ಕಾರ್ಕಳ: ಟ್ರೇಡಿಂಗ್ ಗೆ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ ಎಸಗಿರುವ ಪ್ರಕರಣ ಕಾರ್ಕಳದಲ್ಲಿ ನಡೆದಿದೆ.
ಅಜಯ್ ಎಂಬವರು ಕಳೆದ 2024ರ ಆಗಸ್ಟ್ 6 ರಂದು ರಾಜೇಶ್ವರಿ ಎಂಬವರ ಮೊಬೈಲ್‌ಗೆ ವಾಟ್ಸಾಪ್ ಕರೆ ಮಾಡಿ ಗೆ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ನೀಡುವುದಾಗಿ ನಂಬಿಸಿದ್ದರು. ಅವರು ಹೇಳಿದಂತೆ ಅವರು ಬೇರೆ ಬೇರೆ ಖಾತೆಯಿಂದ 66,27,643 ಲಕ್ಷ ರೂ. ಗಳನ್ನು ಹೂಡಿಕೆ ಮಾಡಿದ್ದರು. ಆದರೆ ಇದೀಗ ಅಜಯ್ ಹಣ ವಾಪಾಸ್ ನೀಡದೇ ವಂಚನೆ ಎಸಗಿದ್ದಾನೆಂದು ರಾಜೇಶ್ವರಿ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.