Share this news

ಕಾರ್ಕಳ, ಮೇ.15: ಜಾಗತಿಕ ಮಟ್ಟದಲ್ಲಿ ಯುದ್ಧದ ಪರಿಸ್ಥಿತಿಯಿಂದ ಇಂದಿನ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಯನ್ನು ಗಮನಿಸಿದಾಗ ಜನಸಾಮಾನ್ಯರ ಬದುಕು ದಿನದಿಂದ ದಿನಕ್ಕೆ ಕಷ್ಟಕರವಾಗುತ್ತಿದೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ಏರಿಕೆ, ಅಗತ್ಯ ವಸ್ತುಗಳ ದುಬಾರಿ, ಉದ್ಯೋಗದ ಅಭಾವ ಮತ್ತು ಆರ್ಥಿಕ ಕುಸಿತ ಜನರನ್ನು ಸಂಕಷ್ಟದ ಅಂಚಿಗೆ ತಳ್ಳಿವೆ. ಇಂತಹ ಸಂದರ್ಭದಲ್ಲಿ ಸರ್ಕಾರ ಮತ್ತು ರಾಜಕೀಯ ನಾಯಕರು ಜನರಿಗೆ ಜೀವನ ಶೈಲಿಯನ್ನು ಬದಲಿಸಿಕೊಂಡು “ಸಂಕಷ್ಟಕ್ಕೆ ಹೊಂದಿಕೊಳ್ಳಿ” ಎಂಬ ಸಲಹೆಗಳನ್ನು ನೀಡುವುದಕ್ಕಿಂತ ಮೊದಲು ತಮ್ಮದೇ ಬದುಕಿನಲ್ಲಿ ತ್ಯಾಗ ಮತ್ತು ಹೊಣೆಗಾರಿಕೆಯ ಉದಾಹರಣೆಯನ್ನು ತೋರಿಸಬೇಕು.

ಜನಪ್ರತಿನಿಧಿಗಳಾದ ಸಂಸದರು ಮತ್ತು ಶಾಸಕರು ಜನರ ಸೇವೆಗಾಗಿ ಆಯ್ಕೆಯಾಗಿರುವವರು. ಆದ್ದರಿಂದ ಅವರು ಮೊದಲು ತಮ್ಮ ವೇತನ, ಅನಾವಶ್ಯಕ ಸರ್ಕಾರಿ ಸೌಲಭ್ಯಗಳು, ವಿಶೇಷ ಭತ್ಯೆಗಳು ಮತ್ತು ಐಷಾರಾಮಿ ವ್ಯವಸ್ಥೆ ಕಡಿಮೆ ಮಾಡುವ ಮೂಲಕ ದೇಶದ ಸಂಕಷ್ಟದಲ್ಲಿ ಜನರ ಜೊತೆ ನಿಲ್ಲಬೇಕು ಎಂದು ಬೆಳ್ಳಿಪಾಡಿ ನೇಮಿರಾಜ್ ರೈ ಆಗ್ರಹಿಸಿದ್ದಾರೆ.

ಜನಸಾಮಾನ್ಯರು ತೆರಿಗೆ ಕಟ್ಟಿದ ಹಣದಿಂದಲೇ ಜನಪ್ರತಿನಿಧಿಗಳಿಗೆ ಎಲ್ಲಾ ಸೌಲಭ್ಯಗಳು ನೀಡಲಾಗುತ್ತಿದೆ ಎಂಬುದನ್ನು ಮರೆಯಬಾರದು. ದೇಶ ಆರ್ಥಿಕ ಸಂಕಷ್ಟದಲ್ಲಿರುವಾಗ ಜನರ ಮೇಲೆ ಮಾತ್ರ ತ್ಯಾಗದ ಹೊರೆ ಹಾಕುವುದು ನ್ಯಾಯಸಮ್ಮತವಲ್ಲ. ಅದೇ ರೀತಿ ಉನ್ನತ ಸರ್ಕಾರಿ ಅಧಿಕಾರಿಗಳೂ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಪ್ರದರ್ಶಿಸಬೇಕಾಗಿದೆ. ಸಾರ್ವಜನಿಕ ಸೇವೆಯಲ್ಲಿ ಇರುವವರು ತಮ್ಮ ಸೌಲಭ್ಯಗಳನ್ನು ಕಡಿಮೆ ಮಾಡಿಕೊಂಡು ಸರಳ ಜೀವನ ನಡೆಸುವ ಮೂಲಕ ಜನರಿಗೆ ನೈತಿಕ ಮಾರ್ಗದರ್ಶನ ನೀಡಬಹುದು. ದೇಶದ ಸಂಕಷ್ಟದ ಹೊತ್ತಿನಲ್ಲಿ ಆಡಳಿತ ವರ್ಗ ಮತ್ತು ರಾಜಕೀಯ ವರ್ಗ ತ್ಯಾಗದ ಮನೋಭಾವ ತೋರಿದಾಗ ಮಾತ್ರ ಜನರಲ್ಲಿ ವಿಶ್ವಾಸ ಮೂಡುತ್ತದೆ.

