ಕಾರ್ಕಳ: ಯಕ್ಷ ಕಲಾರಂಗ ರಿ. ಕಾರ್ಕಳದ ಹದಿಮೂರನೆಯ ಕಿಶೋರ ಯಕ್ಷೋತ್ಸವ ಜ. 4 ಮತ್ತು 5 ರಂದು ಕಾರ್ಕಳ ಪೆರ್ವಾಜೆ ಸುಂದರ ಪುರಾಣಿಕ ಪ್ರೌಢ ಶಾಲೆಯಲ್ಲಿ ಜರಗಲಿದ್ದು, ಅದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಅನಂತಶಯನ ದೇವಸ್ಥಾನದಲ್ಲಿ ಜರುಗಿತು.
ಕಲಾಪೋಷಕ ರೆಂಜಾಳ ವೇ. ಮೂ. ನಾರಾಯಣ ಭಟ್ ರವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಮುಖ್ಯ ಅತಿಥಿಗಳಾಗಿ ಪುರುಷೋತ್ತಮ ಭಟ್ ಹಾಗೂ ಸಂಸ್ಥೆಯ ಅದ್ಯಕ್ಷರಾದ ವಿಜಯ ಶೆಟ್ಟಿ, ಸಂಚಾಲಕರಾದ ಪ್ರೊ. ಪದ್ಮನಾಭ ಗೌಡ, ಖಜಾಂಚಿ ಶ್ರೀವರ್ಮ ಅಜ್ರಿ, ಕಾರ್ಯದರ್ಶಿ ಮಹಾವೀರ ಪಾಂಡಿ ಕಾಂತಾವರ, ಶಿವಸುಭ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.