ಕಾರ್ಕಳ: ಕಳೆದ 30 ವರ್ಷಗಳ ಹಿಂದೆ ನಾಪತ್ತೆಯಾಗಿರುವ ತನ್ನ ಸಹೋದರನನ್ನು ಹುಡುಕಿಕೊಡುವಂತೆ ಉಡುಪಿಯ ಲಕ್ಷ್ಮಿನಾರಾಯಣ ಅವರು ಕಾರ್ಕಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಉಡುಪಿ ಕುಂಜಿಬೆಟ್ಟು ನಿವಾಸಿ ಲಕ್ಷ್ಮಿನಾರಾಯಣ ಅವರ ಸಹೋದರ ಗೋಪಾಲಕೃಷ್ಣ (68) ಅವರು ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮದ ಬಂಡಸಾಲೆ ಎಂಬಲ್ಲಿನ ತಮ್ಮ ಮನೆಯಿಂದ ಸುಮಾರು 30 ವರ್ಷಗಳ ಹಿಂದೆ ನಾಪತ್ತೆಯಾಗಿದ್ದರು. ಆ ಸಮಯದಲ್ಲಿ ಮನೆಯವರಿಗೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಬಹುದೆಂಬ ಮಾಹಿತಿ ಇಲ್ಲದೆ ಈಗ ಕಾರ್ಕಳ ನಗರ ಠಾಣೆಗೆ ನಾಪತ್ತೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.