದು, ಸ್ಥಳೀಯ ಮಟ್ಟದ ಯುವಕರಿಗೆ ಉದ್ಯೋಗವಕಾಶ ಸೃಷ್ಟಿಯಾಗಲಿದೆ ಎಂದರು.
ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ದೇಶಕ್ಕೆ ಅತೀ ಹೆಚ್ಚು ಇಂಜಿನಿಯರ್‌ಗಳನ್ನು ಕೊಡುವ ರಾಜ್ಯ ಕರ್ನಾಟಕವಾಗಿದೆ. ಇದೀಗ ಬೆಳೆಯುತ್ತಿರುವ ಕಾರ್ಕಳಕ್ಕೆ ಐಟಿ ಕಂಪೆನಿ ಬಂದಿರುವುದು ಗ್ರಾಮೀಣ ಭಾಗದ ಇಂಜಿನಿಯರಿAಗ್ ಪದವಿ ಮಾಡಿರುವ ಯುವಕ ಯುವತಿಯರಿಗೆ ವರದಾನವಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ನ್ಯಾಯವಾದಿ ಎಂ.ಕೆ ವಿಜಯ ಕುಮಾರ್, ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಎಂ.ಎನ್ ರಾಜೇಂದ್ರ ಕುಮಾರ್, ನ್ಯಾಯವಾದಿ ಐ.ಆರ್ ಬಲ್ಲಾಳ್, ಪುರಸಭೆ ಅಧ್ಯಕ್ಷ ಯೋಗೀಶ್ ದೇವಾಡಿಗ, ಮುಖ್ಯಾಧಿಕಾರಿ ರೂಪಾ ಟಿ ಶೆಟ್ಟಿ, ಪುರಸಭೆ ಸದಸ್ಯೆ ಸುಮಾ ಕೇಶವ್ ಉಪಸ್ಥಿತರಿದ್ದರು.
ಸಂಸ್ಥೆಯ ಪ್ರವರ್ತಕರಾದ ಮಹಾವೀರ್ ಹೆಗ್ಡೆ, ಎಂ.ಕೆ ಸುವೃತ್ ಕುಮಾರ್, ಸಂಪತ್ ಜೈನ್ ಅತಿಥಿಗಳನ್ನು ಸ್ವಾಗತಿಸಿ ಗೌರವಿಸಿದರು.