ಈ ಹಿನ್ನೆಲೆಯಲ್ಲಿ ಅತ್ಯಂತ ಮುಖ್ಯವಾದ ವಿಚಾರವೆಂದರೆ ಸಂಸದರು ಮತ್ತು ಶಾಸಕರಿಗೆ ಅವಧಿ ಮುಗಿದ ನಂತರ ಜೀವನಪರ್ಯಂತ ನೀಡಲಾಗುವ ಪಿಂಚಣಿ ವ್ಯವಸ್ಥೆ. ಸಾಮಾನ್ಯ ಸರ್ಕಾರಿ ನೌಕರರು ದೀರ್ಘಕಾಲ ಸೇವೆ ಸಲ್ಲಿಸಿದ ನಂತರವೇ ಪಿಂಚಣಿಗೆ ಅರ್ಹರಾಗುತ್ತಾರೆ. ಆದರೆ ಕೆಲವೇ ವರ್ಷಗಳ ಕಾಲ ಶಾಸಕರಾಗಿದ್ದ ಅಥವಾ ಸಂಸದರಾಗಿದ್ದ ವ್ಯಕ್ತಿಗಳಿಗೆ ಜೀವಮಾನಪರ್ಯಂತ ಪಿಂಚಣಿ ನೀಡುವುದು ನ್ಯಾಯಯುತವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದು ಜನರ ತೆರಿಗೆ ಹಣದ ಮೇಲಿನ ಅನಗತ್ಯ ಭಾರವಾಗಿದೆ.

ಜನ ಸೇವಕರಾಗಿರುವ ರಾಜಕಾರಣಿಗಳು ತಮ್ಮ ಸೇವೆಯನ್ನು ಲಾಭದ ಉದ್ಯೋಗವನ್ನಾಗಿ ಪರಿವರ್ತಿಸಿ ಕೊಳ್ಳಬಾರದು. ರಾಜಕೀಯವೆಂಬುದು ಜನಸೇವೆಯ ಮಾರ್ಗವಾಗಬೇಕೇ ಹೊರತು ಜೀವಮಾನಪರ್ಯಂತ ಸೌಲಭ್ಯಗಳನ್ನು ಪಡೆಯುವ ವ್ಯವಸ್ಥೆಯಾಗಬಾರದು, ಆದ್ದರಿಂದ ಸಂಸದರು ಮತ್ತು ಶಾಸಕರಿಗೆ ನೀಡಲಾಗುವ ಪಿಂಚಣಿ ವ್ಯವಸ್ಥೆಯನ್ನು ರದ್ದುಗೊಳಿಸುವಂತೆ ಕಾನೂನು ತಿದ್ದುಪಡಿ ತರಬೇಕಾಗಿದೆ. ಈ ಕ್ರಮದಿಂದ ಸರ್ಕಾರದ ಅನಗತ್ಯ ವೆಚ್ಚ ಕಡಿಮೆಯಾಗುವುದಲ್ಲದೆ ರಾಜಕೀಯ ಕ್ಷೇತ್ರದಲ್ಲಿ ನೈತಿಕತೆ ಮತ್ತು ಹೊಣೆಗಾರಿಕೆ ಹೆಚ್ಚುತ್ತದೆ ಎಂದು ನೇಮಿರಾಜ್ ರೈ ಹೇಳಿದ್ದಾರೆ.

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

Leave a Reply

Your email address will not be published. Required fields are marked *