ಕಾರ್ಕಳ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಸೋಮವಾರ ಮರ್ಣೆ ಗ್ರಾಮ ಪಂಚಾಯತಿಗೆ ಭೇಟಿ ನೀಡಿದರು ಸಾರ್ವಜನಿಕರಿಂದ ಸ್ವೀಕರಿಸಿ ಮಾತನಾಡಿದರು.
ಜಲಜೀವನ್ ಮಿಷನ್ ಪ್ರಗತಿ ಕುರಿತು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಕಾರಿ ಅಭಿಯಂತರ ಸುರೇಂದ್ರನಾಥ್ ಸಂಸದರಿಗೆ ಮಾಹಿತಿ ನೀಡಿ,ಮರ್ಣೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈಗಾಗಲೇ1314 ನಳ್ಳಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಸಧ್ಯಕ್ಕೆ ಬೋರ್ ವೆಲ್ ಹಾಗೂ ಸ್ಥಳೀಯ ನೀರಿನ ಮೂಲ ಬಳಸಿ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ. ವರಾಹಿ ಯೋಜನೆಯ ಪೈಪ್ ಲೈನ್ ಹಾಗೂ ಟ್ಯಾಂಕ್ ಗಳ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಡೀಮ್ಡ್ ಹಾಗೂ ಮೀಸಲು ಅರಣ್ಯದ ಕುರಿತು ಅರಣ್ಯ ಇಲಾಖೆ ಅನುಮತಿ ಸಿಕ್ಕ ಬಳಿಕ ಕಾಮಗಾರಿ ಮುಂದುವರಿಸಿ, ಮುಂದಿನ ಸೆಪ್ಟೆಂಬರ್ ಒಳಗಾಗಿ ವರಾಹಿ ಯೋಜನೆ ಕಾಮಗಾರಿ ಮುಕ್ತಾಯದ ಬಳಿಕ ವರಾಹಿ ನೀರು ಪೂರೈಕೆಯಾಗಲಿದೆ ಎಂದರು.

ಇನ್ನುಳಿದಂತೆ 9/11 ಕುರಿತು ಪ್ರಾಧಿಕಾರದ ನಿರಾಕ್ಷೇಪಣಾ ಪತ್ರ ಪಡೆಯಲು ಜನರು ಹೆಣಗಾಟ ನಡೆಸುತ್ತಿದ್ದು ಇದರಿಂದ ಸಮಸ್ಯೆ ಉಂಟಾಗುತ್ತಿದೆ.ಆದ್ದರಿಂದ ಪ್ರಾಧಿಕಾರದ ಅನುಮತಿ ಕೈಬಿಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಮರಳಿನ ಸಮಸ್ಯೆ ಕುರಿತು ಗ್ರಾಮಸ್ಥರು ಸಂಸದರ ಗಮನಕ್ಕೆ ತಂದರು.ಮರಳಿನ ಸಮಸ್ಯೆಯಿಂದ ಬಡವರಿಗೆ ತೊಂದರೆಯಾಗುತ್ತಿದೆ ಪೊಲೀಸರು ಕಂಡಕಂಡಲ್ಲಿ ಲಾರಿಗಳನ್ನು ಸೀಜ್ ಮಾಡುತ್ತಾರೆ ಇದರಿಂದ ಮರಳಿನ ಕೊರತೆ ಸೃಷ್ಟಿಯಾಗಿದೆ ಎಂದು ಆರೋಪಿಸಿದರು.ಇದಕ್ಕೆ ಉತ್ತರಿಸಿದ ಸಂಸದರು,ಸರ್ಕಾರ ನಿಗಪಡಿಸಿದ ದರದಲ್ಲಿ ಮರಳು ಸಿಗುತ್ತಿಲ್ಲ ಮರಳು ವ್ಯಾಪಾರೀಕಣದಿಂದ ಈ ಸಮಸ್ಯೆ ಉದ್ಭವಿಸಿದೆ ಎಂದರು.

ಈ ಸಂದರ್ಭದಲ್ಲಿ ಮರ್ಣೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಭಾವತಿ ನಾಯಕ್, ಉಪಾಧ್ಯಕ್ಷೆ ಮೇರಿ ಮಸ್ಕರೇನ್ಹಸ್, ಕಾರ್ಕಳ ತಹಸೀಲ್ದಾರ್ ಪ್ರದೀಪ್ ಕುಮಾರ್ ಆರ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶಶಿಧರ್ ಉಪಸ್ಥಿತರಿದ್ದರು
ಪಿಡಿಓ ತಿಲಕ್ ರಾಜ್ ಸ್ವಾಗತಿಸಿ ಗ್ರಾಮ ಪಂಚಾಯತ್ ಸದಸ್ಯ ರಾಘವೇಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು
ಈ ಸಂದರ್ಭದಲ್ಲಿ ಮರ್ಣೆ ಪಂಚಾಯತ್ ವತಿಯಿಂದ ಸಂಸದರಿಗೆ ಸನ್ಮಾನಿಸಲಾಯಿತು