Share this news

ಕಾರ್ಕಳ: ಕುಕ್ಕುಂದೂರು‌ ಸರ್ವಜ್ಞ ಸರ್ಕಲ್ ಬಳಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಲಾರಿ ತಪ್ಪಿಸಿಕೊಳ್ಳಲು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿಯನ್ನು ಕಾರು ಸಹಿತ ವಶಪಡಿಸಿಕೊಂಡಿದ್ದಾರೆ‌. ಬಂಧಿತ ಆರೋಪಿಯನ್ನು ಕುಕ್ಕುಂದೂರು ನಿವಾಸಿ ಸೈಯದ್ ಸೈಫ್ (22) ಎಂದು ಗುರುತಿಸಲಾಗಿದೆ.

ಕಾರ್ಕಳ ನಗರ ಠಾಣೆ ಪೊಲೀಸ್ ಉಪ ನಿರೀಕ್ಷಕ ಸಂದೀಪ್ ಕುಮಾರ್ ಶೆಟ್ಟಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಟಿಪ್ಪರ್ ಲಾರಿಯಲ್ಲಿ ಮರಳನ್ನು ಕಳವು ಮಾಡಿಕೊಂಡು ಸಾಗಾಟ ಮಾಡುತ್ತಿದ್ದು, ಕಳವು ಮಾಡಿದ ಮರಳನ್ನು ತಪ್ಪಿಸಿಕೊಂಡು ಹೋಗಲು ಅನುಕೂಲವಾಗುವಂತೆ ಇಲಾಖಾ ವಾಹನಕ್ಕೆ ಪ್ರತಿಬಂಧ ಉಂಟು ಮಾಡಿದ್ದನು. ಕಾರಿನಲ್ಲಿ‌ ಮರಳು‌ ಸಾಗಾಟದ ಲಾರಿಗೆ ಬೆಂಗಾವಲಿನಂತೆ ಚಲಾಯಿಸಿದ್ದು, ಟಿಪ್ಪರ್ ನ್ನು ಪೊಲೀಸರು ಬೆನ್ನಟ್ಟುವಾಗ ಒಮ್ಮೆಲೇ ಮುಂದೆ ಚಲಾಯಿಸಿಕೊಂಡು ಹೋಗಿ ಇಲಾಖಾ ವಾಹನ ಮುಂದೆ ಹೋಗದಂತೆ ತಡೆಯುಂಟು ಮಾಡಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿ, ಕಾರು ಚಾಲಕ ಸೈಯದ್ ಸೈಫ್ ನನ್ನು ಕಾರು ಸಹಿತ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಮಲು ಪದಾರ್ಥ ಗಾಂಜಾ ಸೇವನೆ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಈತ ಗಾಂಜ ಸೇವಿಸಿರುವುದು ದೃಢಪಟ್ಟಿದೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *