ಕಾರ್ಕಳ: ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ಪುಣ್ಯಕ್ಷೇತ್ರದಲ್ಲಿ ಸಾವಿರಾರು ಭಕ್ತರು ಹರಕೆಗಳನ್ನು ಈಡೇರಿಸಲು ಮತ್ತು ಬಿನ್ನಹಗಳನ್ನು ಸಲ್ಲಿಸಲು ಆಗಮಿಸಿದರು. ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನಗಳು, ಮತ್ತು ನಾಟಕದ ಪ್ರದರ್ಶನ ದಿನದ ಮುಖ್ಯ ವಿಧಿ ಆಚರಣೆಗಳಾಗಿದ್ದವು.
ಬಸಿಲಿಕಾದ ವಠಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಬೆಳಕು ಮತ್ತು ಅಲಂಕಾರಗಳಿAದ ಆಕರ್ಷಕವಾಗಿ ಸಿಂಗಾರಗೊAಡಿದ್ದವು. ಸರ್ವಧರ್ಮ ಸೌಹಾರ್ದತೆಯನ್ನು ಪ್ರತಿಬಿಂಬಿಸುವ ಧಾರ್ಮಿಕ
ವಿಧಿಗಳಲ್ಲಿ ವಿಭಿನ್ನ ಧರ್ಮಗಳ ಜನರು ಭಾಗವಹಿಸಿದರು.
ಮೂರು ಬಲಿಪೂಜೆಗಳು ನಡೆದಿದ್ದು, ಪ್ರಮುಖ ಬಲಿಪೂಜೆಯನ್ನು ಉಡುಪಿ ಧರ್ಮಕ್ಷೇತ್ರದ ಶ್ರೇಷ್ಟ ಗುರು ಅ/ವಂ/ ಮೊನ್ಸಿಜ್ಞೋರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಅರ್ಪಿಸಿದರು. ಪ್ರಭುವಿನಲ್ಲಿ ಭರವಸೆ ಇರಿಸಿ ಕ್ರೈಸ್ತ ಬದುಕನ್ನು ಆಶಾದಾಯಕವಾಗಿ ಬದುಕಬೇಕು. ಕ್ರಿಸ್ತನಲ್ಲಿ ಒಂದಾಗಿ ಭರವಸೆಯ ಯಾತ್ರಾರ್ಥಿಗಳಾಗಿ ನಮ್ಮ ಹೆಜ್ಜೆಯನ್ನಿಡುತ್ತಾ ಸಾಗಬೇಕೆಂದು ಬೋಧಿಸಿದರು.
ಸಾಯಂಕಾಲ ಸಂತ ಲಾರೆನ್ಸ್ ರ ಜೀವನ ಆಧಾರಿತ “ಲಾರೆನ್ಸ್ ಮಹಾತ್ಮೆ” ಯಕ್ಷಗಾನ ಅತಿಥಿ ಪಂಗಡದಿAದ ಪ್ರದರ್ಶಿಸಲಾಯಿತು. ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಆಗಮಿಸಿ
ವಾರ್ಷೀಕ ಮಹೋತ್ಸವಕ್ಕೆ ಶುಭಕೋರಿದರು.
ಬಲಿಪೂಜೆಗಳ ಸಮಯದಲ್ಲಿ ಭಕ್ತರಿಗಾಗಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು. ಮೊದಲ ಬಲಿಪೂಜೆಯ ಕೊನೆಯಲ್ಲಿ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ವಂ.ಸ್ವಾಮಿ. ವಲೇರಿಯನ್ ಫೆರ್ನಾಂಡಿಸ್ ಅವರ “ಶಿಲುಬೆಯ ಹಾದಿ” ಮತ್ತು ಜಾರ್ಜ್ ಕ್ಯಾಸ್ತೆಲಿನೊ ಅವರ “ಕಾರ್ಯೆ ಸೊಭಾಣ್” ಎಂಬ ಪ್ರಮುಖ ಸಮಾರಂಭಗಳ ಕುರಿತಾದ ಪುಸ್ತಕ ಬಿಡುಗಡೆ ಮಾಡಿದರು.